Film News

ಬೋಲ್ಡ್ ಅಂಡ್ ಹಾಟ್ ಡ್ರೆಸ್ ನಲ್ಲಿ ದೇವರ ಆಭರಣ ಧರಿಸಿದ್ದಕ್ಕಾಗಿ ತಾಪ್ಸಿ ವಿರುದ್ದ ದೂರು ದಾಖಲು…!

ನಟಿ ತಾಪ್ಸಿ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು, ಹಿರೋಯಿನ್ ಓರಿಯೆಂಟೆಡ್ ಹಾಗೂ ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ತಾಪ್ಸಿ ಮತಷ್ಟು ಬೋಲ್ಡ್ ಆಗಿದ್ದಾರೆ. ಇತ್ತೀಚಿಗೆ ನಡೆದ ಅನೇಕ ಸಂದರ್ಶನದಲ್ಲಿ ಆಕೆ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ತಾಪ್ಸಿ ಬೋಲ್ಡ್ ಪೊಟೋಶೂಟ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಡ್ರೆಸ್ ನಲ್ಲಿ ತಾಪ್ಸಿ ಲಕ್ಷ್ಮೀ ದೇವತೆಯಿರುವಂತ ಆಭರಣ ಧರಿಸಿದ್ದರು. ಈ ಕಾರಣದಿಂದ ಆಕೆಯ ವಿರುದ್ದ ಇದೀಗ ದೂರು ದಾಖಲಾಗಿದೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಏನೇ ಮಾಡಿದರು ಕೆಲವರು ಅದರಲ್ಲಿ ತಪ್ಪುಗಳನ್ನು ಹುಡುಕುತ್ತಿರುತ್ತಾರೆ. ಇದೀಗ ತಾಪ್ಸಿ ಪನ್ನು ಧರಿಸಿದ ಬಟ್ಟೆ ಹಾಗೂ ಆಭರಣದಿಂದಾಗಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬೋಲ್ಡ್ ಡ್ರೆಸ್ ನಲ್ಲಿ ಆಕೆ ಲಕ್ಷ್ಮೀ ದೇವರ ಆಭರಣ ಧರಿಸಿದ ಕಾರಣ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಅವರ ವಿರುದ್ದ ದೂರು ದಾಖಲಾಗಿದೆ. ಮೈಕಾಣುವಂತಹ ಡ್ರೆಸ್ ನಲ್ಲಿ ಲಕ್ಷ್ಮೀ ದೇವಿಯ ಚಿತ್ರ ಇರುವಂತಹ ಆಭರಣ ಧರಿಸಿದ್ದು. ಹಿಂದೂಗಳನ್ನು ಕೆರಳಿಸಿದೆ. ಹಿಂಧೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆಯಾಗಿದೆ ಎಂದು ಬಿಜೆಪಿ ಮುಖಂಡ ಏಕಲವ್ಯ ಗೌರ್‍ ಎಂಬುವವರು ದೂರು ನೀಡಿದ್ದಾರೆ. ಸನಾತನ ಧರ್ಮಕ್ಕೆ ಅವಮಾನ ಮಾಡುವ ನಿಟ್ಟಿನಲ್ಲಿ ಇದೊಂದು ಉದ್ದೇಶಪೂರ್ವಕವಾದ ಕೃತ್ಯ ಎಂದು ಆರೋಪಿಸಿದ್ದಾರೆ.

ನಟಿ ತಾಪ್ಸಿ ಪನ್ನು ಕಳೆದ ಮಾ.12 ರಂದು ಲ್ಯಾಕ್ಮಿ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ರಾಂಪ್ ವಾಕ್ ಮಾಡಿದ್ದರು.  ರೆಡ್ ಡ್ರೆಸ್ ನಲ್ಲಿ ಬ್ರಾ ಹಾಕಿಕೊಳ್ಳದೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.  ತಾಪ್ಸಿ ಈ ಹಿಂದೆ ಎಂದೂ ಸಹ ಈ ರೀತಿಯಲ್ಲಿ ಬೋಲ್ಡ್ ಶೋ ಮಾಡಿರಲಿಲ್ಲ ಎನ್ನಲಾಗಿದೆ. ಆಕೆ ಕನಿಷ್ಟ ಬ್ರಾ ಸಹ ಹಾಕದೇ ತೆರೆದ ಪುಸ್ತಕದಂತೆ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದರು. ಇನ್ನೂ ಆಕೆ ತನ್ನ ಕ್ಲೀವೇಜ್ ಕವರ್‍ ಮಾಡಲು ಆಭರಣವೊಂದನ್ನು ಧರಿಸಿದ್ದರು. ಈ ಆಭರಣದಲ್ಲಿ ಲಕ್ಷ್ಮೀ ದೇವಿಯ ಪೊಟೋ ಇತ್ತು. ಈ ಕಾರಣದಿಂದ ಅನೇಕರು ಈ ಪೊಟೋಶೂಟ್ಸ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.  ಈ ಹಾದಿಯಲ್ಲೇ ಆಕೆಯ ವಿರುದ್ದ ದೂರು ದಾಖಲಾಗಿದೆ.

ಇನ್ನೂ ತಾಪ್ಸಿ ಪನ್ನು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಮೆಚ್ಚುಗೆಯ ಕಾಮೆಂಟ್ ಗಳ ಜೊತೆಗೆ ವಿಮರ್ಶೆಗಳೂ ಸಹ ಹೆಚ್ಚಾಗಿದೆ. ತಾಪ್ಸಿ ಪನ್ನು ಈ ರೀತಿ ಮಾಡಲು ನಾಚಿಕೆಯಾಗಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಕಿಡಿಕಾರಿದ್ದಾರೆ. ಇನ್ನೂ ಈ ಪೊಟೋಗಳಿಗೆ ಸುಮಾರು ಆರು ಲಕ್ಷಕ್ಕೂ ಅಧಿಕ ಮಂದಿ ಲೈಕ್  ಮಾಡಿದ್ದಾರೆ. ಇನ್ನೂ ಈ ವಿವಾದ ಎಲ್ಲಿಯವರೆಗೂ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top