ಕ್ರೇಜಿ ಆಫರ್ ಪಡೆದುಕೊಂಡ ಹನಿರೋಜ್, ಪವನ್ ಕಲ್ಯಾಣ್ ರವರ ಸಿನೆಮಾದಲ್ಲಿ ನಟಿಸಲಿದ್ದಾರಂತೆ ಹನಿರೋಜ್…..!

Follow Us :

ಸಿನಿರಂಗದಲ್ಲಿ ಅನೇಕ ನಟಿಯರು ಒಂದೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾರೆ. ಅಂತಹ ನಟಿಯರ ಸಾಲಿಗೆ ಮಲ್ಲು ಬ್ಯೂಟಿ ಹನಿರೋಜ್ ಸಹ ಸೇರುತ್ತಾರೆ. ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಸುಮಾರು ವರ್ಷಗಳ ಹಿಂದೆಯೇ ಆಕೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆಗೆ ಕ್ರೇಜ್ ದೊರೆತಿದ್ದು ಮಾತ್ರ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಎಂದೇ ಹೇಳಬಹುದು. ಇದೀಗ ಆಕೆ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಜೊತೆ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಹರಿದಾಡುತ್ತಿದೆ.

ಈ ವರ್ಷದ ಆರಂಭದಲ್ಲಿ ತೆರೆಕಂಡ ವೀರಸಿಂಹಾರೆಡ್ಡಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿ ಬಾಲಯ್ಯ ಡುಯಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಹನಿರೋಜ್ ಜೊತೆಗೆ ಶ್ರುತಿಹಾಸನ್ ಸಹ ಈ ಸಿನೆಮಾದಲ್ಲಿ ನಟಿಸಿದ್ದರೂ ಸಹ ಶ್ರುತಿಹಾಸನ್ ಗಿಂತ ಹನಿರೋಜ್ ತುಂಬಾನೆ ಕ್ರೇಜ್ ಪಡೆದುಕೊಂಡರು. ಇನ್ನೂ ಹನಿರೋಜ್ ಈ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಮೂವತ್ತೈದು ವರ್ಷ ವಯಸ್ಸಿನ ಹನಿರೋಜ್ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ಸೌಂದರ್ಯವನ್ನು ಹೊಂದಿದ್ದಾರೆ. ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ಕ್ರೇಜ್ ಹೆಚ್ಚಾಗಿದ್ದು, ಅನೇಕ ಸಿನೆಮಾಗಳ ಆಫರ್‍ ಗಳು ಹರಿದು ಬರುತ್ತಿವೆ ಎನ್ನಲಾಗಿದ್ದು, ಇದೀಗ ಹನಿರೋಜ್ ಮತ್ತೊಂದು ಕ್ರೇಜಿ ಆಫರ್‍ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್ ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್‍ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲಿ ಹನಿರೋಜ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಹನಿರೋಜ್ ನಟಿಸಲಿದ್ದಾರಂತೆ. ನಿರ್ದೇಶಕ ಹರೀಶ್ ಶಂಕರ್‍  ಹನಿರೋಜ್ ರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಪಾತ್ರ ಸಹ ತುಂಬಾ ಬೋಲ್ಡ್ ಆಗಿರುತ್ತದೆ ಎಂಬ ಸುದ್ದಿ ಸಹ ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸುದ್ದಿ ಮಾತ್ರ ಜೋರಾಗಿ ಹರಿದಾಡುತ್ತಿದೆ.