ಆ ನಟಿಯಂತೆ ನಾನು ಹೆಸರು ತೆಗೆದುಕೊಳ್ಳಬೇಕು ಎಂದ ರಶ್ಮಿಕಾ, ಬಾಲ್ಯದಲ್ಲಿ ತನ್ನ ತಂದೆ ಹೇಲಿದ ಮಾತನ್ನು ನಿಜ ಮಾಡೋದು ಆಕೆಯ ಕನಸಂತೆ…..!

Follow Us :

ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸೌತ್ ಅಂಡ್ ನಾರ್ತ್‌ನಲ್ಲೂ ಭಾರಿ ಬೇಡಿಕೆ ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ರಶ್ಮಿಕಾ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ರಣಬೀರ್‍ ಕಪೂರ್‍ ಜೊತೆಗೆ ನಟಿಸಿದ ಯಾನಿಮಲ್ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದ್ದು, ಮತ್ತಷ್ಟು ಫೇಂ ಪಡೆದುಕೊಂಡಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿದೆ.

ನಟಿ ರಶ್ಮಿಕಾ ಮಂದಣ್ಣ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಾಟ್ ಪೊಟೋಶೂಟ್ಸ್, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಆಗಾಗ ತನ್ನ ವೈಯುಕ್ತಿಕ ವಿಚಾರಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಯಾನಿಮಲ್ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ರಶ್ಮಿಕಾ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ತನ್ನ ಡ್ರೀಮ್ ಹಿರೋಯಿನ್ ಬಗ್ಗೆ, ಬಾಲ್ಯದಲ್ಲಿ ತನ್ನ ತಂದೆಯ ಮಾತುಗಳ ಬಗ್ಗೆ ಆಕೆ ಮಾತನಾಡಿದ್ದು, ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ನಟಿ ರಶ್ಮಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಫೇವರಿಟ್ ಹಿರೋಯಿನ್ ಯಾರು ಎಂದೂ ಸಹ ಹೇಳಿದ್ದಾರೆ. ತನಗೆ ಬಾಲ್ಯದಿಂದಲೂ ದಿವಂಗತ ನಟಿ ಸೌಂದರ್ಯ ಎಂದರೇ ತುಂಬಾ ಇಷ್ಟ. ಆಕೆಯಂತೆ ಒಳ್ಳೆಯ ನಟಿಯಾಗಿ ಹೆಸರು ಪಡೆದುಕೊಳ್ಳಬೇಕು. ನನ್ನ ತಂದೆ ಬಾಲ್ಯದಲ್ಲಿ ನೀನು ನೋಡಲು ಸೌಂದರ್ಯರಂತೆ ಇದ್ದೀಯಾ, ಅವರಂತೆ ನೀನು ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂದು ಹೇಳಿದ್ದರಂತೆ. ಆಕೆಯಂತೆ ಒಳ್ಳೆಯ ಹೆಸರು ಪಡೆದುಕೊಳ್ಳುವುದು ನನ್ನ ಡ್ರೀಮ್ ಆಗಿದೆ. ಜೊತೆಗೆ ಸೌಂದರ್ಯ ಬಯೋಪಿಕ್ ನಲ್ಲಿ ಆಕೆಯ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂ ರಶ್ಮಿಕಾ ಯಾನಿಮಲ್ ಸಿನೆಮಾದಲ್ಲಿ ರೊಮ್ಯಾನ್ಸ್, ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದರು. ಈ ದೃಶ್ಯದಲ್ಲಿ ನಟಿಸುವಾಗ ನನ್ನನ್ನು ನಾನು ಮರೆತುಹೋಗಿದ್ದೆ. ಮೈಂಡ್ ಬ್ಲಾಕ್ ಆಗಿತ್ತು. ಆ ಸೀನ್ ನಲ್ಲಿ ಎಮೋಷನ್ ನಲ್ಲಿ ನಟಿಸಿದ್ದೆ. ಸೀನ್ ಮುಗಿದ ಬಳಿಕ ಅಳುತ್ತಾ ಇದ್ದೆ ಎಂದೂ ಸಹ ಹೇಳಿದ್ದಾರೆ. ಆಕೆಯ ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಸದ್ಯ ರಶ್ಮಿಕಾ ಪುಷ್ಪಾ-2, ದಿ ಗರ್ಲ್ ಫ್ರೆಂಡ್, ರೈನ್ ಬೋ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.