Film News

ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಿಲ್ಕಿ ಬ್ಯೂಟಿ, ಮದುವೆಗೂ ಮುಂಚೆ ಆತನೊಂದಿಗೆ ಹಸಿಬಿಸಿ ದೃಶ್ಯಗಳಲ್ಲಿ ನಟನೆ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ತಮನ್ನಾ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಆಕೆ ಬ್ಯೂಟಿಗೆ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಫಿದಾ ಆಗಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ರೀತಿಯ ಕ್ರೇಜ್ ಬೇರೆ ಯಾವ ನಟಿಯೂ ಸಹ ಪಡೆದುಕೊಂಡಿಲ್ಲ ಎಂದು ಹೇಳಬಹುದಾಗಿದೆ. ಸೌತ್ ಸಿನಿರಂಗದ ಅನೇಕ ಸಿನೆಮಾಗಳ ಮೂಲಕ 15 ವರ್ಷಗಳಿಂದ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಅನೇಕ ಸಿನೆಮಾಗಳಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಗ್ಲಾಮರಸ್ ಆಗಿಯೇ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆಕೆ ಯಾವುದೇ ಸಿನೆಮಾದಲ್ಲಿ ಲಿಪ್ ಕಿಸ್ ದೃಶ್ಯಗಳಲ್ಲಾಗಲೀ ಅಥವಾ ಇಂಟಿಮೇಟ್ ಸೀನ್ ಗಳಲ್ಲಾಗಿ ನಟಿಸಿದ್ದನ್ನು ನಾವು ನೋಡಿಲ್ಲ. ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ತನಗೆ ತಾನೇ ನಿಬಂಧನೆಗಳನ್ನು ಹಾಕಿಕೊಂಡಿದ್ದರಂತೆ ತಮನ್ನಾ. ಆದರೆ ಇದೀಗ ಮೊದಲ ಬಾರಿಗೆ ಅಂತಹ ದೃಶ್ಯಗಳಲ್ಲಿ ನಟಿಸುವ ಮೂಲಕ ಆ ನಿಬಂಧನೆಗಳನ್ನು ಬ್ರೇಕ್ ಮಾಡಿದ್ದಾರೆ. ವೆಬ್ ಸಿರೀಸ್ ಒಂದರಲ್ಲಿ ಆಕೆ ಈ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸದ್ಯ ತಮನ್ನಾ ಎರಡು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಲಸ್ಟ್ ಸ್ಟೋರಿ-2 ಹಾಗೂ ಜೀ ಕರ್ದ ಎಂಬ ಸಿರೀಸ್ ನಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ  ಲಸ್ಟ್ ಸ್ಟೋರಿ-2 ಹಾಗೂ ಜೀ ಕರ್ದ ಎಂಬ ಸಿರೀಸ್ ಗಳು ಸ್ಟ್ರೀಮಿಂಗ್ ಆಗಲು ಸಿದ್ದವಾಗಿದೆ. ಅದರಲ್ಲೂ ಆಕೆ ಲಸ್ಟ್ ಸ್ಟೋರಿ-2 ನಲ್ಲಿ ಆಕೆಯ ಬಾಯ್ ಫ್ರೆಂಡ್ ಎಂದು ಹೇಳಲಾಗುತ್ತಿರುವ ವಿಜಯ್ ವರ್ಮಾ ಜೊತೆಗೆ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ವಿಜಯ್ ವರ್ಮಾ ಜೊತೆಗೆ ತಮನ್ನಾ ತುಂಬಾ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಸ್ಸಿಂಗ್ ದೃಶ್ಯಗಳಲ್ಲಿ ಆಕೆ ತುಂಬಾ ಮಾದಕತೆಯಿಂದ ನಟಿಸಿದ್ದಾರೆ ಎನ್ನಲಾಗಿದೆ. ಈ ಸಂಬಂದ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಇದರ ಜೊತೆಗೆ ಜೀ ಕರ್ದ ಎಂಬ ವೆಬ್ ಸಿರೀಸ್ ನಲ್ಲೂ ಸಹ ತಮನ್ನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸುಹೇಲ್ ನಯ್ಯರ್‍ ಎಂಬ ನಟನೊಂದಿಗೆ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಲಸ್ಟ್ ಸ್ಟೋರಿ-2 ಗಿಂತಲೂ ಜೀ ಕರ್ದ ಸಿರೀಸ್ ನಲ್ಲಿ ತಮನ್ನಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಬೋಲ್ಡ್ ಪಿಕ್ಸ್ ಸಹ ಸಖತ್ ವೈರಲ್ ಆಗುತ್ತಿವೆ.

ಇನ್ನೂ ತಮನ್ನಾ ರವರ ಈ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ವಿಮರ್ಶೆಗಳೂ ಸಹ ಎದುರಾಗುತ್ತಿವೆ. ಇನ್ನೂ ಲಸ್ಟ್ ಸ್ಟೋರಿ-2 ನೆಟ್ ಫ್ಲಿಕ್ಸ್ ನಲ್ಲಿ ಹಾಗೂ ಜೀ ಕರ್ದ ಸಿರೀಸ್ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರ ಜೊತೆಗೆ ಆಕೆ ಭೋಳಾಶಂಕರ್‍ ಹಾಗೂ ಜೈಲರ್‍ ಎಂಭ ಸಿನೆಮಾದಲ್ಲಿ ಸಹ ನಟಿಸಿದ್ದಾರೆ.

Most Popular

To Top