ನೀರಿನ ಮಿತಬಳಕೆಗೆ ವಿಚಿತ್ರ ಸಲಹೆ, ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ ಎಂದ ಬೊಗೋಟಾ ಮೇಯರ್….!

Follow Us :

ನೀರಿಗಾಗಿ ವಿಶ್ವದ ಅನೇಕ ಕಡೆ ಹಾಹಾಕಾರ ಶುರುವಾಗಿದೆ. ಈ ಬಾರಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ನೀರಿಗೆ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಅದೇ ರೀತಿ ವಿಶ್ವದ ಅನೇಕ ಕಡೆ ನೀರಿಗೆ ಕೊರತೆಯುಂಟಾಗಿದ್ದು, ದಕ್ಷಣಿ ಅಮೇರಿಕಾ ಬೊಗೋಟಾ ನಗರದಲ್ಲೂ ನೀರಿನ ಅಭಾವ ಸೃಷ್ಟಿಯಾಗಿದ್ದು, ಬೊಗೋಟಾ ಮೇಯರ್‍ ಜನರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಅಮೇರಿಕಾದ ಬೊಗೋಟಾ ನಗರದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದು, ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಜನರ ಜೀವಾಳವಾಗಿರುವಂತಹ ಜಲಾಶಯಗಳೇ ಬತ್ತಿಹೋಗುತ್ತಿವೆ. ಈ ಕಾರಣದಿಂದ ಜನರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬೊಗೋಟಾ ಮೇಯರ್‍ ಜನರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ತಾವು ಒಂಟಿಯಾಗಿ ಸ್ನಾನ ಮಾಡುವುದರ ಬದಲಿಗೆ ತಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರು ಉಳಿಸಿ ಎಂದು ವಿಚಿತ್ರ ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ಈ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಇತ್ತೀಚಿಗೆ ಬೊಗೋಟಾ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ತಡೆಯಲಾಗಿದೆಯಂತೆ. ಈ ಕಾರಣದಿಂದ ಬೊಗೋಟಾ ಮೇಯರ್‍ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ತಮ್ಮ ಮನೆಗಳಲ್ಲಿ ತಾವು ಜೋಡಿಯಾಗಿ ಸ್ನಾನ ಮಾಡುವ ಮೂಲಕ ನೀರು ಮಿತವ್ಯಯ ಬಳಕಯೆ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ನೀರಿನ ಪೋಲನ್ನು ತಡೆಗಟ್ಟಬಹುದು. 1980ರ ಬಳಿಕ ಬೊಗೋಟಾ ನಗರದಲ್ಲಿ ಅಪಾರ ಪ್ರಮಾಣದ ಜಲಕ್ಷಾಮ ಉದ್ಬವವಾಗಿದೆ. ಜಲಾಶಯದ ಮಟ್ಟ ಸಹ ಕಡಿಮೆಯಾಗಿದೆ. ಆದ್ದರಿಂದ ನೀರಿನ ಮಿತ ಬಳಕೆಗೆ ಜನರು ಮುಂದಾಗಬೇಕು. ನೀರನ್ನು ಸಮಪರ್ಕವಾಗಿ ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಸಹ ಕೈಗೊಳ್ಳುತ್ತಿದ್ದೇವೆ ಎಂದು ಗ್ಯಾಲನ್ ತಿಳಿಸಿದ್ದಾರೆ.