ಹತ್ತು ಕೋಟಿ ಕೊಟ್ಟರೂ ಆತನೊಂದಿಗೆ ನಟಿಸೋಲ್ಲಾ ಎಂದಿದ್ರಂತೆ ಲೇಡಿ ಸೂಪರ್ ಸ್ಟಾರ್ ನಯನತಾರಾ, ಆ ನಟ ಯಾರು ಗೊತ್ತಾ?

Follow Us :

ಸೌತ್ ಸಿನಿರಂಗದಲ್ಲಿ ಮದುವೆಯಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುವ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿಯೇ ಫೇಮಸ್ ಆಗಿದ್ದಾರೆ. ಸದ್ಯ ದೇಶದ ಸ್ಟಾರ್‍ ನಟಿಯರಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟಿಯೆಂದು ಸಹ ಹೇಳಲಾಗುತ್ತಿದೆ. ಸಿನೆಮಾ ಒಂದಕ್ಕೆ ಆಕೆ 10-15 ಕೋಟಿಯವರೆಗೂ ರೆನ್ಯುಮರೇಷನ್ ಪಡೆದುಕೊಳ್ಳುತ್ತಾರೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ನೂರು ಕೋಟಿ ಕೊಟ್ಟರು ಆ ನಟನ ಜೊತೆಗೆ ನಟಿಸೊಲ್ಲ ಎಂದು ಹೇಳಿದ್ದರಂತೆ. ಅಷ್ಟಕ್ಕೂ ಆ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂಬ ಟ್ಯಾಗ್ ಪಡೆದುಕೊಂಡಿದ್ದ ನಟಿಯರಲ್ಲಿ ಕೆಲವೇ ಮಂದಿ ಇರುತ್ತಾರೆ. ಈ ಹಿಂದೆ ಸೀನಿಯರ್‍ ನಟಿ ಸಾವಿತ್ರಿ, ದಿವಂಗತ ಶ್ರೀದೇವಿ, ವಿಜಯ ಶಾಂತಿ ರವರಂತಹ ಬೆರಳಣಿಕೆಯಷ್ಟು ನಟಿಯರು ಮಾತ್ರ ಲೇಡಿ ಸೂಪರ್‍ ಸ್ಟಾರ್‍ ಟ್ಯಾಗ್ ಪಡೆದುಕೊಂಡಿದ್ದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ಅದ್ಬುತವಾಗಿ ನಟಿಸಿ ಫೇಂ ಪಡೆದುಕೊಂಡ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಪಡೆದುಕೊಂಡಿದ್ದಾರೆ  ಕೆಲವು ತಿಂಗಳುಗಳ ಹಿಂದೆಯಷ್ಟೆ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಸಪ್ತಪದಿ ತುಳಿದರು. ಮದುವೆಯಾದ ಬಳಿಕವೂ ಸಹ ಭಾರಿ ಸಿನೆಮಾಗಳಲ್ಲಿ ನಟಿಸುತ್ತಾ ಸಕ್ಸಸ್ ಕಂಡುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಮದುವೆಯಾದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಲಾಗುತ್ತದೆ.

ತಮಿಳುನಾಡಿನ ದೊಡ್ಡ ಉದ್ಯಮಿ ಲೆಜೆಂಡ್ ಶರವಣನ್ ಸಿನೆಮಾ ದಿ ಲೆಜೆಂಡ್ ಎಂಬ ಸಿನೆಮಾ ಮಾಡಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಆಲ್ ಟೈಂ ಡಿಜಾಸ್ಟರ್‍ ಆಗಿತ್ತು. ಈ ಸಿನೆಮಾಗೆ ಉಚಿತವಾಗಿ ಟಿಕೆಟ್ ಕೊಟ್ಟರೂ ಯಾರೂ ಸಿನೆಮಾ ನೋಡೋಕೆ ಸಿದ್ದವಾಗಿರಲಿಲ್ಲ. ಈ ಸಿನೆಮಾಗೆ ಆತನೇ ನಿರ್ಮಾಪಕನಾಗಿದ್ದ. ಈ ಸಿನೆಮಾದಲ್ಲಿ ಆತನಿಗೆ ಜೋಡಿಯಾಗಿ ಬಾಲಿವುಡ್ ಸ್ಟಾರ್‍ ನಟಿ ಊರ್ವಶಿ ರೌಟೆಲಾ ನಟಿಸಿದ್ದರು. ಈ ಸಿನೆಮಾಗೆ ನಾಯಕಿಯಾಗಿ ಮೊದಲಿಗೆ ಸ್ಟಾರ್‍ ನಟಿ ನಯನತಾರಾ ರವರನ್ನು ಸಂಪರ್ಕ ಮಾಡಿದ್ದರಂತೆ. ಆಕೆಯನ್ನು ಈ ಸಿನೆಮಾದಲ್ಲಿ ನಟಿಸೋಕೆ ಒಪ್ಪಿಸಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದರಂತೆ. ಆಕೆಯನ್ನು ಒಪ್ಪಿಸಲು ಆತ ಮಾಡಿದ ಪ್ರಯತ್ನಗಳು ಇದೀಗ ಹೊರಗೆ ಬಂದಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ.

ನಟಿ ನಯನತಾರಾ ಮನೆಯ ಮುಂದೆ ಸದಾ ರೋಲ್ಸ್ ರಾಯಸ್ ಕಾರು ಇರುತ್ತಿತ್ತಂತೆ. ಅದು ಲೆಜೆಂಡ್ ಸಿನೆಮಾದ ಹಿರೋ ಶರವಣನ್ ರವರದ್ದಂತೆ. ದಿ ಲೆಜೆಂಡ್ ಸಿನೆಮಾದಲ್ಲಿ ನಟಿಸೋಕೆ ನಯನತಾರಾ ಮನೆಗೆ ಅನೇಕ ಭಾರಿ ಹೋಗಿದ್ದರಂತೆ. ನಯನತಾರಾ ಮನೆ ಮುಂದೆ ತುಂಬಾನೆ ಸೆಕ್ಯುರಿಟಿ ಇರುತ್ತದೆಯಂತೆ. ಅದನ್ನು ದಾಟಿಕೊಂಡು ಆತ ನಯನತಾರಾ ರವರನ್ನು ಮಾತನಾಡಲು ಹೋಗುತ್ತಿದ್ದರಂತೆ. ತಮ್ಮ ಸಿನೆಮಾದಲ್ಲಿ ನಟಿಸೋಕೆ ಆಕೆಗೆ ಎಷ್ಟು ಬೇಕಾದರೂ ಸಂಭಾವನೆ ಕೊಡಲು ಸಿದ್ದ ಎಂದು ಆಫರ್‍ ನೀಡಿದ್ದರಂತೆ. ಆದರೆ ನಯನತಾರಾ ಮಾತ್ರ ಹತ್ತು ಕೋಟಿ ಕೊಟ್ಟರು ನಾನು ನಟಿಸೊಲ್ಲ ಎಂದು ಹೇಳಿದ್ದರಂತೆ. ಇದರಿಂದ ಕೋಪಗೊಂಡ ಶರವಣನ್ ಬಾಲಿವುಡ್ ನಟಿ ಊರ್ವಶಿ ರೌಟೆಲ್ಲಾ ರವರನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.