Film News

Welcome Little Mega Princess !! ಎಂದ ಮೆಗಾಸ್ಟಾರ್, ಮೊಮ್ಮಗಳ ಆಗಮನದ ಖುಷಿಯಲ್ಲಿ ಚಿರು…..!

ಮೆಗಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದೆ. ಮೆಗಾಸ್ಟಾರ್‍ ಚಿರಂಜೀವಿ ತಾತನಾಗಿದ್ದಾರೆ. ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಹಾಗೂ ಉಪಾಸನಾ ಜೋಡಿಗೆ ಹೆಣ್ಣು ಮಗುವಿನ ಜನನವಾಗಿದೆ. ಇಂದು (ಜೂ.20) ರಂದು ಈ ಜೋಡಿಗೆ ಹೆಣ್ಣು ಮಗು ಹುಟ್ಟಿದ್ದು, ಇಡೀ ಕುಟುಂಬ ಸಂತೋಷದಿಂದ್ದಾರೆ. ಜೊತೆಗೆ ಮೆಗಾ ಫ್ಯಾನ್ಸ್ ಸಹ ಮಗುವಿಗೆ ಆರ್ಶಿವಾದ ಮಾಡುತ್ತಾ, ರಾಮ್ ಚರಣ್ ರವರಿಗೆ ಶುಭಾಷಯಗಳನ್ನು ಸಹ ಕೋರುತ್ತಿದ್ದಾರೆ. ಇನ್ನೂ ಈ ಸಂಭ್ರಮವನ್ನು ಮೆಗಾಸ್ಟಾರ್‍ ಟ್ವೀಟ್ ಮೂಲಕ ಹೊರಹಾಕಿದ್ದಾರೆ. Welcome Little Mega Princess !! ಎಂದು ಟ್ವೀಟ್ ಮಾಡಿದ್ದಾರೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಹಾಗೂ ಉಪಸಾನಾ ಜೋಡಿಗೆ ಹೆಣ್ಣು ಮಗುವಿನ ಜನನವಾಗಿದೆ. ಮೆಗಾ ಕುಟುಂಬದ ಜೊತೆಗೆ ಅಭಿಮಾನಿಗಳೂ ಸಹ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿಯವರು ಸಹ ತುಂಬಾ ಸಂತಸದಲ್ಲಿದ್ದಾರೆ. ತಮ್ಮ ಟ್ವಿಟರ್‍ ಖಾತೆಯ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮೆಗಾ ಲಿಟಲ್ ಪ್ರಿನ್ಸಸ್ ಗೆ ಸ್ವಾಗತ ಕೋರುತ್ತಾ ರಾಮ್ ಚರಣ್ ಹಾಗೂ ಉಪಾಸನಾ ರವರಿಗೆ ಶುಭಾಷಯಗಳನ್ನು ಸಹ ಕೋರಿದ್ದಾರೆ. ಇನ್ನೂ ಮೆಗಾ ಫ್ಯಾನ್ಸ್ ಸಹ #MegaPrincess ಎಂಬ ಹ್ಯಾಷ್ ಟ್ಯಾಗ್ ಮೂಲಕ ಮತಷ್ಟು ಸಂಭ್ರಮಿಸುತ್ತಿದ್ದಾರೆ. ಮೆಗಾಸ್ಟಾರ್‍ ಮೊಮ್ಮಗಳ ಆಗಮನವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಟ್ವಿಟರ್‍ ಮೂಲಕ ಮೆಗಾಸ್ಟಾರ್‍ ಸಂತಸ ಹಂಚಿಕೊಂಡಿದ್ದಾರೆ. ಲಿಟಲ್ ಮೆಗಾ ಪ್ರಿನ್ಸಸ್ ಗೆ ಸ್ವಾಗತ. ನಿನ್ನ ಆಗಮನದಿಂದ ಕೋಟ್ಯಂತರ ಮೆಗಾ ಫ್ಯಾಮಿಲಿಯ ಸದಸ್ಯರಲ್ಲಿ ಸಂತಸ ತಂದಿದ್ದೀಯಾ. ರಾಮ್ ಚರಣ್ ಉಪಾಸನಾ ರವರಿಗೆ ಆರ್ಶಿವಾದವಿದೆ. ತಾತನಾಗಿರುವುದಕ್ಕೆ ತುಂಬಾ ಸಂತೋಷ ಹಾಗೂ ಗರ್ವದಿಂದ ಇದ್ದೀನಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ನಿನ್ನೆ ರಾತ್ರಿ ಉಪಾಸನಾ ಕೊಣಿದೆಲಾ ಹೈದರಾಬಾದ್ ನಲ್ಲಿನ ಜೂಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎಲ್ಲಾ ಪರೀಕ್ಷೆಗಳ ಬಳಿಕ ವೈದ್ಯರು ಇಂದು ಬೆಳಿಗ್ಗೆ ಡಿಲಿವರಿ ಮಾಡಿದರು. ಮುದ್ದಾದ ಹೆಣ್ಣು ಮಗುವಿಗೆ ಉಪಾಸನಾ ಜನ್ಮಕೊಟ್ಟಿದ್ದಾರೆ ಎಂಬ ವಿಚಾರವನ್ನು ಅಪೊಲೋ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದರು. ಇನ್ನೂ ಈ ಸಂತಸದ ಸುದ್ದಿ ಹೊರಬರುತ್ತಿದ್ದಂತೆ ಎಲ್ಲರೂ ಸಂತೋಷದಿಂದ ಸಂಭ್ರಮಿಸಿದರು. ಇನ್ನೂ ಮೆಗಾ ಪ್ರಿನ್ಸಸ್ ಆಗಮನಕ್ಕೆ ಅಲ್ಲುಅರ್ಜುನ್, ಜೂನಿಯರ್‍ ಎನ್.ಟಿ.ಆರ್‍ ಸೇರಿದಂತೆ ಅನೇಕ ಸ್ಟಾರ್‍ ನಟರೂ ಸಹ ಶುಭಾಷಯಗಳ ಜೊತೆಗೆ ನವಜಾತ ಶಿಶುವಿಗೆ ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ರಾಮ್ ಚರಣ್ ಸಹ ತನ್ನ ಮಗುವಿನ ಆಗಮನಕ್ಕಾಗಿ ತನ್ನ ಶೂಟಿಂಗ್ ಕೆಲಸಗಳನ್ನು ಮೂರು ತಿಂಗಳ ವರೆಗೂ ಮುಂದೂಡಿದ್ದಾರೆ. ಈ ಮೂರು ತಿಂಗಳು ತಮ್ಮ ಕುಟುಂಬದೊಂದಿಗೆ ಕಳೆಯಲು ಪ್ಲಾನ್ ಮಾಡಿದ್ದಾರಂತೆ. ಸದ್ಯ ಮೆಗಾ ಪ್ರಿನ್ಸಸ್ ಆಗಮನದಿಂದ ಇಡೀ ಮೆಗಾ ಕುಟುಂಬದ ಜೊತೆಗೆ ಮೆಗಾ ಫ್ಯಾನ್ಸ್ ಸಹ ಪುಲ್ ಖುಷಿಯಾಗಿದ್ದಾರೆ.

Most Popular

To Top