ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿದ್ದಾರೆ ನಟಿ ವರಲಕ್ಷ್ಮೀ ಶರತ್ ಕುಮಾರ್, ಅಭಿಮಾನಿಗಳ ಬೇಸರ…….!

ಸೌತ್ ಸಿನಿರಂಗದ ಲೇಡಿ ವಿಲನ್ ಎಂದೇ ಖ್ಯಾತಿ ಪಡೆದುಕೊಂಡ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಕೆಲವು ದಿನಗಳ ಹಿಂದೆಯಷ್ಟೆ ಎಂಗೇಜ್ ಮೆಂಟ್ ಮಾಡಿಕೊಂಡರು. ಮದುವೆ ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಆಕೆಗೆ ಅಭಿಮಾನಿಗಳು ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಆಕೆ ಮದುವೆ ಬೇಡ ಬೇಡ ಎನ್ನುತ್ತಲೇ ಸದ್ದಿಲ್ಲದೇ ಕಳೆದೆರಡು ದಿನಗಳ ಹಿಂದೆಯಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ವರಲಕ್ಷ್ಮೀ ಮದುವೆಯಾಗುತ್ತಿರುವುದು ಇಬ್ಬರು ಮಕ್ಕಳ ತಂದೆ ನಿಖೋಲಯ್ ಸಚ್​ದೇವ್ ಎಂಬಾತನನ್ನು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಟಿ ವರಲಕ್ಷ್ಮೀ ಶರತ್ ಕುಮಾರ್‍ ಸದ್ಯ ಸಿನೆಮಾಗಳಲ್ಲಿ ಒಳ್ಳೆಯ ಸಕ್ಸಸ್ ಪಡೆದುಕೊಳ್ಳುತ್ತಿದ್ದಾರೆ. ಕೊನೆಯದಾಗಿ ಆಕೆ ಹನುಮಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಮೂಲಕ ಆಕೆ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಈ ಹಿಂದೆ ಅನೇಕ ಸಂದರ್ಶನಗಳಲ್ಲಿ ವರಲಕ್ಷ್ಮೀ ತನಗೆ ಮದುವೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಮದುವೆಯಾಗುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದರು. ಆದರೆ ಕಳೆದೆರಡು ದಿನಗಳ ಹಿಂದೆಯಷ್ಟೆ ಆಕೆ ತನ್ನ ಬಹುಕಾಲದ ಗೆಳೆಯ ನಿಖೋಲಯ್ ಸಚ್​ದೇವ್ ಎಂಬಾತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಅಭಿಮಾನಿಗಳು ಹಾಗೂ ನೆಟ್ಟಿಗರು ಸಹ ಶುಭಾಷಯಗಳನ್ನು ಕೋರಿದ್ದರು. ಈ ನಡುವೆ ನಿಖೋಲಯ್ ಸಚ್​ದೇವ್ ರವರ ಬಗ್ಗೆ ತಿಳಿದುಕೊಂಡ ಅನೇಕರು ವರಲಕ್ಷ್ಮೀ ತೆಗೆದುಕೊಂಡ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ನಟಿ ವರಲಕ್ಷ್ಮೀ ಶರತ್ ಕುಮಾರ್‍ ಮದುವೆಯಾಗಲಿರುವ ನಿಖೋಲಯ್ ಸಚ್​ದೇವ್ ರವರಿಗೆ ಈಗಾಗಲೇ ವಯಸ್ಸಿಗೆ ಬಂದಂತಹ ಇಬ್ಬರು ಮಕ್ಕಳಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. ನಿಖೋಲಯ್ ಸಚ್​ದೇವ್ ಈ ಹಿಂದೆ ಕವಿತಾ ಎಂಬಾಕೆಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಅವರ ಪುತ್ರಿ ಕಾಶಾ ಪವರ ಲಿಫ್ಟ್ ನಲ್ಲಿ ರಾಷ್ಟ್ರ ಮಟ್ಟದ ಪದಕ ಪಡೆದುಕೊಂಡಿದ್ದಾರೆ. ನಿಖೋಲಯ್ ಸಚ್​ದೇವ್ ಹಾಗೂ ಕವಿತಾ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಆತ ವರಲಕ್ಷ್ಮೀ ಶರತ್ ಕುಮಾರ್‍ ಜೊತೆಗೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ವರಲಕ್ಷ್ಮೀ ಅಭಿಮಾನಿಗಳು ಆಕೆಯ ಈ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 38 ವರ್ಷದ ವರಲಕ್ಷ್ಮೀ  ತನ್ನ ಬಹುಕಾಲದ ಸ್ನೇಹಿತ ನಿಖೋಲಯ್ ಸಚ್​ದೇವ್ ರವರನ್ನು ಇದೇ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲೆ ಅಧಿಕೃತವಾದ ಮಾಹಿತಿ ಹೊರಬೀಳಲಿದೆ.