News

31 ವರ್ಷಗಳ ಬಳಿಕ ಗ್ಯಾನವಾಪಿ ಮಸೀದಿಯೊಳಗೆ ಪ್ರತಿನಿತ್ಯ ಐದು ಬಾರಿ ಹಿಂದೂ ದೇವರ ಪೂಜೆ, ವೈರಲ್ ಆದ ಪೊಟೋಗಳು….!

ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ತರ ಸುದ್ದಿಯೊಂದು ಹೊರಬಂದಿದೆ. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸರ್ವೆಯಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನಾ ಆ ಜಾಗದಲ್ಲಿ ಮಂದಿರವಿತ್ತು ಎಂದು ವರದಿಯಲ್ಲಿ ಬಹಿರಂಗವಾಗಿತ್ತು.  ಇದೀಗ 31 ವರ್ಷಗಳ ಬಳಿಕ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವ್ಯಾಸ್ ಕೆ ಠಿಖಾನಾ ದಲ್ಲಿನ ಶೃಂಗಾರ ಗೌರಿ ಸೇರಿದಂತೆ ಹಿಂದೂ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗಿದೆ.

ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್ ಸದಸ್ಯರು, ವ್ಯಾಸ ಕುಟುಂಬದ ಅರ್ಚಕರು ಗ್ಯಾನವಾಪಿಯೊಳಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಮುಂದೆ ಪ್ರತಿನಿತ್ಯ 5 ಬಾರಿ ಗ್ಯಾನವಾಪಿ ಮಸೀದಿಯೊಳಗಿರುವ ಹಿಂದೂ ಮೂರ್ತಿಗಳಿಗೆ ಪೂಜೆ, ಆರತಿ, ಶಂಖನಾದ ನೆರವೇರಲಿದೆ. ಈ ಶಂಖನಾದ ಆವರಣದ ಹೊರಗಿರುವ ನಂದಿಗೂ ಸಹ ಕೇಳಿಸಲಿದೆ ಎಂದು ಹೇಳಲಾಗಿದೆ. ಗ್ಯಾನವಾಪಿ ಪೂಜೆಗೆ ವಾರಣಾಸಿ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಶಾಸ್ತ್ರದಂತೆ ಪೂಜೆ ನೆರವೇರಲಿದೆ. ಪ್ರತಿನಿತ್ಯ 5 ಬಾರಿ ಅಂದರೇ ಮುಂಜಾನೆ 3.30. ಕ್ಕೆ ಮಂಗಳ ಆರತಿ, ಮದ್ಯಾಹ್ನ 12 ಗಂಟೆಗೆ ಭೋಗ ಆರತಿ, ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಯಂಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ನಡೆಯಲಿದೆ ಎಂದು ವಕೀಲ ವಿಷ್ಣುಶಂಕರ್‍ ಜೈನ್ ಮಾಹಿತಿ ನೀಡಿದ್ದಾರೆ.

ಗ್ಯಾನವಾಪಿ ಮಸೀದಿಯಲ್ಲಿದ್ದ ಹಿಂದೂ ದೇವತೆಗಳಿಗೆ ಹಿಂದೂ ಪೂಜಾ ಪದ್ದತಿಯಂತೆ ಆರತಿ ವೇಳೆ ಗಂಟೆ, ಶಂಖನಾದ ಮೊಳಗಲಿದೆ. ನಿಲ್ಲಿಸಲಾದ ಪೂಜಾ ವಿಧಿವಿಧಾನಗಳನ್ನು ಮತ್ತೆ ಆರಂಭಿಸಲಾಗಿದೆ. ಇನ್ನೂ ಪೂಜೆ ಸಲ್ಲಿಸಿರುವ ವ್ಯಾಸ ಕುಟುಂಬದ ಅರ್ಚಕ ಜಿತೇಂದ್ರನಾಥ ವ್ಯಾಸ ಸಂತಸ ವ್ಯಕ್ತಪಡಿಸಿದ್ದಾರೆ. ಮಸೀದಿಯಲ್ಲಿರುವ ವ್ಯಾಸ್ ಕೆ ಠಿಖಾನಾ ಸಂಕೀರ್ಣ ವ್ಯಾಸ ಕುಟುಂಬದ ವಶದಲ್ಲಿದೆ ಎಂದು ಹೇಳಲಾಗಿದೆ. 31 ವರ್ಷಗಳಿಂದ ಗ್ಯಾನವಾಪಿಯಲ್ಲಿ ಪೂಜೆ ಸಲ್ಲಿಸಲು ಅವಕಾಶವಿರಲಿಲ್ಲ. ಕೋರ್ಟ್ ನೀಡಿರುವ ಅನುಮತಿಯಿಂದ ಸುಮಾರು ವರ್ಷಗಳಿಂದ ಗ್ಯಾನವಾಪಿಯಲ್ಲಿರುವ ಮಹದೇವನಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದಂತಾಗಿದೆ ಎಂದು ಜೀತೇಂದ್ರನಾಥ ವ್ಯಾಸ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಗ್ಯಾನವಾಪಿ ಅಂಜುಮ್ ಇನ್ತೇಜಾಮಿಯಾ ಮಸೀದಿ ಸಮಿತಿಯು ಹಿಂದೂಗಳಿಗೆ ಪೂಜೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿತ್ತು. ಕೋರ್ಟ್ ಹಿಂದೂಗಳಿಗೆ ಪೂಜೆ ಸಲ್ಲಿಸಲು ನೀಡಿದ್ದ ಅನುಮತಿಯಲ್ಲಿ ತಡೆಹಿಡಿಯಬೇಕು, ಗ್ಯಾನವಾಪಿಯಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ.

Most Popular

To Top