Film News

ಮಗು ಆದರೂ ತಗ್ಗದೇ ಲೇ ಎಂದ ಆಲಿಯಾ, ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟ ಸ್ಟಾರ್ ನಟಿ ಆಲಿಯಾ ಭಟ್…..!

ಬಾಲಿವುಡ್ ನ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. RRR ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೂ ಸಹ ತುಂಬಾ ಹತ್ತಿರವಾಗಿದ್ದಾರೆ. ಕಳೆದೆರಡು ವರ್ಷಗಳ ಹಿಂದೆಯಷ್ಟೆ ಮದುವೆಯಾದ ಆಲಿಯಾ ಭಟ್ ಮಗಳಿಗೆ ಜನ್ಮ ಕೊಟ್ಟರು. ಮದುವೆಯಾಗಿ ಮಗು ಆದರೂ ಸಹ ಆಕೆ ಯಂಗ್ ಬ್ಯೂಟಿಯರನ್ನು ನಾಚಿಸುವಂತೆ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಟ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಆಲಿಯಾ ಭಟ್ ಕಳೆದ 2022 ರಲ್ಲಿ ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಜೊತೆಗೆ ಮದುವೆಯಾದರು. ಅವರಿಗೆ ಮಗಳು ಸಹ ಜನಿಸಿದ್ದಾರೆ. ಸದ್ಯ ಆಲಿಯಾ ತಾಯ್ತನವನ್ನು ಅನುಭವಿಸುತ್ತಲೇ ಸಿನೆಮಾಗಳಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಮದುವೆಗೂ ಮುಂಚೆ ಆಲಿಯಾ RRR ಹಾಗೂ ಪತಿಯೊಂದಿಗೆ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ನಟಿಸಿದ್ದರು. ಮದುವೆ, ತಾಯಿಯಾದ ಕಾರಣದಿಂದ ಆಲಿಯಾ ಸಿನೆಮಾಗಳಿಂದ ದೂರ ಉಳಿದಿದ್ದರು. ಇದೀಗ ಆಲಿಯಾ ಮತ್ತೆ ಸಿನೆಮಾಗಳಲ್ಲಿ ನಟಿಸಲು ಸಿದ್ದವಾಗುತ್ತಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಆಲಿಯಾ ಭಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆ ತನ್ನಲ್ಲಿನ ಸ್ಟೈಲಿಷ್ ಲುಕ್ಸ್ ಅನ್ನು ಹೊರಹಾಕಿದ್ದಾರೆ. ವಿಭಿನ್ನ ಮಾದರಿಯ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಆಕೆಯ ಸ್ಕಿನ್ ಗ್ಲೋ, ಆಟಿಟ್ಯೂಡ್ ನೆಟ್ಟಿಗರನ್ನು ಫಿದಾ ಮಾಡಿದೆ ಎನ್ನಬಹುದು. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹಂಚಿಕೊಳ್ಳುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಆಲಿಯಾ ಭಟ್ ಕೊನೆಯದಾಗಿ ರಾಖಿ ಔರ್‍ ರಾಣಿಕಿ ಪ್ರೇಮ್ ಕಹಾನಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ರಣವೀರ್‍ ಸಿಂಗ್ ಜೊತೆಗೆ ಆಲಿಯಾ ಭಟ್ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದ್ದು, ಫ್ಯಾಮಿಲಿ ಆಡಿಯನ್ಸ್ ಗೆ ಒಳ್ಳೆಯ ಮನರಂಜನೆ ನೀಡಿತ್ತು ಎನ್ನಲಾಗಿದೆ.

Most Popular

To Top