Film News

68ನೇ ವಯಸ್ಸಿನಲ್ಲಿ ವಿಶ್ವಂಭರ ಸಿನೆಮಾಗಾಗಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಚಿರು, ವೈರಲ್ ಆದ ವಿಡಿಯೋ……!

ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮೆಗಾಸ್ಟಾರ್‍ ಚಿರಂಜೀವಿಯವರು 68 ವರ್ಷ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಅವರ ನೃತ್ಯ ಕಂಡರೇ ಯಂಗ್ ನಟರೂ ಸಹ ಸುಸ್ತಾಗುತ್ತಾರೆ ಎಂದು ಹೇಳಬಹುದಾಗಿದೆ. ಸದ್ಯ ಚಿರಂಜೀವಿಯವರು ವಿಶ್ವಂಭರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗಾಗಿ ಅವರು ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೆಗಾಸ್ಟಾರ್‍ ಚಿಂರಜೀವಿ ಕಡಿಮೆ ಸಮಯದಲ್ಲೇ ಭಾರಿ ಫೇಂ ಪಡೆದುಕೊಂಡರು. ಯಾವುದೇ ಸಿನೆಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ಟಾರ್‍ ನಟರಾಗಿದ್ದಾರೆ. ಮೆಗಾಸ್ಟಾರ್‍ ರವರಿಗೆ 68 ವರ್ಷ ವಯಸ್ಸಾದರೂ ಸಹ ಯಂಗ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಚಿರಂಜೀವಿಯವರು ವಾಲ್ತೇರು ವೀರಯ್ಯ ಸಿನೆಮಾದಲ್ಲೂ ತುಂಬಾನೆ ಯಂಗ್ ಆಗಿ ಕಾಣಿಸಿಕೊಂಡಿದ್ದರು. ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಚಿರು ತುಂಬಾ ಯಂಗ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದೀಗ ಚಿರಂಜೀವಿಯವರು ವಿಶ್ವಂಭರ ಎಂಬ ಫ್ಯಾಂಟಸಿ ಆಧಾರಿತ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಚಿರು ವಿಭಿನ್ನವಾದ ಶೇಡ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮೂರು ಲೋಕಗಳಲ್ಲೂ ಸಂಚರಿಸುತ್ತಾರೆ ಎಂಬ ಪ್ರಚಾರ ಸಹ ಜೋರಾಗಿದೆ.

ಈ ಸಿನೆಮಾಗಾಗಿ ಚಿರಂಜೀವಿಯವರು ಜಿಮ್ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಅವರು ಗಂಟೆ ಗಟ್ಟಲೇ ಜಿಮ್ ಮಾಡುವುದು ಪ್ರಮಾದವಾದುದು ಎಂದು ಹೇಳಬಹುದಾಗಿದೆ. ಆದರೆ ಚಿರಂಜೀವಿ ಪಟ್ಟು ಹಿಡಿದರೇ ಮಾತ್ರ ಅದನ್ನು ಮಾಡದೇ ಇರಲಾರೆರು. ಇದೀಗ ಈ ಚಾಲೆಂಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ವಿಡಿಯೋ ಒಂದನ್ನು ಮೆಗಾಸ್ಟಾರ್‍ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚಿರು ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಸಿನೆಮಾಗಾಗಿ ಅವರು ದೇಹ ದಂಡನೆ ಮಾಡುತ್ತಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಶ್ವಂಭರ ಸಿನೆಮಾದಲ್ಲಿ ಚಿರಂಜೀವಿ ಲುಕ್ ಹೇಗಿರಲಿದೆ ಎಂಬ ಕುತೂಹಲ ಸಹ ಎಲ್ಲರಲ್ಲೂ ಮನೆ ಮಾಡಿದೆ.

ಇನ್ನೂ ಈ ಸಿನೆಮಾದ ಜೊತೆಗೆ ಮತ್ತೊಂದು ಸಿನೆಮಾ ಸಹ ಶೀಘ್ರದಲ್ಲೇ ಘೋಷಣೆಯಾಗಲಿದೆಯಂತೆ. ಈ ಸಿನೆಮಾ ಮೆಗಾಸ್ಟಾರ್‍ ಪುತ್ರಿ ಸುಸ್ಮಿತ ಹಾಗೂ ಪೀಪುಲ್ಸ್ ಮಿಡಿಯಾ ಫ್ಯಾಕ್ಟರಿ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಪವನ್ ಕಲ್ಯಾಣ್ ಜೊತೆಗೆ ಕೆಲಸ ಮಾಡುತ್ತಿರುವ ನಿರ್ದೇಶಕರೊಬ್ಬರು ಈ ಸಿನೆಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರಂಜೀವಿಯವರು ಪದ್ಮವಿಭೂಷಣ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ.

Most Popular

To Top