ತಾಯಿಯಿಂದಲೇ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ, ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಕೃತ್ಯ……!

Follow Us :

ತಾಯಿಯೇ ಪ್ರತ್ಯಕ್ಷ ದೈವ, ತಾಯಿಗಿಂತ ಬೇರೆ ದೇವರಿಲ್ಲ ಎಂಬೆಲ್ಲಾ ಹೇಳಲಾಗುತ್ತದೆ. ಆದರೆ ಕೆಲವೊಂದು ಘಟನೆಗಳು ಈ ಮಾತುಗಳಿಗೆ ತದ್ವಿರುದ್ದವಾದ ಘಟನೆಗಳು ನಡೆದಿರುತ್ತವೆ. ಅಂತಹ ಘಟನೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಯಿಯಿಂದಲೇ ಹೆತ್ತ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾನು ಹೆತ್ತ 3 ವರ್ಷ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ವಾಸವಿದ್ದ ತಾಯಿಯೊಬ್ಬಳು ತಾನು ಹೆತ್ತ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಮೂರು ವರ್ಷದ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದು, ಮಗುವಿನ ದೇಹದ ಮೇಲೆ ಗಾಯದ ಗುರುತುಗಳಾಗಿದೆ. ತಾಯಿ ಕೆಲಸ ಹುಡುಕೋಕೆ ಬೆಳಗ್ಗೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೇ ರಾತ್ರಿ ಬರುವವರೆಗೂ ಮಗುವನ್ನು ಕೂಡಿ ಹಾಕುತ್ತಿದ್ದಳಂತೆ. ಜೊತೆಗೆ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ ಎನ್ನಲಾಗಿದೆ. ಇನ್ನೂ ಈ ಘಟನೆ ಎರಡು ವಾರಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಕೆಲಸ ಹುಡುಕುವಾಗ ತಾಯಿ ತನ್ನ ಮಗುವನ್ನು ಮನೆಯಲ್ಲೇ ಕೂಡಿಹಾಕಿದ್ದಾಳೆ. ಮಗುವಿನ ಬಗ್ಗೆ ತಾಯಿಯನ್ನು ಪ್ರಶ್ನೆ ಮಾಡಿದಾಗ ನಾನು ಗಂಡನ ಜೊತೆಗಿಲ್ಲ. ಹಣಕಾಸಿನ ಸಮಸ್ಯೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಮದ್ಯಾಹ್ನ ಮಗುವಿಗೆ ಆಹಾರ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದಳಂತೆ. ಇನ್ನೂ ಈ ಕುರಿತು ಪೊಲೀಸರು ತಾಯಿಯನ್ನು ಕರೆಸಿ ಬುದ್ದಿವಾದ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಮಗುವನ್ನು ಸದ್ಯ ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಲಾಗಿದೆ. ಗಂಡ ಹಾಗೂ ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್ ಗೆ ಒಳಗಾಘುವಂತೆ ಸೂಚನೆ ಸಹ ನೀಡಲಾಗಿದೆ. ದಂಪತಿ ಇದ್ದರೂ ಬಂದು ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರೇ ಮಾತ್ರ ಮಗುವನ್ನು ಅವರ ಸುಪರ್ದಿಗೆ ನೀಡಲು ಆಯೋಗ ಹೇಳಿದೆ. ಸದ್ಯ ಮಗು ಮಕ್ಕಳ ಆಯೋಗ ರಕ್ಷಣೆಯಲ್ಲಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್‍ ದಾಖಲಾಗಿದೆ ಎಂದು ತಿಳಿದುಬಂದಿದೆ.