Film News

ರಾಜಕೀಯದ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಸಂಚಲನಾತ್ಮಕ ಹೇಳಿಕೆ, ಇಂದಿನ ರಾಜಕೀಯಕ್ಕೆ ನಾನು ಅನರ್ಹ ಎಂದ ಚಿರು…..!

ಸ್ವಯಂ ಕೃಷಿಯಿಂದ ನಟನಾಗಿ ಎಂಟ್ರಿ ಕೊಟ್ಟು ಮೆಗಾಸ್ಟಾರ್‍ ಆದ ಚಿರಂಜೀವಿ ಈಗಲೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಜೊತೆಗೆ ಬ್ಲಡ್ ಬ್ಯಾಂಕ್, ಐ ಬ್ಯಾಕ್ ಗಳನ್ನು ಸ್ಥಾಪನೆ ಮಾಡಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದಾರೆ. ಮತಷ್ಟು ಜನರ ಸೇವೆ ಮಾಡುವ ನಿಟ್ಟಿನಲ್ಲಿ ಪ್ರಜಾರಾಜ್ಯಂ ಎಂಬ ಪಾರ್ಟಿ ಸ್ಥಾಪನೆ ಮಾಡಿದ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಇದೀಗ ಅವರು ರಾಜಕೀಯದ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಜನರ ಸೇವೆ ಮಾಡುವ ದೃಷ್ಟಿಯಿಂದ ಮೆಗಾಸ್ಟಾರ್‍ ಚಿರಂಜೀವಿಯವರು ಪ್ರಜಾರಾಜ್ಯಂ ಎಂಬ ಪಾರ್ಟಿಯನ್ನು ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಪಕ್ಷ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದರೂ ಬಳಿಕ ಅವರು ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಸಿಗಲಿಲ್ಲ. ಸದ್ಯ ಚಿರಂಜೀವಿ ರಾಜಕೀಯಕ್ಕೆ ಸಂಪೂರ್ಣವಾಗಿ ದೂರವಿದ್ದಾರೆ. ಇದೀಗ ಅವರು ರಾಜಕೀಯದ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವು ವೈರಲ್ ಆಗುತ್ತಿವೆ. ನನ್ನಂತಹವನು ರಾಜಕೀಯದಲ್ಲಿ ಅನರ್ಹ, ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಮೂಲಕ ಸೇವೆ ಮಾಡಿದ ನಾನು ಮತಷ್ಟು ಸೇವೆ ಮಾಡುವ ನಿಟ್ಟಿನಲ್ಲಿ ರಾಜಕೀಯಕ್ಕೆ ಹೋದೆ. ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿ ತಪ್ಪು ಮಾಡಿ ಮತ್ತೆ ವಾಪಸ್ಸು ಬಂದೆ. ರಾಜಕೀಯದಲ್ಲಿ ಇನ್ನು ದೊಡ್ಡ ಮಟ್ಟದ ಸೇವೆ ಮಾಡಲು ಭಾವಿಸಿದ್ದೆ. ಆದರೆ ನನ್ನಂತಹ ವ್ಯಕ್ತಿ ರಾಜಕೀಯಕ್ಕೆ ಅನರ್ಹ ಎಂಬುದು ನಿಜ ಎಂದರು.

ನಾನು ರಾಜಕೀಯಕ್ಕೆ ಹೋಗಿ ಮತ್ತೆ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಟ್ಟ ಸಮಯದಲ್ಲಿ ಹಿಂದಿನಂತೆ ಪ್ರೋತ್ಸಾಹ ನೀಡುತ್ತಾರಾ ಎಂಬ ಅನುಮಾನ ನನಗಿತ್ತು. ಆದರೆ ಜನರು ನನಗೆ ಅದೇ ರೀತಿಯ ಪ್ರೀತಿ ಅಭಿಮಾನ ತೋರಿಸಿದರು. ಇಂದಿಗೂ ನಾನು ನಿಮ್ಮ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಇನ್ನು ಬದುಕಿದಷ್ಟು ದಿನ ಸಿನೆಮಾಗಳಲ್ಲಿರುತ್ತೇನೆ, ಜೀವ ಇರುವವರೆಗೂ ಅಭಿಮಾನಿಗಳಿಗಾಗಿ ಸಿನೆಮಾಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಚಿರಂಜೀವಿಯವರ  ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಸದ್ಯ ಮೆಗಾಸ್ಟಾರ್‍ ಚಿರಂಜೀವಿ ವಿಶ್ವಂಭರ ಎಂಬ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ತ್ರಿಷಾ ಸಹ ಬಣ್ಣ ಹಚ್ಚಿದ್ದು, ಸಿನೆಮಾದ ಶೂಟೀಂಗ್ ಭರದಿಂದ ಸಾಗುತ್ತಿದೆ.

Most Popular

To Top