Film News

NBK108 ಟೈಟಲ್ ಫಿಕ್ಸ್, ಭಗವಂತ್ ಕೇಸರಿಯಾಗಿ ಬಾಲಯ್ಯನ ಆರ್ಭಟ, ಟೈಟಲ್ ಪೋಸ್ಟರ್ ಸಖತ್ ವೈರಲ್….!

ತೆಲುಗು ಸಿನಿರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಬಳಿಕ ವರ್ಷದ ಆರಂಭದಲ್ಲಿ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು ಅವರ ಮುಂದಿನ ಸಿನೆಮಾಗಳ ಬಗ್ಗೆ ಭಾರಿ ನಿರೀಕ್ಷೆಯನ್ನು ಸಹ ಹುಟ್ಟಿಸಿದೆ. ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ NBK108 ಸಿನೆಮಾ ಸಹ ಭಾರಿ ನಿರೀಕ್ಷೆ ಮೂಡಿಸಿದೆ. ಇನ್ನೂ ಈ ಸಿನೆಮಾದ ಟೈಟಲ್ ಗಾಗಿ ಬಾಲಯ್ಯನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಚಿತ್ರತಂಡ ಸಿನೆಮಾದ ಟೈಟಲ್ ಪೋಸ್ಟರ್‍ ಬಿಡುಗಡೆ ಮಾಡಿದ್ದು, ಪೋಸ್ಟರ್‍ ಸಖತ್ ವೈರಲ್ ಆಗುತ್ತಿದೆ.

ತೆಲುಗು ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ರವರು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಜೋರಿನಲ್ಲಿದ್ದಾರೆ. ಅಖಂಡ, ವೀರಸಿಂಹಾರೆಡ್ಡಿ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಬಾಲಯ್ಯ ಇದೀಗ NBK108 ಟೈಟಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಅನೀಲ್ ರಾವಿಪೂಡಿ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚಿತ್ರತಂಡ ಸಿನೆಮಾ ಟೈಟಲ್ ಪೋಸ್ಟರ್‍ ರಿವೀಲ್ ಮಾಡಿದೆ. ಈ ಸಿನೆಮಾದ ಟೈಟಲ್ ಪೋಸ್ಟರ್‍ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಸಿನೆಮಾಗೆ ಭಗವಂತ್ ಕೇಸರಿ ಎಂಬ ಟೈಟಲ್ ಘೋಷಣೆ ಮಾಡಲಾಗಿದೆ. ಜೊತೆಗೆ ಸ್ಪೇಷಲ್ ಪೋಸ್ಟರ್‍ ರಿಲೀಸ್ ಮಾಡಲಾಗಿದೆ. ಟೈಟಲ್ ಜೊತೆಗೆ ಐ ಡೋಂಟ್ ಕೇರ್‍ ಎಂಬ ಕ್ಯಾಪ್ಷನ್ ಸಹ ಹಾಕಿದ್ದು, ಅಭಿಮಾನಿಗಳಿಗೆ ಮತಷ್ಟು ಕುತೂಹಲ ಏರಿಸಿದ್ದಾರೆ.

ಇನ್ನೂ ಜೂ.10 ರಂದು ಬಾಲಕೃಷ್ಣರವರ ಹುಟ್ಟುಹಬ್ಬವಾಗಿದ್ದು, ಮೂರು ದಿನಗಳ ಮುಂದೆಯೇ ಟೈಟಲ್ ಅನೌನ್ಸ್ ಮಾಡಿದ್ದಾರೆ. ವಿಶೇಷವಾಗಿ ಈ ಟೈಟಲ್ ಪೋಸ್ಟರ್‍ ರಿವೀಲ್ ಮಾಡಿ ದಾಖಲೆ ಮಾಡಲಾಗಿದೆ. ಸಿನಿರಂಗದಲ್ಲಿ ಈ ಹಿಂದೆ ಎಂದೂ ಮಾಡದ ರೀತಿಯಲ್ಲಿ ಪೋಸ್ಟರ್‍ ರಿಲೀಸ್ ಮಾಡಲಾಗಿದೆ. ಈ ಸಿನೆಮಾ ಬಾಲಕೃಷ್ಣರವರ 108 ಸಿನೆಮಾ ಆಗಿದ್ದು, 108 ಹೋರ್ಡಿಂಗ್ಸ್ ಮೇಲೆ ಈ ಪೋಸ್ಟರ್‍ ರಿಲೀಸ್ ಮಾಡಿದ್ದಾರೆ. ಬಾಲಕೃಷ್ಣರವರಿಗಾಗಿ ಈ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇಅಲ್ಲದೇ ಬಾಲಯ್ಯನ ಹುಟ್ಟುಹಬ್ಬದಂದು ಈ ಸಿನೆಮಾದ ಸ್ಪೇಷಲ್ ಟೀಸರ್‍ ಸಹ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇನ್ನೂ ಈ ಸಿನೆಮಾ ವಿಜಯ ದಶಮಿ ಹಬ್ಬದ ಅಂಗವಾಗಿ ರಿಲೀಸ್ ಮಾಡಲಾಗುತ್ತದೆ.

ಇನ್ನೂ ಬಾಲಯ್ಯನ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಸಹ ಸಿಗಲಿದೆ. ಬಾಲಕೃಷ್ಣರವರ ಹುಟ್ಟುಹಬ್ಬದ ಅಂಗವಾಗಿ ಅವರ ಹೊಸ ಸಿನೆಮಾ ಘೋಷಣೆ ಆಗಲಿದೆ. ಟಾಲಿವುಡ್ ಸ್ಟಾರ್‍ ನಿರ್ದೇಶಕ ಬಾಬಿ ಹಾಗೂ ಬಾಲಕೃಷ್ಣ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಸಿನೆಮಾದ ಘೋಷಣೆ ಸಹ ಬಾಲಕೃಷ್ಣ ಹುಟ್ಟುಹಬ್ಬದಂದು ಆಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಾಲಕೃಷ್ಣ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಟ್ರೀಟ್ ಸಿಗಲಿದೆ ಎಂದು ಹೇಳಬಹುದಾಗಿದೆ.

Most Popular

To Top