News

10ನೇ ತರಗತಿ, ಐಟಿಐ ಪಾಸ್ ಆದವರಿಗೆ ಭರ್ಜರಿ ಅವಕಾಶ, ಭಾರತೀಯ ನೌಕಾ ಸೇನೆಯಲ್ಲಿ 910 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!

ಭಾರತೀಯ ನೌಕಾ ಸೇನೆಯಲ್ಲಿ ಖಾಲಿಯಿರುವಂತಹ ವಿವಿಧ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೌಕಾಸೇನೆಯಲ್ಲಿ ಖಾಲಿಯಿರುವಂತಹ 910 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಟ್ರೇಡ್ಸ್ ಮ್ಯಾನ್ ಹಾಗೂ ಹಿರಿಯ ಡ್ರಾಫ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಡಿ.31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ಸಂಖ್ಯೆ: ಚಾರ್ಜ್‌ಮ್ಯಾನ್ (ಮದ್ದುಗುಂಡುಗಳ ಕಾರ್ಯಾಗಾರ) 22, ಚಾರ್ಜ್‌ಮ್ಯಾನ್​ (ಫ್ಯಾಕ್ಟರಿ) 20, ಹಿರಿಯ ಡ್ರಾಫ್ಟ್‌ಮ್ಯಾನ್ (ಎಲೆಕ್ಟ್ರಿಕಲ್) 142, ಹಿರಿಯ ಡ್ರಾಫ್ಟ್‌ಮ್ಯಾನ್ (ಮೆಕ್ಯಾನಿಕಲ್) 26,  ಹಿರಿಯ ಡ್ರಾಫ್ಟ್‌ಮ್ಯಾನ್ (ನಿರ್ಮಾಣ) 29,  ಹಿರಿಯ ಡ್ರಾಫ್ಟ್‌ಮ್ಯಾನ್ (ಕಾರ್ಟೊಗ್ರಾಫಿಕ್) 11,  ಹಿರಿಯ ಡ್ರಾಫ್ಟ್‌ಮ್ಯಾನ್ (ಶಸ್ತ್ರಾಸ್ತ್ರ) 50,  ವ್ಯಾಪಾರಿ (ಪೂರ್ವ ನೌಕಾ ಕಮಾಂಡ್) 9, ಟ್ರೇಡ್ಸ್‌ಮ್ಯಾನ್ (ಪಶ್ಚಿಮ ನೌಕಾ ಕಮಾಂಡ್) 565, ವ್ಯಾಪಾರಿ (ದಕ್ಷಿಣ ನೌಕಾ ಕಮಾಂಡ್) 36 ಒಟ್ಟು 910 ಹುದ್ದೆಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ ಹಾಗೂ ವಯೋಮಿತಿ: ಚಾರ್ಜ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಮಿಕಲ್ ಇಂಜನಿಯರಿಂಗ್ ಪದವಿ, ಹಿರಿಯ ಡ್ರಾಫ್ಟ್ ಮ್ಯಾನ್ ಹಾಗೂ ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಡಿಪ್ಲೊಮಾ, ಐಟಿಐ ಪೂರ್ಣಗೊಳಿಸಿರಬೇಕು. ಇನ್ನೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಟ 18 ಹಾಗೂ ಗರಿಷ್ಟ 25 ವರ್ಷ ಆಗಿರಬೇಕು. ಪ.ಜಾತಿ ಹಾಗೂ ಪಂಗಡದ ಅಭ್ಯರ್ಥಿಗಲಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 295 ರೂಪಾಯಿ ಅರ್ಜಿ ಶುಲ್ಕ ನಿಗಧಿಪಡಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಡಿ.18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಡಿ.31 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ joinindiannavy.gov.in ತಾಣಕ್ಕೆ ಭೇಟಿ ನೀಡಬಹುದಾಗಿದೆ.

Most Popular

To Top