ಮದುವೆಯ ಬಗ್ಗೆ ಮತ್ತೊಮ್ಮೆ ಶಾಕಿಂಗ್ ಹೇಳಿಕೆ ಕೊಟ್ಟ ಲೇಡಿ ವಿಲನ್ ವರಲಕ್ಷ್ಮೀ, ಮದುವೆ ಎಂಬುದು ಅದೇ ಎಂದ ನಟಿ….!

ನಟಿ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ…

ನಟಿ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಸಿನಿಜರ್ನಿ ಸಾಗಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.  ಸದ್ಯ ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಆಗಿ ಭಾರಿ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಅನೇಕ ಬಾರಿ ಆಕೆ ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕಾಮೆಂಟ್ಸ್ ಮಾಡಿದ್ದಾರೆ.

ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಕಾಲಿವುಡ್ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ. ಆದರೆ ಎಂದು ಆಕೆ ತನ್ನ ತಂದೆಯ ಪ್ರಭಾವ ಬಳಸಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಸ್ವಂತ ಪ್ರತಿಭೆಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಟಿಯಾಗಬೇಕೆಂಬ ಹಂಬಲದಿಂದ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರು. ಆದರೆ ಆಕೆಗೆ ಮಾತ್ರ ಲೇಡಿ ವಿಲನ್ ಆಗಿ ತುಂಬಾನೆ ಫೇಂ ಬಂತು ಎಂದೇ ಹೇಳಬಹುದು. ಕ್ರಾಕ್, ವೀರಸಿಂಹಾರೆಡ್ಡಿ, ಏಜೆಂಟ್, ಮೈಖಲ್ ಮೊದಲಾದ ಸಿನೆಮಾಗಳ ಮೂಲಕ ಇತ್ತೀಚಿಗೆ ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಆಕೆ ಲೇಡಿ ವಿಲನ್ ಆಗಿ ಮೊದಲ ಆಯ್ಕೆಯಾಗಿದ್ದಾರೆ. ಇನ್ನೂ ವರಲಕ್ಷ್ಮೀ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲೂ ಆಕೆ ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ತೆಲುಗಿನ ನಲ್ಲಿ ಓಂಕಾರ್‍ ಹೋಸ್ಟ್ ಮಾಡುವಂತಹ ಸಿಕ್ಸ್ತ್ ಸೆನ್ಸ್ ಎಂಬ ಕಾರ್ಯಕ್ರಮಕ್ಕೆ ವರಲಕ್ಷ್ಮೀ ಹಾಗೂ ಬಿಂದು ಮಾದವಿ ಅತಿಥಿಗಳಾಗಿ ಹಾಜರಾಗಿದ್ದರು. ಈ ವೇಳೆ ಅವರಿಗೆ ಓಂಕಾರ್‍ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆದರೆ ವರಲಕ್ಷ್ಮೀ ಮಾತ್ರ ಕೊಂಚ ವಿಭಿನ್ನವಾಗಿಯೇ ಕಾಮೆಂಟ್ ಮಾಡಿದ್ದಾರೆ. ಮದುವೆಯ ಬಗ್ಗೆ ಆಕೆ ಕ್ರಾಸ್ ಫಿಂಗರ್‍ ತೋರಿಸಿದ್ದಾರೆ. ಮದುವೆ ಎಂಬುದು ಕೆಟ್ಟದು ಎಂಬ ಅರ್ಥದಲ್ಲಿ ಆಕೆ ಹೇಳಿದ್ದಾರೆ. ಮದುವೆಯ ಬಗ್ಗೆ ನನಗೆ ಕೇಳಲೇ ಬೇಡಿ. ಎಲ್ಲರೂ ಮದುವೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂದುಕೊಂಡಿರುತ್ತಾರೆ. ಆದರೆ ಅದು ನಿಜವಲ್ಲ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಬಹುದು. ಸಂಪೂರ್ಣವಾಗಿ ಸಿದ್ದವಾದಾಗಲೇ ಮದುವೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇನ್ನೂ ಸಕ್ಸಸ್ ಬಗ್ಗೆ ಸಹ ವರಲಕ್ಷ್ಮೀ ಮಾತನಾಡಿದ್ದಾರೆ. ನಾನು ಏನು ಸಾಧನೆ ಮಾಡಿದರು ಅದು ನನ್ನ ಶ್ರಮದಿಂದ ಮಾತ್ರ. ನಮ್ಮ ತಂದೆ ನಾನು ನಟಿಯಾಗುವುದಕ್ಕೆ ಇಷ್ಟಪಟ್ಟಿರಲಿಲ್ಲ. ಆದ್ದರಿಂದ ನನ್ನ ಸಕ್ಸಸ್ ಹಿಂದೆ ಬೇರೆ ಯಾರೂ ಇಲ್ಲ ಇರೊದು ನಾನೇ ಎಂದಿದ್ದಾರೆ. ಈ ಹಿಂದೆ ಶರತ್ ಕುಮಾರ್‍ ಮಗಳು ವರಲಕ್ಷ್ಮೀ ಎಂದು ಹೇಳುತ್ತಿದ್ದರು. ಇದೀಗ ವರಲಕ್ಷ್ಮೀ ತಂದೆ ಶರತ್ ಕುಮಾರ್‍ ಎಂದು ಹೇಳುತ್ತಿದ್ದಾರೆ ಎಂದು ವರಲಕ್ಷ್ಮೀ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.