Film News

ಅತಿಥಿ ಪಾತ್ರಕ್ಕಾಗಿ ಬರೊಬ್ಬರಿ 40 ಕೋಟಿ ಸಂಭಾವನೆ ಪಡೆದುಕೊಂಡ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್…..!

ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲು ಕಂಡರೂ ಸಹ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ. ಇದೀಗ ಲಾಲ್ ಸಲಾಂ ಸಿನೆಮಾದಲ್ಲಿನ ಅತಿಥಿ ಪಾತ್ರಕ್ಕಾಗಿ ಬರೊಬ್ಬರಿ 40 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ಸೋಲುಗಳನ್ನು ಕಂಡರೂ ಸಹ ಅವರ ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ. ಈ ಕಾರಣದಿಂದ ಅವರು ಅನೇಕ ವಿಮರ್ಶೆಗಳನ್ನೂ ಸಹ ಎದುರಿಸಿದ್ದರು. ಕೊನೆಯದಾಗಿ ಅವರು ಜೈಲರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿದ್ದು, ಈ ಸಿನೆಮಾದ ಬಳಿಕ ರಜನಿಕಾಂತ್ ರವರ ಕ್ರೇಜ್ ಮತಷ್ಟು ಏರಿದೆ ಎಂದೇ ಹೇಳಲಾಗುತ್ತಿದೆ. ಜೊತೆಗೆ ಮತಷ್ಟು ಉತ್ಸಾಹದಿಂದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಜನಿಕಾಂತ್ ರವರು ತನ್ನ ಪುತ್ರಿ ಐಶ್ವರ್ಯ ರಜನಿಕಾಂತ್ ರವರ ನಿರ್ದೇಶನದಲ್ಲಿ ಲಾಲ್ ಸಲಾಂ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಆತ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಲಾಲ್ ಸಿನೆಮಾವನ್ನು ಅವರ ಸಿನೆಮಾ ಎಂದೇ ಪ್ರಮೋಟ್ ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಸಿನೆಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರೋಷ, ತಂಗದೊರೈ ಹಾಗೂ ಧನ್ಯ ಬಾಲಕೃಷ್ಣನ್ ರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕ್ರಿಕೆಟ್ ಕಥೆಯನ್ನು ಈ ಸಿನೆಮಾ ಒಳಗೊಂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‍.ರೆಹಮಾನ್ ಮ್ಯೂಜಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಆಡಿಯೋ ಸಹ ಬಿಡುಗಡೆಯಾಗಿದ್ದು, ಕೆಲವೊಂದು ಹಾಡುಗಳಿಗೆ ಒಳ್ಳೆಯ ಸ್ಪಂದನೆ ಸಹ ದೊರೆಯುತ್ತಿದೆ. ಈ ಸಿನೆಮಾ ಇದೇ ಫೆ,9 ರಂದು ತೆರೆಕಾಣಲಿದ್ದು, ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಇದೀಗ ಈ ಸಿನೆಮಾಗಾಗಿ ರಜನಿಕಾಂತ್ ರವರ ಬರೊಬ್ಬರಿ 40 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ನಟ ರಜನಿಕಾಂತ್ ರವರು ಲಾಲ್ ಸಲಾಂ ಸಿನೆಮಾದಲ್ಲಿ ಗೆಸ್ಟ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಅತಿಥಿ ಪಾತ್ರಕ್ಕಾಗಿ ಆತ ಬರೋಬ್ಬರಿ 40 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿರುವುದು ಹಾಟ್ ಟಾಪಿಕ್ ಆಗಿದೆ. ಈ ಸಿನೆಮಾದಲ್ಲಿ ಮೊಯಿದ್ದಿನ್ ಭಾಯ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಲಾಲ್ ಸಲಾಂ ಸಿನೆಮಾವನ್ನು ರಜನಿಕಾಂತ್ ರವರ ಸಿನೆಮಾ ಎಂದೇ ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿಯೇ ಲೈಕಾ ನಿರ್ಮಾಣ ಸಂಸ್ಥೆ ರಜನಿಕಾಂತ್ ಪಾತ್ರಕ್ಕೆ ಅಷ್ಟೊಂದು ಸಂಭಾವನೆ ನೀಡಿದ್ದಾರೆ ಎಂದು ಹೇಳಲಾಗಿದೆ.

Most Popular

To Top