ಚಿನ್ನಾ ಸಿನೆಮಾಗೆ ಮೃಗಂ ಎಂದು ಹೆಸರಿಟ್ಟಿದ್ದರೇ ಸೂಪರ್ ಹಿಟ್ ಆಗುತ್ತಿತ್ತು ಎಂದು ಎಮೋಷನಲ್ ಆದ ನಟ ಸಿದ್ದಾರ್ಥ್….!

Follow Us :

ಕಾಲಿವುಡ್ ನಟ ಸಿದ್ದಾರ್ಥ್ ರವರನ್ನು ಸಿನಿರಂಗದಲ್ಲಿ ಲವರ್‍ ಬಾಯ್ ಎಂತಲೇ ಕರೆಯುತ್ತಾರೆ. ಆತ ಸೌತ್ ಸಿನಿರಂಗದ ಅನೇಕ ನಟಿಯರ ಜೊತೆಗೆ ಡೇಟ್ ಮಾಡಿದ್ದಾನೆ ಎಂಬ ರೂಮರ್‍ ಗಳೂ ಸಹ ಕೇಳಿಬಂದಿವೆ. ಕೆಲವು ದಿನಗಳ ಹಿಂದೆಯಷ್ಟೆ ಆತ ನಟಿ ಅದಿತಿ ರಾವ್ ಹೈದರಿ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ತಮ್ಮ ಸಿನೆಮಾದ ಬಗ್ಗೆ ಮಾತನಾಡುತ್ತಾ ಎಮೋಷನಲ್ ಆಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಓಯ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟ ಸಿದ್ದಾರ್ಥ್ ಅನೇಕ ಹಿಟ್ ಗಳನ್ನು ಪಡೆದುಕೊಂಡರು. ಸುಮಾರು ಎರಡು ದಶಕಗಳ ಕಾಲ ವೈವಿದ್ಯಮಯವಾದ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬೊಮ್ಮರಿಲ್ಲು, ನುವ್ವು ವಸ್ತಾನಂತೆ ನೆನೊದ್ದಂಟಾನ, ಚುಕ್ಕಲೋ ಚಂದ್ರುಡು ಮೊದಲಾದ ಹಿಟ್ ಸಿನೆಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಬಳಿಕ ತೆಲುಗು ಸಿನಿರಂಗಕ್ಕೆ ದೂರವಾಗಿ ಅವರು ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾದರು. ಇತ್ತೀಚಿಗಷ್ಟೆ ಚಿತ್ತಾ (ಚಿನ್ನಾ) ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಸಿನೆಮಾದ ಪ್ರಮೋಷನ್ ಸಮಯದಲ್ಲೂ ಸಹ ಅವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಿದ್ದರು. ಇದೀಗ ತಮಿಳುನಾಡಿನಲ್ಲಿ ನಡೆದ ಅವಾರ್ಡ್ ಫಂಕ್ಷನ್ ಒಂದರಲ್ಲಿ ಎಮೋಷಲ್ ಆಗಿದ್ದಾರೆ.

ಇತ್ತೀಚಿಗೆ ಚೆನೈನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ರವರ ಚಿತ್ತಾ ಸಿನೆಮಾಗಾಗಿ ಮ್ಯಾನ್ ಆಫ್ ದಿ ಇಯರ್‍ ಅವಾರ್ಡ್ ಪಡೆದುಕೊಂಡರು. ಅವಾರ್ಡ್ ಪಡೆದುಕೊಂಡು ಮಾತನಾಡಿದ ಅವರು, ತಮ್ಮ ಸಿನೆಮಾ ನೋಡಿ ಪ್ರೋತ್ಸಾಹ ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಸಿನೆಮಾ ನೋಡಿ ಕೆಲವರು ಡಿಸ್ಟರ್ಬ್ ಆಗಿದ್ದಾಗಿ ಕೆಲವರು ಕಾಮೆಂಟ್ ಗಳನ್ನು ಮಾಡಿದ್ದರು. ಈ ಬಗ್ಗೆ ಅವರು ಅಸಹನೆ ವ್ಯಕ್ತಪಡಿಸಿದರು. ಇತ್ತೀಚಿಗೆ ಹಿಟ್ ಆದ ಬಾಲಿವುಡ್ ಸಿನೆಮಾಗೆ ಕೆಲವರು ಯಾವುದೇ ಕಿರಿಕಿರಿಯಿಲ್ಲದೇ ನೋಡಿದ್ದಾಗಿ ಹೇಳಿದ್ದಾರೆ. ಮನಸ್ಸಿಗೆ ತಾಗುವಂತಹ ಕಥೆಯ ಸಿನೆಮಾ ಮಾಡಿದರೇ ಮಾತ್ರ ತುಂಬಾ ಕಿರಿಕಿರಿಯಾಗಿ ಅನ್ನಿಸುತ್ತದೆ, ಸಿನೆಮಾ ನೋಡೋಕೆ ಆಗಲಿಲ್ಲ ಎಂದು ಕಾಮೆಂಟ್ ಮಾಡುವುದು ನಾಚಿಕೆಗೇಡಿನ ಮನಸ್ಥಿತಿ ಎಂದು, ಚಿತ್ತಾ ಸಿನೆಮಾಗೆ ಮೃಗಂ ಎಂದು ಹೆಸರು ಇಟ್ಟಿದ್ದರೇ ಯಾವುದೇ ಸಮಸ್ಯೆಯಿಲ್ಲದೇ ನೋಡ್ತಾ ಇದ್ದರು ಎಂದು ಎಮೋಷನಲ್ ಆಗಿದ್ದಾರೆ. ಸಿದ್ದಾರ್ಥ್ ನೀಡಿದ ಈ ಹೇಳಿಕೆಗಳು ಹಾಟ್ ಟಾಪಿಕ್ ಆಗಿದೆ.