Film News

ನಾನು ವಿಶ್ವ ಸುಂದರಿಯಾದಾಗ ನಿಕ್ ಚಿಕ್ಕ ಹುಡುಗ ಎಂದ ಪ್ರಿಯಾಂಕಾ ಚೋಪ್ರಾ, ಪತಿಯ ವಯಸ್ಸಿನ ಬಗ್ಗೆ ಫನ್ನಿ ರಿಯಾಕ್ಷನ್…..!

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲೇ ಸಿನೆಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಕಳೆದ 2017 ರಿಂದ ಹಾಲಿವುಡ್ ನಲ್ಲೇ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡು ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. ಇನ್ನೂ ಆಕೆ ತನಗಿಂತ ಚಿಕ್ಕ ವಯಸ್ಸಿನ ನಿಕ್ ಜೋನಸ್ ಎಂಬಾತನನ್ನು ಮದುವೆಯಾದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ಇದೀಗ ಆಕೆ ತನ್ನ ಪತಿಯ ವಯಸ್ಸಿನ ಬಗ್ಗೆ ಫನ್ನಿಯಾಗಿ ರಿಯಾಕ್ಷನ್ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಪತಿಗಿಂತ ಪತ್ನಿಯ ವಯಸ್ಸು ಕಡಿಮೆ ಇರುತ್ತದೆ. ಕೆಲವರ ವಯಸ್ಸು ಸಮನಾಗಿರುತ್ತದೆ, ಪತ್ನಿಗಿಂತ ಪತಿಯ ವಯಸ್ಸು ತುಂಬಾ ಕಡಿಮೆಯಿರುವಂತಹ ಜೋಡಿಗಳನ್ನು ನಾವು ತುಂಬಾ ವಿರಳವಾಗಿ ಕಾಣುತ್ತಿರುತ್ತೇವೆ. ಅಂತಹ ಜೋಡಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಜೋಡಿ ಸಹ ಒಂದಾಗಿದೆ. ಇನ್ನೂ ಅವರ ವಯಸ್ಸಿನ ಅಂತರದ ಬಗ್ಗೆ ಅವರ ಮದುವೆಯಾದಾಗಿನಿಂದ ಸುದ್ದಿಗಳು ಕೇಳಿಬರುತ್ತಲೇ ಇದೆ. ಅನೇಕ ಬಾರಿ ಇದೇ ಪ್ರಶ್ನೆ ಆಕೆಗೆ ಎದುರಾಗಿದೆ. ಇದೀಗ ಆಕೆ ಮತ್ತೊಮ್ಮೆ ವಯಸ್ಸಿನ ಅಂತರದ ಬಗ್ಗೆ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿಯಾದ ಸಮಯದಲ್ಲಿ ನಿಕ್ ಏಳು ವರ್ಷದ ಹುಡುಗನಂತೆ. ಇದು ಹೇಳಲು ನನಗೆ ತುಂಭಾ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ಸದ್ಯ ಆಕೆಯ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತನ್ನ 17ನೇ ವರ್ಷದಲ್ಲಿ ಲಂಡನ್ ನಲ್ಲಿ ನಡೆದಂತಹ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಳೆದ 2000ನೇ ಇಸವಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಿಯಾಂಕ ಪತಿ ನಿಕ್ ತಂದೆ ತಾಯಿ ಟಿವಿಯಲ್ಲಿ ನೋಡಿದ್ದರಂತೆ. ಪ್ರಿಯಾಂಕಾ ಟೈಟಲ್ ಗೆದ್ದಿದ್ದು, ಆಕೆಯ ಅತ್ತೆ ಮಾವ ಗೆ ಇಂದಿಗೂ ಸಹ ನನೆನಪಿದೆಯಂತೆ. ಇನ್ನೂ ಇದೇ ವೇಳೆ ನಿಕ್ ಸಹ ಈ ಶೋ ನೋಡಿದ್ದರಂತೆ. ಆ ಸಮಯದಲ್ಲಿ ನಿಖ್ ಗೆ ಏಳು ವರ್ಷ ವಯಸ್ಸಂತೆ. ಇನ್ನೂ ಇದೆಲ್ಲಾ ನೆನಪಿಸಿಕೊಂಡರೇ ತುಂಬಾ ವಿಚಿತ್ರ ಎನ್ನಿಸುತ್ತದೆ. ಆ ವಿಧಿ ನಮ್ಮಿಬ್ಬರನ್ನು ಒಂದು ಮಾಡಿದೆ. ನಿಕ್ ಜೊತೆ ಮದುವೆಯಾದ ಬಳಿಕ ನಿಕ್ ತಾಯಿ ಇದೆಲ್ಲವನ್ನು ನನ್ನ ಬಳಿ ಹೇಳಿದ್ದರು ಎಂದು ಫನ್ನಿಯಾಗಿ ಮಾತನಾಡಿದ್ದಾರೆ.

ಅಷ್ಟೇಅಲ್ಲದೇ ನಾವಿಬ್ಬರು ಮದುವೆಯಾಗಬೇಕೆಂದು ಬರೆದಿ‌ದ್ದು, ಅದರಂತೆ ನಾವು ಮದುವೆಯಾಗಿದ್ದೇವೆ. ಈ ಕಾರಣದಿಂದಲೇ ವಯಸ್ಸಿನಲ್ಲಿ ಎಷ್ಟೇ ವ್ಯತ್ಯಾಸ ಇದ್ದರೂ ಸಹ ನಾವಿಬ್ಬರು ಪ್ರೀತಿಸಿ ದೊಡ್ಡವರ ಒಪ್ಪಿಗೆಯ ಮೇರೆಗೆ ಮದುವೆ ಮಾಡಿಕೊಂಡೆವು. ನಿಕ್ ಜೊತೆಗೆ ರಿಲೇಷನ್ ಶಿಪ್ ಗೂ ಮುಂಚೆ ನಾನು ಹಲವರೊಂದಿಗೆ ಡೇಟ್ ಮಾಡಿದ್ದೆ. ಅದೇ ರೀತಿ ನಿಕ್ ಸಹ ಡೇಟ್ ಮಾಡಿದ್ದ ಆದರೆ ಅವುಗಳ ಬಗ್ಗೆ ನಾವು ಕಿವಿಗೆ ಹಾಕಿಕೊಳ್ಳಲಿಲ್ಲ. ಇನ್ನೂ ಪ್ರಿಯಾಂಕಾ ಹಂಚಿಕೊಂಡ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top