ಮಗು ಆದ ಬಳಿಕ ಆ ಕಾಟ ಹೆಚ್ಚಾಯ್ತು ಎಂದ ನಟಿ, ಸೀಕ್ರೇಟ್ ಹೊರಹಾಕಿದ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್….!

Follow Us :

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ಸಂದರ್ಶನವೊಂದರಲ್ಲಿ ನಟಿ ಆಲಿಯಾ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. ಮಗು ಜನಿಸಿದ ಬಳಿಕ ಆಕೆಗೆ ಆ ಕಾಟ ಹೆಚಾಯ್ತಂತೆ. ಅದು ಏನು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸ್ಟಾರ್‍ ನಟಿ ಆಲಿಯಾ ಭಟ್ ಯಂಗ್ ಏಜ್ ನಲ್ಲೇ ಸ್ಟೂಡೆಂಟ್ ಆಫ್ ದಿ ಇಯರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಕಳೆದ ವರ್ಷದ ಏಪ್ರಿಲ್ ಮಾಹೆಯಲ್ಲಿ ಬಾಲಿವುಡ್ ನಟ ರಣವೀರ್‍ ಕಪೂರ್‍ ಜೊತೆಗೆ ಮದುವೆಯಾದರು. ನವೆಂಬರ್‍ ಮಾಹೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇನ್ನೂ ಸಾಮಾನ್ಯವಾಗಿ ತಾಯಿಯಾದ ಬಳಿಕ ಮಹಿಳೆಯರ ದೇಹದಲ್ಲಿ ಅನೇಕ ವ್ಯತ್ಯಾಸಗಳಾಗುತ್ತವೆ. ಆದರೆ ಆಲಿಯಾ ಮಾತ್ರ ಫಿಟ್ ನೆಸ್ ಹಾಗೂ ಹೊಳೆಯುವ ಸ್ಕಿನ್ ಹೊಂದಿದ್ದಾರೆ. ಮಗುವಾದರೂ ಸಹ ಆಕೆ ಮೊದಲಿನಂತೆ ಇರುವುದು ಅನೇಕರಿಗೆ ಆಶ್ಚರ್ಯ ಬರುವಂತೆ ಮಾಡಿದೆ. ಇನ್ನೂ ಇತ್ತೀಚಿಗೆ ಆಲಿಯಾ ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.

ಇನ್ನೂ ನಟಿ ಆಲಿಯಾ ಭಟ್ ತನ್ನ ಯೂಟೂಬ್ ಚಾನೆಲ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ತಮ್ಮ ಚರ್ಮದ ಸೌಂದರ್ಯ ಕಾಪಾಡಿಕೊಂಡ ದಿನಚರಿ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇನ್ನೂ ಗರ್ಭಿಣಿಯಾದಾಗ ಆಕೆ ಎದುರಿಸಿದ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊಡವೆಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಕೆಲವೊಂದು ಪರಿಹಾರಗಳನ್ನೂ ಸಹ ಸೂಚಿಸಿದ್ದಾರೆ. ಗರ್ಭಿಣಿಯಾದಾಗ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಚರ್ಮ ಕಾಪಾಡಿಕೊಳ್ಳಲು ಆಕೆ ಕೆಲವೊಂದು ಉತ್ಪನ್ನಗಳನ್ನು ಪ್ರಯತ್ನಿಸಿ ಸೋತ ಬಗ್ಗೆ ಸಹ ಹೇಳಿದ್ದಾರೆ. ಇನ್ನೂ ಬಹುತೇಕ ಮಹಿಳೆಯರಂತೆ ಆಲಿಯಾಗೆ ಮೊಡವೆ ಸಮಸ್ಯೆ ಸಹ ಕಾಡಿತ್ತಂತೆ. ಈ ಬಗ್ಗೆ ಮಾತನಾಡಿ ಆಲಿಯಾ ನಾನು ಸಹ ಎಲ್ಲಾ ಹುಡುಗಿಯರಂತೆ ಚರ್ಮದ ವಿಷಯದಲ್ಲಿ ತುಂಬಾ ಸಮಸ್ಯೆ ಕಂಡಿದ್ದೆ. ಮಗು ಆದ ಬಳಿಕ ಮೊಡವೆಗಳ ಕಾಟ ಹೆಚ್ಚಾಗಿತ್ತು. ನನ್ನದು ಮಿಕ್ಸ್ಡ್ ಸ್ಕಿನ್ ಟೋನ್, ಕೆಲವೊಮ್ಮೆ ಡ್ರೈ ಆಗುತ್ತೆ, ಮತ್ತೊಮ್ಮೆ ಜಿಡ್ಡು ಜಿಡ್ಡಾಗಿರುತ್ತದೆ. ಅದರಿಂದ ನನ್ನ ಚರ್ಮದ ಬಗ್ಗೆ ಹೇಳುವುದು ತುಂಬಾನೆ ಕಷ್ಟ ಎಂದಿದ್ದಾರೆ.

ಇನ್ನೂ ಮಗು ಜನಿಸಿದ ಬಳಿಕ ನಾನು ಫಿಟ್ ನೆಸ್ ನತ್ತ ತುಂಬಾ ಗಮನ ಹರಿಸಿದೆ. ಎಲ್ಲರೂ ನನ್ನ ದೇಹದ ರೂಪ ನೋಡಿ ಶಾಕ್ ಆದರು. ನಿಧಾನವಾಗಿ ನಾನು ನನ್ನ ಶರೀರವನ್ನು ಮೊದಲಿನಂತೆ ಮಾಡಲು ಪ್ರಯತ್ನ ಮಾಡಿದ್ದೆ. ಈ ಹಾದಿಯಲ್ಲೇ ನಾನು ಮೊದಲಿನಂತೆ ಫಿಟ್ ನೆಸ್ ಸಂಪಾದಿಸಿಕೊಂಡೆ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಸಹ ಆಗುತ್ತಿದೆ.