ಅಂತರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿದ ನಟ….!

ಟಾಲಿವುಡ್ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಎಂಬ ಪಟ್ಟ ಪಡೆದುಕೊಂಡಿದ್ದಾರೆ.  RRR ಸಿನೆಮಾಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗ್ಲೋಲ್ಡನ್ ಗ್ಲೋಬ್ ಅವಾರ್ಡ್, ಕ್ರಿಟಿಕ್ ಚಾಯ್ಸ್ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅವರು ಬಾಲಿವುಡ್ ಸ್ಟಾರ್‍ ಗಳಾದ ಶಾರೂಖ್ ಖಾನ್, ದೀಪಿಕಾ ಪಡುಕೋಣೆರವರನ್ನು ಸಹ ಹಿಂದಿಕ್ಕಿ ಅಂತರಾಷ್ಟ್ರೀಯ ಅವಾರ್ಡ್ ಪಡೆದುಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಶುಭ ಕೋರುತ್ತಿದ್ದಾರೆ.

ಸ್ಟಾರ್‍ ನಟ ರಾಮ್ ಚರಣ್ RRR ಸಿನೆಮಾದಲ್ಲಿ ನಟನಾಗಿ ವಿಶೇಷ ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ. ನಟನಾಗಿ, ಫ್ಯಾಮಿಲಿ ವ್ಯಕ್ತಿಯಾಗಿ, ವ್ಯವಸ್ತಾಪಕನಾಗಿ ಬಹುಮುಖ್ಯ ಪಾತ್ರದಲ್ಲಿ ಸಿನೆಮಾ ಬಿಡುಗಡೆಯಾದ ವರ್ಷ ಅದ್ಬುತವಾದ ವಿಜಯವನ್ನು ಪಡೆದುಕೊಂಡಿದ್ದರು. ಆ ವರ್ಷ ಪೂರ್ತಿ ಅವರು ಚರ್ಚನಿಯಾಂಶವಾದರು. ಇದೀಗ ಅವರು ಪಾಪ್ ಗೋಲ್ಡನ್ ಅವಾರ್ಡ್ 2023 ಗೆ ಸಂಬಂಧಿಸಿದ ಗೋಲ್ಡನ್ ಬಾಲಿವುಡ್ ಯಾಕ್ಟರ್‍ ಆಫ್ ದಿ ಇಯರ್‍ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಶಾರುಖ್ ಖಾನ್, ದೀಪಿಕಾ ಪಡುಕೋಣೆ ರವರೂ ಸಹ ಹಿಂದಿಕ್ಕಿ ರಾಮ್ ಚರಣ್ ಪ್ರಶಸ್ತಿ ಪಡೆದುಕೊಂಡಿರುವುದು ವಿಶೇಷ ಎನ್ನಬಹುದಾಗಿದೆ.

ಇನ್ನೂ ರಾಮ್ ಚರಣ್ ಅಂತರಾಷ್ಟ್ರೀಯ ಅವಾರ್ಡ್ ಪಡೆದುಕೊಂಡಿದ್ದು, ಅವರ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಸೊಷಿಯಲ್ ಮಿಡಿಯಾ ಮೂಲಕ ರಾಮ್ ಚರಣ್ ರವರಿಗೆ ಅಭಿಮಾನಿಗಳು, ನೆಟ್ಟಿಗರೂ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಶುಭಾಷಯಗಳ ಜೊತೆಗೆ ಮೆಚ್ಚುಗೆಯ ಕಾಮೆಂಟ್ ಗಳನ್ನೂ ಸಹ ಹರಿಬಿಡುತ್ತಿದ್ದಾರೆ. ಸದ್ಯ ರಾಮ್ ಚರಣ್ ಸ್ಟಾರ್‍ ನಿರ್ದೇಶಕ ಶಂಕರ್‍ ರವರ ನಿರ್ದೇಶನದಲ್ಲಿ ಗೇಮ್ ಚೇಂಜರ್‍ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಯಿದೆ. ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಿದ್ದಾರೆ.