Film News

ಪ್ರಭಾಸ್-ಅನುಷ್ಕಾ ಹಾಗೂ ಅವರ ಮಗುವಿನ ಪೊಟೋ ವೈರಲ್, ಅವರಿಗೆ ಮದುವೆಯಾಗಿದ್ದು ಯಾವಾಗ? ಪೊಟೋಗಳ ಅಸಲೀಯತ್ತು ಏನು ಗೊತ್ತಾ?

ತೆಲುಗು ಸಿನಿರಂಗದಲ್ಲಿ ಅನೇಕ ವರ್ಷಗಳಿಂದ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ.  ಬಾಹುಬಲಿ ಹಾಗೂ ಅನುಷ್ಕಾ ಕೆಲವೊಂದು ಸಿನೆಮಾಗಳಲ್ಲಿ ಜೋಡಿಯಾಗಿ ನಟಿಸಿದ್ದು, ಅವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಅನೇಕ ಬಾರಿ ಅವೆಲ್ಲಾ ಸುದ್ದಿಗಳನ್ನು ಅವರಿಬ್ಬರೂ ತಳ್ಳಿಹಾಕಿದರೂ ಸಹ ಮತ್ತೆ ಸುದ್ದಿಗಳು ಕೇಳಿಬರುತ್ತಿರುತ್ತವೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಅನುಷ್ಕಾ ಪ್ರಭಾಸ್ ಅವರ ಮಗುವಿನ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಾಹುಬಲಿ ಸಿನೆಮಾದ ಮೂಲಕ ವಿಶ್ವದಾದ್ಯಂತ ಭಾರಿ ಅಭಿಮಾನಿಗಳನ್ನು ಪಡೆದುಕೊಂಡ ಪ್ರಭಾಸ್ ರವರಿಗೆ ವಯಸ್ಸು ನಲವತ್ತಾದರೂ ಸಹ ಇನ್ನೂ ಮದುವೆಯಾಗಿಲ್ಲ. ಅವರ ಮದುವೆ ಯಾವಾಗ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಸುಮಾರು ವರ್ಷಗಳಿಂದ ಅನುಷ್ಕಾ ಪ್ರಭಾಸ್ ನಡುವೆ ಅಫೈರ್‍ ನಡೆಯುತ್ತಿದೆ ಎಂದು ಸುದ್ದಿಗಳು ಕೇಳಿಬರುತ್ತಲೇ ಇದೆ. ಅತ್ತ ಅನುಷ್ಕಾಗೂ ಸಹ ನಲವತ್ತು ವರ್ಷ ವಯಸ್ಸಾಗಿದೆ. ಅನೇಕ ಬಾರಿ ಅವರ ಮದುವೆಯ ಬಗ್ಗೆ ಸುದ್ದಿಗಳು ಕೇಳೀಬಂದರೂ ಅದು ಸತ್ಯ ಮಾತ್ರ ಆಗಲಿಲ್ಲ. ಆದಿಪುರುಷ್ ಸಿನೆಮಾದ ಸಮಯದಲ್ಲಿ ಕೃತಿ ಸನನ್ ಹಾಗೂ ಪ್ರಭಾಸ್ ನಡುವೆ ಪ್ರೇಮಾಂಕುರವಾಗಿದ್ದು, ಅವರಿಬ್ಬರ ಮದುವೆ ಬಗ್ಗೆ ಸಹ ರೂಮರ್‍ ಹರಿದಾಡಿತ್ತು. ಕೊನೆಗೆ ಅದೂ ಸಹ ರೂಮರ್‍ ಆಗಿಯೇ ಉಳಿಯಿತು.

ಇನ್ನೂ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗಬೇಕೆಂದು ಅವರ ಫ್ಯಾನ್ಸ್ ಸಹ ಕೋರುತ್ತಿದ್ದಾರೆ. ಈಗಾಗಲೇ ನಾಲ್ಕು ಸಿನೆಮಾಗಳಲ್ಲಿ ನಟಿಸಿದ ಈ ಜೋಡಿ ಮದುವೆಯಾದರೇ ತುಂಬಾ ಚೆನ್ನಾಗಿರುತ್ತದೆ ಎಂದು ಅವರ ಅಭಿಮಾನಿಗಳು ಸಹ ಅನೇಕ ಬಾರಿ ಕೋರಿದ್ದಾರೆ. ಇನ್ನೂ ಅಭಿಮಾನಿಗಳು ತಮ್ಮ ಬಯಕೆ ಈಡೆರದ ಕಾರಣದಿಂದ ಇದೀಗ ಅಭಿಮಾನಿಗಳೇ ಅನುಷ್ಕಾ-ಪ್ರಭಾಸ್ ಗೆ ಮದುವೆ ಮಾಡಿದ್ದಾರೆ. ಅನುಷ್ಕಾ, ಪ್ರಭಾಸ್ ಹಾಗೂ ಅವರ ಮಗು ಇರುವ ಪೊಟೋ ಒಂದು ಹಂಚಿಕೊಂಡಿದ್ದಾರೆ. ಈ ಪೊಟೋ ಅನ್ನು AI ಟೆಕ್ನಾಲಿಜಿ ಮೂಲಕ ಕ್ರಿಯೇಟ್ ಮಾಡಲಾಗಿದೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಪೊಟೋಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. #Pranushka ಎಂಬ ಹ್ಯಾಷ್ ಟ್ಯಾಗ್ ಮೂಲಕ ಪೊಟೋ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ನಿಜವಾಗಿ ಅವರ ಮದುವೆ ನಡೆಯದೇ ಇದ್ದರೂ ಸಹ ಪೊಟೋ ದಲ್ಲಿ ಜೋಡಿಯನ್ನು ನೋಡಿ ಅಭಿಮಾನಿಗಳು ಪುಲ್ ಖುಷಿಯಾಗುತ್ತಿದ್ದಾರೆ. ಇನ್ನೂ ಈ ಪೊಟೋಗಳ ಬಗ್ಗೆ ಪ್ರಭಾಸ್ ಆಗಲಿ ಅಥವಾ ಅನುಷ್ಕಾ ಆಗಲಿ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top