ಆ ಕಾರಣದಿಂದಲೇ ಚಿರು ಹಾಗೂ ಬಾಲಯ್ಯ ಸಿನೆಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಗೌತಮಿ…!

Follow Us :

ಸೀನಿಯರ್‍ ನಟಿ ಗೌತಮಿ ಸೌತ್ ಸಿನಿರಸಿಕರಿಗೆ ತಿಳಿದಂತಹ ನಟಿಯಾಗಿದ್ದಾರೆ. 80-90 ರ ದಶಕದಲ್ಲಿ ಆಕೆ ತೆಲುಗು ಹಾಗೂ ತಮಿಳು ಸ್ಟಾರ್‍ ನಟರ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅನೇಕ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅಂದಿನ ಕಾಲದಲ್ಲಿ ಕ್ಯೂಟ್ ಆಗಿ ಅನೇಕ ಅಭಿಮಾನಿಗಳನ್ನು ಪಡೆದುಕೊಂಡರು. ಸದ್ಯ ಆಕೆ ಕ್ಯಾರೆಕ್ಟರ್‍ ರೋಲ್ಸ್ ಗಳನ್ನು ಕಾಣಿಸಿಕೊಳ್ಳುತ್ತಾ ಆಗಾಗ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ಗೌತಮಿ 80-90 ರಲ್ಲಿ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಅಂದು ಕ್ರೇಜ್ ನಲ್ಲಿದ್ದ ಅನೇಕ ನಟಿಯರಗೆ ಪೈಪೋಟಿ ನೀಡುತ್ತಾ ಸ್ಟಾರ್‍ ನಟರಾದ ವೆಂಕಟೇಶ್, ನಾಗಾರ್ಜುನ್ ಸೇರಿದಂತೆ ಅನೇಕರ ಸಿನೆಮಾಗಳಲ್ಲಿ ನಟಿಸಿದ್ದರು. ಸಿನಿರಂಗದಲ್ಲಿ ಸಣ್ಣ ನಟರಿಂದ ಹಿಡಿದು ಸ್ಟಾರ್‍ ನಟರೊಂದಿಗೆ ಸಿನೆಮಾಗಳನ್ನು ಮಾಡಿದ ಗೌತಮಿ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ನಂದಮೂರಿ ಬಾಲಕೃಷ್ಣ ರವರ ಸಿನೆಮಾದಲ್ಲಿ ನಟಿಸಿರಲಿಲ್ಲ. ಇನ್ನೂ ಆಕೆ ಅವರ ಸಿನೆಮಾಗಳಲ್ಲಿ ಏಕೆ ನಟಿಸಲಿಲ್ಲ ಎಂಬ ವಿಚಾರವನ್ನು ಇದೀಗ ರಿವೀಲ್ ಮಾಡಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ಗೌತಮಿ ಮಾತನಾಡಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸೀನಿಯರ್‍ ನಟಿ ಗೌತಮಿ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಚಿರಂಜೀವಿ ಹಾಗೂ ಬಾಲಕೃಷ್ಣರವರ ಸಿನೆಮಾಗಳಲ್ಲಿ ನಟಿಸದೇ ಇರಲು ಕಾರಣವನ್ನು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಆಕೆ ಚಿರಂಜೀವಿ ಹಾಗೂ ಬಾಲಕೃಷ್ಣ ರವರ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ನನಗೆ ಬಂದಿತ್ತು. ಆದರೆ ಅಂದು ನನಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ  ಆ ನಟರ ಜೊತೆಗೆ ನಟಿಸಲು ಆಗಲಿಲ್ಲ. ಆ ಇಬ್ಬರೂ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶ ಬಂದರೂ ಸಹ ನಾನು ಬೇರೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದೆ. ಈ ಕಾರಣಗಳಿಂದ ನಾನು ಅವರ ಸಿನೆಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಪ್ರತಿ ವರ್ಷ 80ರ ದಶಕದ ಹಿರೋಯಿನ್ಸ್ ಗೆಟ್ ಟು ಗೆದರ್‍ ಮೂಲಕ ಭೇಟಿಯಾಗುತ್ತಿರುತ್ತಾರೆ. ಆದರೆ ಅವರು ಆಕೆಗಿಂತ ಸೀನಿಯರ್ಸ್ ಎಂಬ ಕಾರಣದಿಂದ ಆ ಕಾರ್ಯಕ್ರಮಕ್ಕೆ ಗೌತಮಿ ಹೋಗುವುದಿಲ್ಲವಂತೆ. ಇನ್ನೂ ಅನೇಕ ವಿಚಾರಗಳನ್ನು ಗೌತಮಿ ಹಂಚಿಕೊಂಡಿದ್ದಾರೆ. ಈ ಹಿಂದೆ ತಮಿಳು ಸ್ಟಾರ್‍ ನಟ ಕಮಲ್ ಹಾಸನ್ ಜೊತೆಗೆ ಸಹಜೀವನ ನಡೆಸಿದ್ದರು ಗೌತಮಿ, ಬಳಿಕ ಆತನೊಂದಿಗೆ ಬೇರೆಯಾದರು. ಸದ್ಯ ಚೆನೈನಲ್ಲಿ ಗೌತಮಿ ಸಿಂಗಲ್ ಆಗಿ ಜೀವನ ಸಾಗಿಸುತ್ತಿದ್ದಾರೆ.