ವರುಣ್ ತೇಜ್ ಅಂಡ್ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ಜೂನ್ 9 ರಂದು ಫಿಕ್ಸ್, ಅಧಿಕೃತವಾದ ಸುದ್ದಿ….!

ಸುಮಾರು ತಿಂಗಳುಗಳಿಂದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಡೇಟಿಂಗ್ ನಲ್ಲಿದ್ದಾರೆ, ಅವರ ಮದುವೆ ಸಹ ಶೀಘ್ರದಲ್ಲೇ ನೆರವೇರಲಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಕೆಲವು ದಿನಗಳ ಹಿಂದೆಯಷ್ಟೆ ಲಾವಣ್ಯ ತ್ರಿಪಾಠಿ ಮದುವೆ ದಿನಾಂಕ ಸಹ ಫಿಕ್ಸ್ ಆಗಿದೆ ಎಂಬರ ರೂಮರ್‍ ಸಹ ಹುಟ್ಟಿಕೊಂಡಿತ್ತು. ಈ ಬಗ್ಗೆ ಅಧಿಕೃತ ಸುದ್ದಿ ಬಂದಿರಲಿಲ್ಲ. ಆದರೆ ಇದೀಗ ಅವರು ಎಂಗೇಜ್ ಮೆಂಟ್ ಜೂನ್ 9 ರಂದು ನೆರವೇರಲಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಅದ್ದೂರಿಯಾಗಿ ಅವರ ಎಂಗೇಜ್ ಮೆಂಟ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಸುಮಾರು ದಿನಗಳಿಂದ ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಜೊತೆಗೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿತ್ತು. ಜೂನ್ 9 ರಂದು ಅವರ ನಿಶ್ಚಿತಾರ್ಥ ನಡೆಯಲಿದ್ದು,  ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳೂ ಸಹ ನಡೆಯುತ್ತಿವೆ. ವಧು ವರರ ವಸ್ತ್ರಗಳು, ಆಭರಣಗಳನ್ನೂ ಸಹ ಖ್ಯಾತ ಡಿಸೈನರ್‍ ಗಳು ಸಿದ್ದ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮೆಗಾ ಕುಟುಂಬ ಹಾಜರಾಗಲಿದೆ.  ಇನ್ನೂ ನಿಹಾರಿಕಾ ಮದುವೆಯ ಬಳಿಕ ಮೆಗಾ ಕುಟುಂಬದ ಹಿರೋಗಳೆಲ್ಲಾ ಒಂದು ಕಡೆ ಸೇರಲಿದ್ದು, ಈ ಜೋಡಿಯ ನಿಶ್ಚಿತಾರ್ಥ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ ಎನ್ನಲಾಗಿದೆ. ಈ ಬಗ್ಗೆ ವರುಣ್ ತೇಜ್ ತಂಡ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ವರುಣ್ ತೇಜ್ ತಂಡ ಈ ಜೋಡಿಯ ಎಂಗೇಜ್ ಮೆಂಟ್ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ. ನಾಳೆ ಅಂದರೇ ಜೂನ 9  ರಂದು ಈ ಜೋಡಿಯ ಎಂಗೇಜ್ ಮೆಂಟ್ ನಡೆಯಲಿದೆ ಎಂಬ ಸುದ್ದಿ ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಸುದ್ದಿ ಇದೀಗ ಟ್ರೆಂಡ್ ಆಗುತ್ತಿದೆ. ಇನ್ನೂ ಈ ಎಂಗೇಜ್ ಮೆಂಟ್ ಅದ್ದೂರಿಯಾಗಿ ನಡೆಯಲಿದ್ದು, ಹತ್ತಿರದ ಸಂಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ ಮದುವೆ ಮಾತ್ರ ಅದ್ದೂರಿಯಾಗಿ ಮಾಡಲು ಮೆಗಾ ಕುಟುಂಬ ತೀರ್ಮಾನ ಮಾಡಿದೆಯಂತೆ. ಲಾವಣ್ಯ ಹಾಗೂ ವರುಣ್ ಈ ಹಿಂದೆ ಮಿಸ್ಟರ್‍, ಅಂತರಿಕ್ಷಂ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳ ಶೂಟಿಂಗ್ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಕೆಲವು ವರ್ಷಗಳ ಹಿಂದೆ ನಡೆದ ವರುಣ್ ತಂಗಿ ನಿಹಾರಿಕಾ ಮದುವೆಯಲ್ಲೂ ಲಾವಣ್ಯ ಕಾಣಿಸಿಕೊಂಡಿದ್ದರು. ರಾಜಾಸ್ಥಾನದಲ್ಲಿ ನಿಹಾರಿಕಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಜೊತೆಗೆ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಾಗಿದ್ದರು. ಸಿನಿರಂಗದ ಅನೇಕ ಪ್ರಮುಖರಿಗೆ ಈ ಮದುವೆ ಸಮಾರಂಭದಲ್ಲಿ ಆಹ್ವಾನ ಇಲ್ಲದೇ ಇದ್ದರೂ ಲಾವಣ್ಯ ಹಾಜರಾಗಿದ್ದು ವರುಣ್ ಲಾವಣ್ಯ ಲವ್ ರೂಮರ್‍ ಗೆ ಮತಷ್ಟು ಬಲ ತಂದಿತ್ತು.

ಕಳೆದ ವರ್ಷ ಸಹ ವರುಣ್ ಹಾಗೂ ಲಾವಣ್ಯ ಮದುವೆ ಸುದ್ದಿ ಕೇಳಿಬಂದಿತ್ತು. ಆ ಸಮಯದಲ್ಲಿ ಲಾವಣ್ಯ ಈ ಸುದ್ದಿಯನ್ನು ಅಲ್ಲಗೆಳೆದಿದ್ದರು. ಇದೀಗ ಅವರ ಮದುವೆ ನಡೆಯುವುದು ಅಧಿಕೃತವಾಗಿದೆ. ಇನ್ನೂ ಲಾವಣ್ಯ ಕೆರಿಯ್ ಅಂದುಕೊಂಡಂತೆ ಸಾಗುತ್ತಿಲ್ಲ. ಒಂದು ಸಿನೆಮಾ ಸಹ ಆಕೆಯ ಕೈಯಲ್ಲಿಲ್ಲ. ಇನ್ನೂ ವರುಣ್ ತೇಜ್ ಸದ್ಯ ಗಾಂಢೀವಧಾರಿ ಅರ್ಜುನ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.