ಮತ್ತೊಮ್ಮೆ ಮಾನವೀಯತೆ ಮೆರೆದ ಸ್ಟಾರ್ ನಟ ಸೋನು ಸೂದ್, ಯುವಕನಿಗೆ ಪೋನ್ ಮಾಡಿ ನಿಮ್ಮ ತಂದೆಯನ್ನು ಕಾಪಾಡುತ್ತೇನೆ ಎಂದ ನಟ…….!

Follow Us :

ದೇಶದ ಸಿನಿರಂಗದ ನಟ ಸೋನು ಸೂದ್ ಸಿನೆಮಾಗಳಿಗಿಂತ ವೈಯುಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾದರು ಎನ್ನಬಹುದು. ಕೋವಿಡ್ ಸಮಯದಲ್ಲಿ ಅವರು ಮಾಡಿದಂತಹ ಸಾಮಾಜಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ಅವರ ಸಾಮಾಜಿಕ ಸೇವೆ ಇಂದಿಗೂ ಸಹ ಮುಂದುವರೆಯುತ್ತಲೇ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ, ಬಡತನದಿಂದ ಬಳಲುತ್ತಿರುವವರಿಗೆ ತುಂಬಾನೆ ಸಹಾಯ ಮಾಡುತ್ತಿದ್ದಾರೆ. ಇದೀಗ ಓರ್ವ ಮಗ ತಂದೆಗಾಗಿ ಪಡುತ್ತಿರುವ ನೋವನ್ನು ಅರಿತು ಆತನಿಗೆ ಸಹಾಯ ಮಾಡಲು ಸೋನು ಸೂದ್ ಮುಂದಾಗಿದ್ದಾರೆ.

ಮಗನೊಬ್ಬ ತನ್ನ ತಂದೆ ಪ್ರಾಣಾಪಾಯ ಸ್ಥಿತಿಯಲ್ಲಿದ್ದು, ತನ್ನ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದರು. ಈ ವೇಳೆ ಅನೇಕರು ಆತನ ಬಗ್ಗೆ ಕರುಣೆ ತೋರಿಸಿದವರು ಹೆಚ್ಚು, ಸಹಾಯ ಮಾಡಿದ್ದು ಕಡಿಮೆ ಮಂದಿ ಎನ್ನಬಹುದು. ಇನ್ನೂ ಈ ಪೋಸ್ಟ್ ನೋಡಿದ ನಟ ಸೋನು ಸೂದ್ ಕೂಡಲೇ ಸ್ಪಂಧಿಸಿದ್ದಾರೆ. ಆತನ ತಂದೆಯ ಪ್ರಾಣ ಉಳಿಸಲು ಮುಂದಾಗಿದ್ದಾರೆ. ಆ ಮೂಲಕ ಅವರು ಮತ್ತೊಮ್ಮೆ ತಮ್ಮ ಒಳ್ಳೆಯ ಮನಸ್ಸು ಸಾರಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಡಿಯೋರಿ ಎಂಬ ಪ್ರದೇಶದ ಪಲ್ಲವ್ ಸಿಂಗ್ ಎಂಬ ಯುವಕ ತನ್ನ ತಂದೆಯ ಹೃದಯ ಕೇವಲ ಶೇ.20 ರಷ್ಟು ಮಾತ್ರ ಕೆಲಸ ಮಾಡುತ್ತಿದೆ. ನಮ್ಮ ತಂದೆ ಬದುಕಲು ಶಸ್ತ್ರ ಚಿಕಿತ್ಸೆ ಅವಸರವಿದೆ. ನನ್ನ ತಂದೆ ಸಾಯಬಹುದು. ಹೌದು ನಾನು ಹೇಳಿದ್ದು ನಿಜ ಎಂದು ನನಗೆ ಗೊತ್ತು. ದೆಹಲಿ ಏಮ್ಸ್ ಆಸ್ಪತ್ರೆಯ ಕ್ಯೂ ನಲ್ಲಿ ನಿಂತು ಇದನ್ನು ಬರೆಯುತ್ತಿದ್ದೇನೆ ಎಂದು ಪೂರ್ಣ ವಿವರಗಳನ್ನು ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅನೇಕರು ಆತ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ತನ್ನ ತಂದೆಯ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಆತನನ್ನು ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿನ ವೈದ್ಯರು ಆತನಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕ, ಚಿಕಿತ್ಸೆ ಮಾಡಲು ಹದಿಮೂರು ತಿಂಗಳು ಕಾಯಬೇಕು, ಜೊತೆಗೆ ಲಕ್ಷಗಳು ಖರ್ಚು ಮಾಡಬೇಕು ಎಂದು ವೈದ್ಯರು ತಿಳಿಸಿದ್ದರಂತೆ.

ಇನ್ನೂ ತನ್ನ ತಂದೆಯ ಆರೋಗ್ಯ ಸಮಸ್ಯೆಯ ಬಗ್ಗೆ ಮಗ ಸೋಷಿಯಲ್ ಮಿಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನಟ ಸೋನೂ ಸೂದ್ ಸಹ ರಿಯಾಕ್ಟ್ ಆಗಿದ್ದಾರೆ. ನಾವು ನಿಮ್ಮ ತಂದೆಯನ್ನು ಸಾಯಲು ಬಿಡುವುದಿಲ್ಲ. ನನ್ನ ವೈಯುಕ್ತಿಕ ಟ್ವಿಟರ್‍ ಐಡಿ ಇನ್ ಬಾಕ್ಸ್ ಗೆ ನಿಮ್ಮ ನಂಬರ್‍ ಸೆಂಡ್ ಮಾಡಿ, ದಯಮಾಡಿ ಟ್ವಿಟ್ ನಲ್ಲಿ ಪೋಸ್ಟ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.