Film News

ಮಗನ ಬಗ್ಗೆ ಮೆಚ್ಚುಗೆ ಟ್ವೀಟ್ ಮಾಡಿದ ಚಿರಂಜೀವಿ, ವಿವಾದ ಶುರುವಾಯ್ತು….!

ದೇಶದ ಸಿನಿರಂಗದಲ್ಲಿ ಭಾರಿ ಸಕ್ಸಸ್ ಕಂಡ ಆರ್‍.ಆರ್‍.ಆರ್‍ ಸಿನೆಮಾ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಅಂತರಾಷ್ಟ್ರೀಯ ಮಟ್ಟದ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಈ ಸಿನೆಮಾ ಬಿಡುಗಡೆಗೂ ಮುಂಚೆಯಿಂದಲೇ ಮೆಗಾ ಫ್ಯಾನ್ಸ್ ಹಾಗೂ ನಂದಮೂರಿ ಫ್ಯಾನ್ಸ್ ನಡುವೆ ವಿವಾದಗಳು ನಡೆಯುತ್ತಲೇ ಇತ್ತು. ಈ ಸಿನೆಮಾದಲ್ಲಿ ರಾಮ್ ಚರಣ್ ಚೆನ್ನಾಗಿ ನಟಿಸಿದ್ದಾರೆ ಎಂದರೇ ಎನ್.ಟಿ.ಆರ್‍ ಫ್ಯಾನ್ಸ್ ಎನ್.ಟಿ.ಆರ್‍ ರವರ ನಟನೆ ತುಂಬಾ ಅದ್ಬುತ ಎಂದು ಫ್ಯಾನ್ಸ್ ವಾರ್‍ ನಡೆದಿತ್ತು. ಇದು ಅಲ್ಲಿಯೇ ಮುಗಿದಿತ್ತು. ಇದೀಗ ಮೆಗಾಸ್ಟಾರ್‍ ಚಿರಂಜೀವಿ ಟ್ವೀಟ್ ಒಂದನ್ನು ಮಾಡಿದ್ದು, ಇದು ವಿವಾದಗಳನ್ನು ಹುಟ್ಟಿಹಾಕುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಿರ್ದೇಶಕ ರಾಜಮೌಳಿ ಹಾಲಿವುಡ್ ನ ಲೆಜೆಂಡರಿ ನಿರ್ದೇಶಕರಾದ ಜೇಮ್ಸ್ ಕ್ಯಾಮೆರೂನ್, ಸ್ಟೀವನ್ ಸ್ಸಿಲ್ ಬರ್ಗ್ ರವರನ್ನು ಭೇಟಿಯಾಗಿದ್ದರು. ಈ ವೇಳೆ RRR ಸಿನೆಮಾದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಜೇಮ್ಸ್ ಕ್ಯಾಮೆರೂನ್ ತನ್ನ ಪತ್ನಿಯೊಂದಿಗೆ RRR ಸಿನೆಮಾ ಅನ್ನು ಎರಡು ಬಾರಿ ನೋಡಿದ್ದೇನೆ ಎಂದು ಹೇಳಿದ್ದರು. ಇನ್ನೂ ಮತ್ತೊಮ್ಮೆ RRR ಸಿನೆಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ ಕ್ಯಾಮೆರೂನ್ ನನಗೆ RRR ಸಿನೆಮಾದಲ್ಲಿ ರಾಮ್ ಪಾತ್ರ ತುಂಬಾ ಇಷ್ಟವಾಯಿತು. ರಾಮ್ ಪಾತ್ರಕ್ಕೆ ತುಂಬಾ ಪ್ರಾಧಾನ್ಯತೆಯಿದೆ ಎಂದು ಹೇಳುತ್ತಾ ಪ್ರಶಂಸೆಗಳನ್ನು ಮಾಡಿದ್ದರು. ಈ ವಿಡಿಯೋ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ತನ್ನ ಪುತ್ರ ರಾಮ್ ಚರಣ್ ಬಗ್ಗೆ ಪ್ರಶಂಸೆ ಮಾಡುತ್ತಾ ಟ್ವೀಟ್ ಒಂದನ್ನು ಮಾಡಿದ್ದಾರೆ. ಜೇಮ್ಸ್ ಕ್ಯಾಮೆರೂನ್ ರಾಮ್ ಪಾತ್ರವನ್ನು ಹೊಗಳಿದ ವಿಡಿಯೋ ಅನ್ನು ಟ್ವಿಟರ್‍ ನಲ್ಲಿ ಶೇರ್‍ ಮಾಡಿ, ಗ್ಲೋಬಲ್ ಐಕಾನ್ ಜೇಮ್ಸ್ ರವರಂತಹ ನಿರ್ದೇಶಕರು ರಾಮ್ ಪಾತ್ರ ತುಂಬಾ ಇಷ್ಟ ಆಗಿದೆ ಎಂದರೇ, ಅದು ಆಸ್ಕರ್‍ ಅವಾರ್ಡ್ ಪಡೆದುಕೊಂಡಂತೆ. ರಾಮ್ ಚರಣ್ ಗೆ ಇದೊಂದು ದೊಡ್ಡ ಗೌರವ. ರಾಮ್ ಚರಣ್ ರನ್ನು ನೋಡುತ್ತಿದ್ದರೇ ತಂದೆಯಾಗಿ ನನಗೆ ತುಂಬಾ ಗೌರವವಿದೆ ಎಂದು ಚಿರು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಹೊರಬರುತ್ತಿದ್ದಂತೆ ವಿವಾದ ಶುರುವಾಗಿದೆ. RRR ಸಿನೆಮಾದಲ್ಲಿ ರಾಮ್ ಚರಣ್ ಮಾತ್ರ ನಟಿಸಿಲ್ಲ. ಎನ್.ಟಿ.ಆರ್‍ ರವರೂ ಸಹ ನಟಿಸಿದ್ದಾರೆ. ರಾಜಮೌಳಿಯವರ ಕಷ್ಟ ಸಹ ತುಂಬಾನೆ ಇದೆ. ಇದೆಲ್ಲವನ್ನೂ ಬಿಟ್ಟು ರಾಮ್ ಚರಣ್ ರವರನ್ನು ಮಾತ್ರ ಹೊಗಳುತ್ತಾ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ನಂದಮೂರಿ ಫ್ಯಾನ್ಸ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇನ್ನೂ ರಾಮ್ ಚರಣ್ ರವರ ಮಗಧೀರ ಸಿನೆಮಾದ ಸಮಯದಲ್ಲೂ ಸಹ ಇದೇ ಮಾದರಿಯಲ್ಲಿ ನಡೆದಿತ್ತು. ಆದರೆ ಆಚಾರ್ಯ ಸಿನೆಮಾ ಡಿಜಾಸ್ಟರ್‍ ಆದರೆ ಅದನ್ನು ನಿರ್ದೇಶಕರ ತಪ್ಪು ಎಂಬಂತೆ ಆರೋಪಿಸಿದ್ದಾರೆ ಎಂದು ನಂದಮೂರಿ ಫ್ಯಾನ್ಸ್ ಹೇಳುತ್ತಿದ್ದರೇ, ಮತ್ತೊಂದು ಕಡೆ ಮೆಗಾ ಅಭಿಮಾನಿಗಳೂ ಸಹ ಅದೇ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಜೇಮ್ಸ್ ರಂತಹ ದೊಡ್ಡ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರೇ ಅದು ಎಂತಹ ತಂದೆಗಾದರೂ ಸಂತೋಷ ಆಗೋದು ಸಹಜ. ಆದರೆ ಈ ರೀತಿಯಲ್ಲಿ ವಿವಾದ ಮಾಡುವುದು ಏಕೆ ಎಂದು ಹೇಳುತ್ತಿದ್ದಾರೆ. ಇನ್ನೂ ಈ ವಿವಾದ ಬಿಡಬೇಕೆಂದು ಸಾಮಾನ್ಯ ಪ್ರೇಕ್ಷಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Most Popular

To Top