ನನ್ನ ವಯಸ್ಸಿನವರಿಗೆ ಮದುವೆಯಾಗಿ, ಗರ್ಭಿಣಿಯಾಗುತ್ತಿದ್ದಾರೆ, ಆದರೆ ನಾನು ಮಾತ್ರ ಎಂದ ಆಂಕರ್ ವರ್ಷಿಣಿ…….!

Follow Us :

ತೆಲುಗಿನ ಕಿರುತೆರೆಯಲ್ಲಿ ಅನೇಕ ಶೋಗಳನ್ನು ನಡೆಸುವಂತಹ ಆಂಕರ್‍ ವರ್ಷಿಣಿ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಪೊಟೋಶೂಟ್ಸ್, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಇದೀಗ ಆಕೆ ಪೋಸ್ಟ್ ಒಂದನ್ನು ಮಾಡಿದ್ದು, ಭಾರಿ ಸದ್ದು ಮಾಡುತ್ತಿದೆ. ತನ್ನ ವಯಸ್ಸಿನವರ ಜೊತೆಗೆ ಆಕೆ ಹೋಲಿಕೆ ಮಾಡಿಕೊಂಡು ಹಂಚಿಕೊಂಡ ಪೋಸ್ಟ್ ತುಂಬಾನೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ವರ್ಷಿಣಿ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ಸದ್ಯ ಆಂಕರ್‍ ವರ್ಷಿಣಿ ಸ್ಟಾರ್‍ ಮಾ ಟಿ.ವಿ. ಯಲ್ಲಿ ಪ್ರಸಾರವಾಗುವ ಕಾಮಿಡಿ ಶೋ ನಲ್ಲಿ ಹೋಸ್ಟ್ ಆಗಿದ್ದಾರೆ. ಒಳ್ಳೆಯ ಹೈಟ್, ಸೌಂದರ್ಯ ಎರಡೂ ಇದ್ದರೂ ಸಹ ಆಕೆ ಆಂಕರ್‍ ಆಗಲು ವಿಫಲರಾದರು. ಪ್ರೇಕ್ಷಕರಿಗೆ ಹತ್ತಿರವಾಗಲು ವಿಫಲರಾದರು ಎನ್ನಲಾಗುತ್ತಿದೆ. ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಗಳಾದ ರಶ್ಮಿ, ಅನಸೂಯ ರವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ವರ್ಷಿಣಿ ಆಂಕರ್‍ ಆಗಿದ್ದಾರೆ ಎನ್ನಲಾಗುತ್ತಿದೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವರ್ಷಣಿ ಆಂಕರ್‌ ಆಗಿದ್ದರು ಎನ್ನಲಾಗಿದೆ. ಬಳಿಕ ಆಕೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಟಾಸ್-2, ಕಾಮಿಡಿ ಸ್ಟಾರ್‍, ಜಬರ್ದಸ್ತ್ ಮೊದಲಾದ ಶೋಗಳಿಗೆ ಆಂಕರ್‍ ಆಗಿದ್ದಾರೆ. ಸೌಂದರ್ಯ ಹಾಗೂ ಆಂಕರಿಂಗ್ ಸ್ಕಿಲ್ ಮೂಲಕ ಆಕೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನೂ ವರ್ಷಿಣಿ ಕಿರುತೆರೆಯ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಆಕೆ ತನ್ನ ಮನಸ್ಸಿನಲ್ಲಿರುವ ಭಾವನೆಯನ್ನು ಹಂಚಿಕೊಂಡಿದ್ದಾರೆ. ಅದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ವರ್ಷಿಣಿ ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಿಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದು, ಇದು ಇದೀಗ ಹಾಟ್ ಟಾಪಿಕ್ ಆಗಿದೆ. ಇದೀಗ ನನ್ನ ವಯಸ್ಸು ತುಂಬಾ ವಿಚಿತ್ರವಾಗಿದೆ. ಕೆಲವು ಮದುವೆಯಾಗುತ್ತಿದ್ದಾರೆ. ಕೆಲವರು ಗರ್ಭಿಣಿಯಾಗಿದ್ದಾರೆ. ಆದರೂ ಸಹ ನಾನು ಇನ್ನೂ ಮನೆಯಿಂದ ಹೊರಗೆ ಹೋಗಬೇಕಾದರೇ ಅನುಮತಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಮ್ಮ ಪೋಸ್ಟ್ ಮೂಲಕ ಏನನ್ನು ಹೇಳಲು ಬಯಸುತ್ತಿದ್ದಿರಾ, ಆಕೆಗಿರುವ ಸಮಸ್ಯೆಯಾದರೂ ಏನು ಎಂಬೆಲ್ಲಾ ಪ್ರಶ್ನೆಗಳು ಎದುರಾಗುತ್ತಿವೆ. ಇನ್ನೂ ವರ್ಷಿಣಿ ಕಿರುತೆರೆಯ ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಸಪೋರ್ಟಿಂಗ್ ಪಾತ್ರಗಳಲ್ಲೂ ಸಹ ನಟಿಸುತ್ತಿದ್ದಾರೆ. ಸದ್ಯ ಆಕೆ ಕಿರುತೆರೆಗೆ ದೂರವಾಗಿ  ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ.