Film News

ಚಿರು ಸಮಾಧಿ ಮುಂದೆ ಅಪ್ಪ ಎಂದು ಕರೆದ ರಾಯನ್, ನಮಸ್ತೆ ಅಪ್ಪ ಎಂದ ವಿಡಿಯೋ ವೈರಲ್….!

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದರು. ಆದರೆ ವಿಧಿಯಾಟಕ್ಕೆ ಚಿರು ಸರ್ಜಾ ಇಹಲೋಕ ತ್ಯೆಜಿಸಿದರು. ಅವರನ್ನು ಕಳೆದುಕೊಂಡ ದಿನ ಇಡೀ ಕರುನಾಡು ಶೋಕ ಆಚರಿಸಿತ್ತು. ಇನ್ನೂ ಚಿರು ಇಹಲೋಕ ತ್ಯೆಜಿಸಿ ಮೂರು ವರ್ಷಗಳು ಪೂರ್ಣಗೊಂಡಿದ್ದು, ಮೂರನೇ ವರ್ಷದ ಕಾರ್ಯ ಮಾಡಿದರು. ಈ ವೇಳೆ ಮೇಘನಾ ಹಾಗೂ ಚಿರು ದಂಪತಿಯ ಪುತ್ರ ರಾಯನ್ ಸರ್ಜಾ ತಂದೆಯ ಪೊಟೋ ನೋಡಿ ನಮಸ್ತೆ ಅಪ್ಪ ಎಂದು ಹೇಳುತ್ತಿದ್ದ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡ ಸಿನಿರಂಗದ ಯಂಗ್ ನಟ ಚಿರಂಜೀವಿ ಸರ್ಜಾ ಕಳೆದ ಜೂನ್ 7, 2020 ರಂದು ಇಹಲೋಕ ತ್ಯೆಜಿಸಿದರು. ಅಂದು ಕನ್ನಡ ಸಿನಿರಂಗದಲ್ಲಿ ದೊಡ್ಡ ಶಾಕ್ ಆಗಿತ್ತು. ಅಂದು ಚಿರು ಪೊಟೋ, ವಿಡಿಯೋ ಹಾಗೂ ಬ್ಯಾನರ್‍ ಗಳು ಎಲ್ಲಾ ಕಡೆ ಹಾಕಲಾಗಿತ್ತು. ಸೋಷಿಯಲ್ ಮಿಡಿಯಾದಲ್ಲೂ ಸಹ ಅವರಿಗೆ ದೊಡ್ಡ ಮಟ್ಟದ ಸಂತಾಪ ಸೂಚಿಸಲಾಗಿತ್ತು. ಇನ್ನೂ ಧ್ರುವ ಸರ್ಜಾ ತೋಟದ ಮನೆಯಲ್ಲಿ ಚಿರು ರವರನ್ನು ಸಮಾಧಿ ಮಾಡಲಾಗಿತ್ತು. ಮೂರನೇ ವರ್ಷದ ಕಾರ್ಯವನ್ನು ಮಾಡಲಾಯಿತು. ಈ ವೇಳೆ ಚಿರು ಕುಟುಂಬಸ್ಥರು, ಸ್ನೇಹಿತರೂ ಸೇರಿದಂತೆ ಕೆಲವು ಸಿನೆಮಾ ಕಲಾವಿದರೂ ಸಹ ಭಾಗಿಯಾಗಿದ್ದರು. ಮೇಘನಾ ರಾಜ್, ಪ್ರಮಿಳಾ ಜೋಶಾಯಿ, ಸುಂದರ್‍ ರಾಜ್ ರವರು ರಾಯನ್ ರಾಜ್ ನನ್ನು ಕರೆದುಕೊಂಡು ಬಂದರು. ಈ ವೇಳೆ ಚಿರು ಪೊಟೋಗೆ ಹೂ ಹಾಕಿ ಬಳಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಇನ್ನೂ ಈ ವೇಳೆ ತಂದೆಯ ಪೊಟೋ ಗೆ ಹೂ ಹಾಕಿದ ರಾಯನ್ ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಪದೇ ಪದೇ ಹೇಳಿದ್ದಾರೆ. ಈ ಕ್ಷಣವನ್ನು ಅಲ್ಲಿದ್ದ ಮಿಡಿಯಾದವರು ಸೆರೆ ಹಿಡಿದಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಾಯನ್ ಮುಗ್ದತೆ ಹಾಗೂ ತುಂಟಾಟ ಎಲ್ಲರ ಗಮನ ಸೆಳೆದಿದೆ. ಇನ್ನೂ ರಾಯನ್ ಮುದ್ದಾಗಿ ಮಾತನಾಡುತ್ತಿದ್ದನ್ನು ನೋಡಿ ಅಲ್ಲಿದ್ದವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಮಗನನ್ನು ನೋಡಲು ತಂದೆ ಇಲ್ಲ ಎಂಬ ಸಂಕಟ ಸಹ ಎದುರಾಗಿದೆ. ಇದೇ ವೇಳೆ ಸಮಾಧಿ ಬಳಿ ನಾಯಿ ಮರಿಯೊಂದು ಸಹ ಬಂದಿದ್ದು, ಈ ನಾಯಿ ಮರಿಯ ಬಾಲವನ್ನು ಎಳೆದು ರಾಯನ್ ಖುಷಿ ಪಟ್ಟಿದ್ದಾನೆ. ಅಲ್ಲಿ ಯಾರೇ ಬಂದು ಮಾತನಾಡಿದರೂ ರಾಯನ್ ಹೈ ಫೈ ಕೊಟ್ಟು ಖುಷಿಯಿಂದ ಮಾತನಾಡಿಸಿದ್ದಾನೆ.

ಇನ್ನೂ ಚಿರು ಸರ್ಜಾ ಮೃತಪಟ್ಟ ಬಳಿಕ ರಾಯನ್ ರಲ್ಲೇ ಚಿರು ರನ್ನು ಕಾಣುತ್ತಾ ಜೀವನ ಸಾಗಿಸುತ್ತಿದ್ದಾರೆ ಮೇಘನಾ. ಸೋಷಿಯಲ್ ಮಿಡಿಯಾದಲ್ಲಿ ರಾಯನ್ ಸರ್ಜಾ ವಿಡಿಯೋಗಳನ್ನು, ಪೊಟೋಗಳನ್ನು ಸಹ ಮೇಘನಾ ಹಂಚಿಕೊಳ್ಳುತ್ತಲೇ ಇದ್ದಾರೆ. ಇನ್ನೂ ಮೇಘನಾ ಇದೀಗ ಸಿನೆಮಾಗಳಲ್ಲಿ ಸಹ ನಟಿಸುತ್ತಾ, ಮಗನ ಹಾರೈಕೆ ನೋಡಿಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದಾರೆ.

Most Popular

To Top