Film News

ತಿರುಮಲದಲ್ಲಿ ಕೃತಿ ಸನನ್ ಗೆ ಮುತ್ತಿಟ್ಟ ಓಂ ರಾವತ್, ಆಕ್ರೋಷಗೊಂಡ ನೆಟ್ಟಿಗರು….!

ಸಿನೆಮಾ ಸೆಲೆಬ್ರೆಟಿಗಳು ಏನೇ ಮಾಡಿದರೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಕೆಲವೊಮ್ಮೆ ಅವರಿಗೆ ತಿಳಿದೋ ಅಥವಾ ತಿಳಿಯದೇನೋ ಮಾಡಿದ ಕೆಲಸದಿಂದ ಭಾರಿ ವಿಮರ್ಶೆಗಳಿಗೆ ಸಹ ಕಾರಣವಾಗುತ್ತಾರೆ. ಇದೀಗ ತಿರುಮಲದಲ್ಲಿ ಆದಿಪುರುಷ್ ಸಿನೆಮಾದ ನಿರ್ದೇಶಕ ನಟಿ ಕೃತಿ ಸನನ್ ಗೆ ಮುತ್ತಿಟ್ಟಿದ್ದು, ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಪವಿತ್ರವಾದ ಸ್ಥಳದಲ್ಲಿ ಅಂತಹ ಕೆಲಸ ಬೇಕಿತ್ತಾ ಎಂದು ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡುತ್ತಿದ್ದಾರೆ.

ಬಾಹುಬಲಿ ಪ್ರಭಾಸ್ ರವರ ಜೊತೆಗೆ ನಿರ್ದೇಶಕ ಓಂ ರಾವತ್ ಆದಿಪುರುಷ್ ಎಂಬ ಭಾರಿ ಬಜೆಟ್ ಸಿನೆಮಾ ಮಾಡಿದ್ದಾರೆ. ಈ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು, ಪ್ರಮೋಷನ್, ಪ್ರಿ ರಿಲೀಸ್ ಈವೆಂಟ್ ಗಳೂ ಸಹ ಭರದಿಂದ ಸಾಗುತ್ತಿವೆ. ಈ ಹಾದಿಯಲ್ಲೇ ಜೂ.6 ರಂದು ಸಂಜೆ ಭಾರಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುಂಚೆ ಚಿತ್ರತಂಡ ವೆಂಕಟೇಶ್ವರನ ದರ್ಶನಕ್ಕೆ ಹೋಗಿದ್ದರು. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನೂ ಅಷ್ಟೇ ಆಗಿದ್ದರೇ ಏನು ಸಮಸ್ಯೆ ಆಗುತ್ತಿರಲಿಲ್ಲ. ದೇವಾಲಯದ ಹೊರಗಡೆ ಬಂದಾಗ ನಿರ್ದೇಶಕ ಓಂ ರಾವತ್ ನಟಿ ಕೃತಿ ಸನನ್ ಗೆ ಮುತ್ತಿಟ್ಟಿದ್ದಾರೆ. ಈ ಪೊಟೋಗಳು ವೈರಲ್ ಆಗಿದ್ದು, ಅನೇಕರ ಆಕ್ರೋಷಕ್ಕೆ ಕಾರಣವಾಗಿದೆ.

ಬೆಳಿಗ್ಗೆ ದೇವರ ಅರ್ಚನೆ ಸೇವೆಗೆ ಭಾಗಿಯಾಗಿದ್ದ ಆದಿಪುರುಷ್ ಟೀಂಗ್ ದೇವರ ದರ್ಶನದ ಬಳಿಕ ಹೊರಗೆ ಬಂದರು. ಈ ವೇಳೆ ಕೃತಿ ಸನನ್ ಕೊಂಚ ತಡವಾಗಿ ಬಂದ ಹಿನ್ನೆಲೆಯಲ್ಲಿ ಓಂರಾವತ್ ಆಕೆಗೆ ತಮ್ಮ ಶೈಲಿಯಲ್ಲಿ ಆಹ್ವಾನಿಸಿ ತಬ್ಬಿಕೊಂಡು ಕೆನ್ನೆಯ ಮೇಲೆ ಮುತ್ತಿಟ್ಟಿದ್ದಾರೆ. ಇನ್ನೂ ನಟಿ ಕೃತಿ ಸನನ್ ಗೆ ಫ್ಲೈಟ್ ಟೈಂ ಆಗಿದ್ದರಿಂದ ಆಕೆ ಆತುರದಲ್ಲಿ ಹೊರಡಲು ಮುಂದಾಗಿದ್ದರಂತೆ. ಆಕೆಗೆ ಪ್ರೀತಿಯಿಂದ ಬಿಳ್ಕೊಡುವಾಗ ತಬ್ಬಿಕೊಂಡು ಕಿಸ್ ಮಾಡಿದ್ದಾರೆ. ಇದೀಗ ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ನಮಗೆ ಬೇರೆ ಉದ್ದೇಶ ಇಲ್ಲ ಎಂದು ಓಂ ರಾವತ್ ಸಹ ಹೇಳಿದ್ದಾರೆ.

ಇನ್ನೂ ತಿರುಮಲದಲ್ಲಿ ಅಂತಹ ಘಟನೆಗಳು ಏನಾದರೂ ನಡೆದರೇ ಸಿಕ್ಕಾಪಟ್ಟೆ ಸುದ್ದಿಯಾಗಿಬಿಡುತ್ತದೆ. ಈ ಹಿಂದೆ ನಯನತಾರಾ ಹಾಗೂ ವಿಘ್ನೇಶ್ ಸಹ ವಿವಾದಕ್ಕೆ ಸಿಲುಕಿದ್ದರು. ಇದೀಗ ಓಂ ರಾವತ್ ನಟಿ ಕೃತಿ ಸನನ್ ಗೆ ಮುತ್ತಿಟ್ಟಿರುವುದು ಎಲ್ಲರಿಗೂ ಬೇಸರ ತಂದಿದೆ. ಆದಿಪುರುಷ್ ಸಿನೆಮಾದಲ್ಲಿ ಸೀತೆಯ ಪಾತ್ರ ಪೋಷಣೆ ಮಾಡಿದ ಕೃತಿ ಸನನ್ ಬಗ್ಗೆ ಇದೀಗ ದೊಡ್ಡ ಮಟ್ಟದಲ್ಲಿ ಟ್ರೋಲ್ ಸಹ ಆಗುತ್ತಿದೆ. ಈ ರದ್ದಾಂತ ಎಲ್ಲಿಯವರೆಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top