ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್, ಶಾಕ್ ಆದ ಫ್ಯಾನ್ಸ್……!

ಸೌತ್ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ ಸಾಗಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.  ಅನೇಕ ಬಾರಿ ಆಕೆ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಇದೀಗ ಆಕೆ ಯಾವುದೇ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ತೆಲುಗು, ತಮಿಳು ಹಾಗೂ ಕನ್ನಡ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿದ್ದಾರೆ. ಆಕೆ ಕಾಲಿವುಡ್ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ. ಆದರೆ ಎಂದು ಆಕೆ ತನ್ನ ತಂದೆಯ ಪ್ರಭಾವ ಬಳಸಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಸ್ವಂತ ಪ್ರತಿಭೆಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟಿಯಾಗಬೇಕೆಂಬ ಹಂಬಲದಿಂದ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆಗೆ ಮಾತ್ರ ಲೇಡಿ ವಿಲನ್ ಆಗಿ ತುಂಬಾನೆ ಫೇಂ ಬಂತು ಎಂದೇ ಹೇಳಬಹುದು. ಕ್ರಾಕ್, ವೀರಸಿಂಹಾರೆಡ್ಡಿ, ಏಜೆಂಟ್, ಮೈಖಲ್ ಮೊದಲಾದ ಸಿನೆಮಾಗಳ ಮೂಲಕ ಇತ್ತೀಚಿಗೆ ಅಭಿಮಾನಿಗಳನ್ನು ರಂಜಿಸಿದರು. ಕೊನೆಯದಾಗಿ ಆಕೆ ಪ್ಯಾನ್ ಇಂಡಿಯಾ ಸಿನೆಮಾ ಹನುಮಾನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ಕಂಡಿದ್ದು, ಮುಂದಿನ ಪಾರ್ಟ್ ಬಗ್ಗೆ ತುಂಬಾನೆ ನಿರೀಕ್ಷೆ ಹುಟ್ಟಿದೆ.

ಇದೀಗ ನಟಿ ವರಲಕ್ಷ್ಮೀ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಆಕೆ ಮುಂಬೈ ಮೂಲದ ಆರ್ಟ್ ಗ್ಯಾಲರಿಸ್ಟ್ ಆದ ನಿಕೋಲಾಯ್ ಸಚ್ ದೇವ್ ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮ ಕುಟುಂಬ ಸದಸ್ಯರು ಹಾಗೂ ಆಪ್ತರ ಸ್ನೇಹಿತರ ನಡುವೆ ನೆರವೇರಿದೆ. ಸುಮಾರು 14 ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದಾರೆ. ಪೋಷಕರ ಒಪ್ಪಿಗೆಯಂತೆ ಮಾ.1 ರಂದು ಉಂಗುರಗಳನ್ನು ಬದಲಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.  ಇನ್ನೂ ಇದೇ ವರ್ಷದ ಕೊನೆಯಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎನ್ನಲಾಗಿದೆ. ಶೀಘ್ರದಲ್ಲೇ ಮದುವೆಯ ದಿನಾಂಕವನ್ನು ಸಹ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಎಂಗೇಜ್ ಮೆಂಟ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳನ್ನು ಕೋರುತ್ತಿದ್ದಾರೆ.