ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಬೇಸಿಗೆ ರಜೆಗಳಲ್ಲಿ ತಿರುಪತಿಗೆ ತೆರಳುವ ಭಕ್ತರಿಗೆ ಸರ್ವದರ್ಶನ ಟಿಕೆಟ್ ಹೆಚ್ಚಳಕ್ಕೆ ಟಿಟಿಡಿ ನಿರ್ಧಾರ…..!

Follow Us :

ಕಲಿಯುಗದ ಪ್ರತ್ಯಕ್ಷ ದೈವ ಎಂದೇ ಕರೆಯಲಾಗುವ ತಿರುಪತಿಯಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಹೋಗುತ್ತಿರುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಲಿದ್ದು, ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಬಹುದು. ಈ ಕಾರಣದಿಂದ ತಿರುಮಲ ತಿರುಪತಿ ದೇವಸ್ಥಾನಂ ವತಿಯಿಂದ ಶುಭ ಸುದ್ದಿ ತಿಳಿಸಿದ್ದು, ಅದರಂತೆ ಸರ್ವದರ್ಶನ ಟಿಕೆಟ್ ಸಂಖ್ಯೆ ಹೆಚ್ಚಳಕ್ಕೆ ಟಿಟಿಡಿ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದರ್ಶನಕ್ಕೆ ಬರುವಂತಹ ಭಕ್ತರ ಸಂಖ್ಯೆ ಬೇಸಿಗೆ ರಜೆಯಲ್ಲಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ದರ್ಶನದ ಟಿಕೆಟ್ ಸಹ ಹೆಚ್ಚಳ ಮಾಡಲು ಟಿಟಿಡಿ ನಿರ್ಧಾರ ಮಾಡಿದೆ. ಉಚಿತ ಸರ್ವದರ್ಶನ ಹಾಗೂ 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಕೋಟಾದಲ್ಲೂ ಸಹ ಹೆಚ್ಚಳ ಮಾಡಲು ತೀರ್ಮಾನ ತೆಗೆದುಕೊಳ್ಳು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಇದೀಗ ಟಿಟಿಡಿ ಡಯಲ್ ಯುವರ್‍ EO ಕಾರ್ಯಕ್ರಮದಲ್ಲಿ ಈ ಕುರಿತು ಟಿಟಿಡಿ ಇ.ಒ ಎ.ವಿ.ಧರ್ಮರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇ.ಒ ಧರ್ಮರೆಡ್ಡಿ ಬೇಸಿಗೆಯ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಐಪಿ, ಪ್ರವಾಸೋದ್ಯಮ, ವರ್ಚುವಲ್ ಸೇವೆಗಳ ಟಿಕಟೆಗಳನ್ನು ಕಡಿಮೆ ಮಾಡಲಾಗುತ್ತದೆ. ಉಚಿತ ಸರ್ವದರ್ಶನ ಹಾಗೂ 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಕೋಟಾ ಹೆಚ್ಚಿಸಲಾಗುತ್ತದೆ. ಚುನಾವಣಾ ನೀತಿ ಸಂಹಿತೆ ಬರುವ ಕಾರಣದಿಂದ ವಿಐಪಿ ಶಿಫಾರಸ್ಸಿಗೆ ಸಹ ಬ್ರೇಕ್ ಹಾಕಲಾಗುತ್ತದೆ. ಇನ್ನೂ ಮತ್ತೆ ತಿರುಪತಿಯಲ್ಲಿ ಭರ್ಜರಿ ಆದಾಯ ಸಂಗ್ರಹವಾಗಿದೆ. ಫೆಬ್ರವರಿ ಮಾಹೆಯಲ್ಲೂ ಸಹ ದಾಖಲೆ ಪ್ರಮಾಣದ ಆದಾಯ ಬಂದಿದೆ. ಫೆಬ್ರವರಿ ಮಾಹೆಯಲ್ಲಿ 19.06 ಲಕ್ಷ ಭಕ್ತರ ಶ್ರೀವಾರಿ ದರ್ಶನ ಪಡೆದಿದ್ದು, 111.71 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದರು.