ಲಂಡನ್ ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ ಹಾಗೂ ಶೋಭಿತಾ, ರೆಸ್ಟೋರೆಂಟ್ ನಲ್ಲಿ ಜೊತೆಗೆ ಡಿನ್ನರ್ ಮಾಡಿದ ಜೋಡಿ, ವೈರಲ್ ಆದ ಪೊಟೋ….!

ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಇಬ್ಬರೂ ಅವರವರ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸಹ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟು ಬ್ಯುಸಿಯಾಗಿದ್ದಾರೆ. ಅದೇ ರೀತಿ ನಾಗಚೈತನ್ಯ ಸಹ…

ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಇಬ್ಬರೂ ಅವರವರ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸಹ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟು ಬ್ಯುಸಿಯಾಗಿದ್ದಾರೆ. ಅದೇ ರೀತಿ ನಾಗಚೈತನ್ಯ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ದಿನಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಶೋಭಿತಾ ಅನೇಕ ಬಾರಿ ಎಲ್ಲಾ ರೂಮರ್‍ ಗಳು ಎಂದರೂ ಸಹ ಈ ಸುದ್ದಿ ಮಾತ್ರ ತಣ್ಣಗಾಗುತ್ತಿಲ್ಲ. ಇದೀಗ ಮತ್ತೊಂದು ಪೊಟೋ ಸಖತ್ ವೈರಲ್ ಆಗುತ್ತಿದೆ.

ನಟ ಅಕ್ಕಿನೇನಿ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳಿಪಾಲ ಎಂಬ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಅವರಿಬ್ಬರೂ ನಿರಂತರವಾಗಿ ಭೇಟಿ ಆಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಈ ಹಿಂದೆ ಶೋಭಿತಾ ಸಹ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ. ಇದೀಗ ಈ ರೂಮರ್‍ ಗೆ ಮತಷ್ಟು ಬಲ ಬರುವಂತಹ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್  ಆಗುತ್ತಿದೆ.

ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ ನ ರೆಸ್ಟೊರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಡಿನ್ನರ್‍ ಡೇಟ್ ಗಾಗಿ ಲಂಡನ್ ಗೇ ಈ ಜೋಡಿ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಬ್ಬರೂ ರೆಸ್ಟೋರೆಂಟ್ ನಲ್ಲಿರುವ ಪೊಟೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಲಂಡನ್ ನಲ್ಲಿರುವ ಜಮಾವರ್‍ ನಲ್ಲಿ ಡಿನ್ನರ್‍ ಡೇಟ್ ಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿನ ಛೆಫ್ ಸುರೇಂದರ್‍ ಮೋಹನ್ ನಾಗಚೈತನ್ಯ ಜೊತೆಗೆ ತೆಗೆಸಿಕೊಂಡ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೊಟೋ ಹಿಂದೆ ಶೋಭಿತಾ ಕುಳಿತುಕೊಂಡಿರುವುದು ಕಾಣಿಸಿಕೊಂಡಿದೆ. ಈ ಪೊಟೋ ನೋಡಿದ ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನೂ ಈ ಪೊಟೋ ನೋಡಿದ ನೆಟ್ಟಿಗರೂ ಆಕೆ ಪಕ್ಕಾ ಶೋಭಿತಾ ಎಂದು ಹೇಳುತ್ತಿದ್ದು, ಚೈತನ್ಯ ಹಾಗೂ ಶೋಭಿತಾ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗೆ ಮತಷ್ಟು ಬಲ ಬಂದಿದೆ. ಕಳೆದ ವರ್ಷ ನವೆಂಬರ್‍ ಮಾಹೆಯಲ್ಲೂ ಸಹ ಶೋಭಿತಾ ನಾಗಚೈತನ್ಯ ಲಂಡನ್ ಗೆ ವೆಕೇಷನ್ ಗೆ ಹೋಗಿದ್ದರು. ಇದೀಗ ಮತ್ತೊಮ್ಮೆ ಅವರು ಲಂಡನ್ ಗೆ ಡಿನ್ನರ್‍ ಡೇಟ್ ಗೆ ಹೋಗಿದ್ದು. ಪೊಟೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಮತಷ್ಟು ಜೋರಾಗಿ ಈ ರೂಮರ್‍ ಹರಿದಾಡುತ್ತಿದೆ.