Film News

ಸಿನೆಮಾ ಬಗ್ಗೆ ಮಾತ್ರ ಯೋಚಿಸುತ್ತೇನೆ ವಿನಃ ಸಂಭಾವನೆಯ ಬಗ್ಗೆ ಅಲ್ಲ ಎಂದ ನಟಿ ಸಾಯಿಪಲ್ಲವಿ, ವೈರಲ್ ಆದ ಕಾಮೆಂಟ್ಸ್…..!

ಸಿನಿರಂಗದಲ್ಲಿ ಹೆಚ್ಚು ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ಸಾಯಿ ಪಲ್ಲವಿ ಮೊದಲಿಗರು ಎಂದರೇ ತಪ್ಪಾಗಲಾರದು. ಆಕೆ ಓವರ್‍ ಮೇಕಪ್ ಮಾಡದೇ, ಓವರ್‍ ಗ್ಲಾಮರ್‍ ಶೋ ಮಾಡದೇ ನ್ಯಾಚುರಲ್ ಸೌಂದರ್ಯದ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಇದೀಗ ಆಕೆ ಸಂಭಾವನೆಯ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಪ್ರೇಮಂ ಎಂಬ ಮಲಯಾಳಂ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ ಮೊದಲನೇ ಸಿನೆಮಾದ ಮೂಲಕವೇ ಫೇಂ ಪಡೆದುಕೊಂಡರು. ಅಲ್ಲಿಂದ ಆಕೆ ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸ್ಟಾರ್‍ ಡಂ ಗಿಟ್ಟಿಸಿಕೊಂಡಿದ್ದಾರೆ. ನಟನೆಯ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ಈಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನೂ ಕೊನೆಯದಾಗಿ ಆಕೆ ವಿರಾಟಪರ್ವಂ ಹಾಗೂ ಗಾರ್ಗಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇನ್ನೂ ನಟಿ ಸಾಯಿಪಲ್ಲವಿ ಸ್ಟಾರ್‍ ನಟಿಯಾದರೂ ಸಹ ಸಂಭಾವನೆಯ ಬಗ್ಗೆ ಡಿಮ್ಯಾಂಡ್ ಮಾಡಿಲ್ಲವಂತೆ. ಇದೀಗ ಆಕೆ ಸಂಭಾವನೆಯ ಬಗ್ಗೆ ನೀಡಿದ ಕೆಲವೊಂದು ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಸಾಯಿಪಲ್ಲವಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಂಭಾವನೆಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಆಂಕರ್‍ ಸಂಭಾವನೆಯ ಬಗ್ಗೆ ಪ್ರಶ್ನೆ ಮಾಡಿದಾಗ ಆಕೆ ತನ್ನ ಮನಸ್ಸಿನಲ್ಲಿನ ಮಾತನ್ನು ಹೊರಹಾಕಿದ್ದಾರೆ. ಕೆಲವೊಮ್ಮೆ ಮಾತ್ರ ನಾನು ಹಣವನ್ನು ಕೇಳುತ್ತೇನೆ. ಆದರೆ ಕೊಡಲು ಆಗದವರ ಬಳಿ ಹಣ ಕೇಳಿದ್ದು ಇಲ್ಲ. ಎಷ್ಟು ಕೊಟ್ಟರು ತೆಗೆದುಕೊಳ್ಳುತ್ತೇನೆ. ಪಾರಿತೋಷಕದ ವಿಚಾರದಲ್ಲಿ ನನಗೆ ಡಿಮ್ಯಾಂಡ್ ಮಾಡುವುದು ಇಷ್ಟವಿಲ್ಲ. ಒಂದು ವೇಳೆ ನಾನು ವೈದ್ಯ ವೃತ್ತಿಯಲ್ಲಿ ಇದಿದ್ದರೇ ಫ್ರೀ ಸರ್ವಿಸ್ ಮಾಡೋಕೆ ಆಗುತ್ತಿರಲಿಲ್ಲ. ಆದರೆ ಅವಶ್ಯಕತೆ ಬಿದ್ದಾಗ ಪ್ರತಿಬಾರಿ ಉಚಿತ ಸೇವೆ ನೀಡಲು ಮುಂದಿರುತ್ತೇನೆ. ಕೆಲವರಿಗೆ ಹಣ ಕೊಡುವ ಸಾಮರ್ಥ್ಯ ಇರುತ್ತೆ, ಮತ್ತೆ ಕೆಲವರಿಗೆ ಇರೊಲ್ಲ. ಸಿನೆಮಾದಲ್ಲೂ ಸಹ ಆಸುಪಾಸು ಅದೇ ರೀತಿಯಿರುತ್ತದೆ. ಅದೇ ರೀತಿಯಲ್ಲೇ ಯೋಚನೆ ಮಾಡುತ್ತೇನೆ ಎಂದಿದ್ದಾರೆ.

ಇನ್ನೂ ಸಿನೆಮಾ ಚೆನ್ನಾಗಿದ್ದಾಗ ನಾನು ಸಂಭಾವನೆಯ ಬಗ್ಗೆ ಯೋಚಿಸೊಲ್ಲ. ಸಿನೆಮಾದ ನಿರ್ಮಾಣಪಕರು ಹಣ ಕೊಡೋಕೆ ಆದರೆ ಕೊಟ್ಟೆ ಕೊಡುತ್ತಾರೆ. ಆದರೆ ಸಣ್ಣ ನಿರ್ಮಾಣಪಕರು ಕಡಿಮೆ ಕೊಡುತ್ತಾರೆ. ನಾನು ಎಂದೂ ಸಹ ಸಿನೆಮಾ ಬಗ್ಗೆ ಮಾತ್ರ ಆಲೋಚನೆ ಮಾಡುತ್ತೇನೆ ಹಣದ ಬಗ್ಗೆ ಯೋಚನೆ ಮಾಡೋಲ್ಲ ಎಂದಿದ್ದಾರೆ. ಇನ್ನೂ ಸಾಯಿಪಲ್ಲವಿ ಸಂಭಾವನೆಯ ಬಗ್ಗೆ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆಕೆಯ ಈ ಒಳ್ಳೆಯ ಮನಸ್ಸಿನ ಮಾತುಗಳಿಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ.

Most Popular

To Top