News

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲೀಂ ಯುವಕ, ವೈರಲ್ ಆದ ವೆಡ್ಡಿಂಗ್ ಕಾರ್ಡ್….!

ವಿಶ್ವದಾದ್ಯಂತ ಆಗಾಗ ಕೋಮು ಗಲಬೆಗಳನ್ನು ನಾವು ಕಂಡಿದ್ದೇವೆ. ಆದರೂ ಕೆಲವು ಕಡೆ ಕೋಮು ಸೌಹಾರ್ದತೆ ಸಾರುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಮುಸ್ಲೀಂ ಯುವಕನೊಬ್ಬ ಕೋಮು ಸೌಹಾರ್ದತೆ ಸಂದೇಶ ಸಾರುವ ನಿಟ್ಟಿನಲ್ಲಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಪ್ರಥಮ ಪೂಜಿತ ಗಣಪತಿಯ ಪೊಟೋ ಹಾಕಿಸಿ, ವಿಘ್ನ ವಿನಾಶಕನಿಗೆ ಮೊದಲ ಆಹ್ವಾನ ನೀಡಿದ್ದಾನೆ. ಈ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಸಫಿಪುರ್‍ ಎಂಬ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಮುಸ್ಲೀಂ ವ್ಯಕ್ತಿಯೊಬ್ಬರು ಹಿಂದೂ ಸಂಪ್ರದಾಯಕ್ಕೆ ತಕ್ಕಂತೆ ತನ್ನ ಮಗನ ಮದುವೆಯ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದ್ದಾರೆ. ಈ ಆಮಂತ್ರಣ ಪತ್ರಿಕೆಯನ್ನು ಉರ್ದು ಬದಲಿಗೆ ಹಿಂದಿಯಲ್ಲಿ ಮುದ್ರಣ ಮಾಡಿಸಲಾಗಿದೆ. ಹಿಂದೂ ಸಂಪ್ರದಾಯಗಳಿಗೆ ಸಂಬಂಧಿಸಿದ ಪದಗಳನ್ನು ಸಹ ಬಳಸಲಾಗಿದೆ. ಮೊದಲ ಆಮಂತ್ರಣವನ್ನು ಗಣೇಶನಿಗೆ ನೀಡಲಾಗಿದ್ದು, ಗಣೇಶನ ಚಿತ್ರವನ್ನು ಸಹ ಹಾಕಲಾಗಿದೆ. ಅಷ್ಟೇಅಲ್ಲದೇ ತಮ್ಮ ಮದುವೆಗೆ ಸಾಕ್ಷಿಯಾಗಲು ಪಂಚ ಪ್ರಕೃತಿಗೂ ಆಹ್ವಾನ ನೀಡಲಾಗಿದೆ. ಮುಸ್ಲೀಂ ಕುಟುಂಬ ಮೊದಲ ಆಮಂತ್ರಣವನ್ನು ಹಿಂದೂ ದೇವರಾದ ಗಣೇಶನಿಗೆ ಅರ್ಪಿಸಿದ ಮೊದಲ ಮದುವೆ ಆಮಂತ್ರಣ ಪತ್ರಿಕೆ ಇದು ಎಂದು ಹೇಳಬಹುದಾಗಿದೆ.

ಇನ್ನೂ ಈ ಆಮಂತ್ರಣ ಪತ್ರಿಕೆಯನ್ನು ಮದುವೆಯಾಗುತ್ತಿರುವ ಯುವಕ ತನ್ನ ಸಮುದಾಯ ಹಾಗೂ ಸಂಬಂಧಿಕರೂ ಸೇರಿದಂತೆ ಹಿಂದೂ ಧರ್ಮದವರಿಗೂ ಸಹ ನೀಡಿದ್ದಾರೆ. ಇನ್ನೂ ಈ ಮದುವೆ ಇದೇ ಫೆ.29 ರಂದು ನಡೆಯಲಿದೆ. ಇದೀಗ ಮದುವೆಯ ಕಾರ್ಡ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಿಂದೂ ಪದ್ದತಿಯಂತೆ ಮುದ್ರಿತವಾಗಿರುವ ಈ ಪತ್ರಿಕೆಯಲ್ಲಿ ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭಿಸಲಾಗಿದೆ. ಜೊತೆಗೆ ಶ್ರೀ ಶುಭ್ ಎಂದು ಕಳಶದ ಚಿತ್ರವನ್ನು ಸಹ ಹಾಕಲಾಗಿದೆ. ಸಫಿಪುರ್‍ ಗ್ರಾಮದ ನಿವಾಸಿ ಅಝುಲ್ ಕಮರ್‍ ಎಂಬಾತನ ಪುತ್ರ ಸಮೀರ್‍ ಅಹ್ಮದ್ ಎಂಬುವವರ ಮದುವೆಯ ಆಮಂತ್ರಣ ಇದಾಗಿದೆ.

Most Popular

To Top