ಜಿಮ್ ನಲ್ಲಿ ಕಠಿಣವಾದ ಕಸರತ್ತುಗಳನ್ನು ಮಾಡುತ್ತಿರುವ ಪ್ರಿನ್ಸ್ ಪತ್ನಿ ನಮ್ರತಾ, ಫಿಟ್ ನೆಸ್ ಗಾಗಿ ಕಠಿಣ ವ್ಯಾಯಾಮ…..!

Follow Us :

1993ರಲ್ಲಿ ಮಿಸ್ ಇಂಡಿಯಾ ಹಾಗೂ ಮಿಸ್ ಏಷಿಯಾ ಫೆಸಿಫಿಕ್ ಆಗಿ ಆಯ್ಕೆಯಾದ ನಮ್ರತಾ ಶೀರೋಡಕ್ರರ್‍ ರವರ ಪರಿಚಯ ಪ್ರತ್ಯೇಕವಾಗಿ ಮಾಡಬೇಕಿಲ್ಲ. ಬಾಲಿವುಡ್ ನಲ್ಲಿ ಜಬ್ ಪ್ಯಾರ್‍ ಕಿಸಿಸೆ ಹೋತಾ ಹೈ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಹಿಂದಿಯಲ್ಲಿ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ನಟಿ ನಮ್ರತಾ ಮಹೇಶ್ ಬಾಬು ರವರೊಂದಿಗೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿಯೇ ಇರುತ್ತಾರೆ.  ಆಕೆ ಫಿಟ್ ನೆಸ್ ಗಾಗಿ ಕಠಿಣ ವ್ಯಾಯಾಮ ಮಾಡುತ್ತಿದ್ದು, ಈ ಸಂಬಂಧ ಕೆಲವೊಂದು ಪೊಟೋಗಳು ವೈರಲ್ ಆಗುತ್ತಿವೆ.

ಎಲ್ಲರಂತೆ ನಟಿ ನಮ್ರತಾ ಸಹ ಫಿಟ್ ನೆಸ್ ಗಾಗಿ  ಹೆಚ್ಚು ಒತ್ತು ಕೊಡುತ್ತಿರುತ್ತಾರೆ. ಈ ಕಾರಣದಿಂದಲೇ ಆಕೆ 51 ವರ್ಷವಾದರೂ ಸಹ ಯಂಗ್ ಬ್ಯೂಟಿಯಂತೆ ಕಾಣಿಸಿಕೊಳ್ಳುತ್ತಾರೆ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಾ ಫಿಟ್ ನೆಸ್ ಕಾಪಾಡಿಕೊಳ್ಳುತ್ತಿರುತ್ತಾರೆ.  ಇದೀಗ ಆಆಕೆ ಜಿಮ್ ನಲ್ಲಿರುವ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜಿಮ್ ಟ್ರೈನರ್‍ ಶಿಕ್ಷಣದೊಂದಿಗೆ ಕಠಿಣ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಮಾಡದಂತಹ ಪುಲ್ ಅಪ್ಸ್, ಸ್ವಿಸ್ ಬಾಲ್ ಪ್ಲಾಂಕ್ ಸೇರಿದಂತೆ ಕಠಿಣ ಕಸರತ್ತುಗಳನ್ನು ಆಕೆ ತನ್ನ ಟ್ರೈನರ್‍ ಕುಮಾರ ಮನ್ನವ ಎಂಬಾತನ ಶಿಕ್ಷಣದಲ್ಲಿ ಆಕೆ ಮಾಡಿದ್ದಾರಂತೆ. ಈ ವಿಚಾರವನ್ನು ಆಕೆ ತಿಳಿಸುತ್ತಾ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಮ್ರತಾ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ವಿವಿಧ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ಣೂ ಮಹೇಶ್ ಹಾಗೂ ನಮ್ರತಾ ಟಾಲಿವುಡ್ ನಲ್ಲಿ ಬೆಸ್ಟ್ ಜೋಡಿಯಾಗಿದ್ದಾರೆ. ಅನೇಕ ಜೋಡಿಗಳಿಗೆ ಮಾದರಿಯಾಗಿದ್ದಾರೆ. ತುಂಬಾ ಅನ್ಯೋನ್ಯವಾಗಿ ತಮ್ಮ ವೈವಾಹಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಮಹೇಶ್ ಬಾಬು ರವರೊಂದಿಗೆ ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದಲೂ ದೂರವೇ ಉಳಿದಿದ್ದಾರೆ. ಆದರೆ ಆಕೆ ಸಿನೆಮಾಗಳಿಂದ ದೂರವುಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಜೊತೆಗೆ ಮಹೇಶ್ ಬಾಬು ರವರ ಬ್ಯುಸಿನೆಸ್ ಗಳನ್ನು ಸಹ ನೋಡಿಕೊಳ್ಳುತ್ತಾ ಕುಟುಂಬ ನಿರ್ವಹಣೆ ಮಾಡುತ್ತಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿರುತ್ತಾರೆ.

ಇನ್ನೂ ಮಹೇಶ್ ಬಾಬು ಸಹ ಸಿನೆಮಾ ಶೂಟಿಂಗ್ ಗಳಿಂದ ಬಿಡುವು ಸಿಕ್ಕಾಗ ವಿದೇಶಗಳಿಗೆ ವೆಕೇಷನ್ ಗೆ ಸಹ ಹಾರುತ್ತಿರುತ್ತಾರೆ. ಮಹೇಶ್ ಬಾಬು ಸಹ ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಶಸ್ಥ್ಯ ನೀಡುತ್ತಾರೆ. ಪ್ರತಿ ಸಿನೆಮಾ ಅರಂಭಕ್ಕೂ ಮುನ್ನಾ ಹಾಗೂ ಸಿನೆಮಾ ಬಿಡುಗಡೆಯಾದ ಬಳಿಕ ಮಹೇಶ್ ಬಾಬು ಕುಟುಂಬದೊಂದಿಗೆ ವಿದೇಶಗಳಿಗೆ ಟ್ರಿಪ್ ಪ್ಲಾನ್ ಮಾಡುತ್ತಿರುತ್ತಾರೆ.