News

ಹಿಂದೂ ಹಾಗೂ ಸನಾತನ ಧರ್ಮದ ನಾಶವೇ ಕಾಂಗ್ರೇಸ್ ಉದ್ದೇಶ, ನಾನು ಇರೋವರೆಗೂ ಅದು ಅಸಾಧ್ಯ ಎಂದ ಮೋದಿ…..!

ಲೋಕಸಭಾ ಚುನಾವಣೆ 2024ರ ಪ್ರಚಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬಂದಿದ್ದು, ಈ ಸಂಬಂಧ ಏರ್ಪಡಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೇಸ್ ಉದ್ದೇಶ ಹಿಂದೂ ಹಾಗೂ ಸನಾತನ ಧರ್ಮ ನಾಶ ಮಾಡೋದು, ಆದರೆ ಎಲ್ಲಿಯವರೆಗೂ ಮೋದಿ ಇರುತ್ತಾರೋ ಅದು ಅಸಾಧ್ಯವಾದುದು, ಇದೇ ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಮೈಸೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿ, ಇಲ್ಲಿನ ದಸರಾ ಇಡೀ ದೇಶಕ್ಕೆ ಪ್ರಖ್ಯಾತಿ, ತಾಯಿ ಚಾಮುಂಡಿ, ತಾಯಿ ಭುವನೇಶ್ವರಿ, ತಾಯಿ ಕಾವೇರಿ ಪಾದಗಳಿಗೆ ನನ್ನ ಪ್ರಣಾಮಗಳು, ಸಂಸದೀಯ ಕ್ಷೇತ್ರದಲ್ಲಿ ದೇವೇಗೌಡ ರವರದ್ದು ದೊಡ್ಡ ಹೆಸರು  ಅವರಿಗೆ ನನ್ನ ನಮಗಳು ಎಂದು ಮಾತುಗಳನ್ನು ಆರಂಭಿಸಿದರು. ಬಿಜೆಪಿ ಸಂಕಲ್ಪ ಪತ್ರ ಮೋದಿ ಕಾ ಗ್ಯಾರಂಟಿಯಾಗಿದೆ.  ಉಚಿತ ಪಡಿತರ ವಿತರಣೆ, ಬಡವರಿಗೆ 3 ಕೋಟಿ ಮನೆ ನಿರ್ಮಾಣ, ಆಯುಷ್ಮಾನ್ ಭಾರತ್ ಅಡಿ ಹಿರಿಯರಿಗೆ ಉಚಿತ ವೈದ್ಯಕೀಯ ಸೇವೆ ಮೊದಲಾದ ಬಿಜೆಪಿ ಸಂಕಲ್ಪ ಪತ್ರದ ಬಗ್ಗೆ ವಿವರಣೆ ನೀಡಿದರು.

ಕನ್ನಡ ಭಾಷೆ ಸಮೃದ್ದವಾದ ಭಾಷೆ, ಈ ಭಾಷೆಯನ್ನು ನಾವು ಮತಷ್ಟು ವಿಸ್ತರಣೆ ಮಾಡುತ್ತೇವೆ. ನಮ್ಮ ಸರ್ಕಾರ ಸ್ಥಳೀಯ ಭಾಷೆಗಳ ಬೆಳವಣಿಗೆಗೆ ಬದ್ದವಾಗಿದೆ. ಹಂಪೆ, ಮೈಸೂರು, ಬಾದಾಮಿ ವಿಶ್ವ ಪ್ರವಾಸೋದ್ಯಮ ನಕ್ಷೆಗೆ ತೆಗದುಕೊಂಡು ಹೋಗುತ್ತೇವೆ. ಮಾಜಿ ಪ್ರಧಾನಿ ದೇವೆಗೌಡವರವರ ನಿರ್ದೇಶನ, ಸಲಹೆ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ಅನುಭವಿ ರಾಜಕಾರಣಿ ಯಡಿಯೂರಪ್ಪ, ದೇವೇಗೌಡರ ಮಾರ್ಗದರ್ಶನ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರ ಸಹಯೋಗ ನಮ್ಮ ಶಕ್ತಿ ದುಪ್ಪಟ್ಟು ಮಾಡಿದೆ. ನಮಗೆ ಮೈಸೂರಿನ ಶಕ್ತಿ ದೇವಿಯ ಆರ್ಶಿವಾದ ಸಿಕ್ಕಿದೆ. ಅದೇ ರೀತಿ ಕರ್ನಾಟಕ ಜನತೆಯ ಆಶೀರ್ವಾದ ಸಹ ಸಿಗಲಿದೆ ಎಂದು ಭಾವಿಸುತ್ತೇನೆ ಎಂದರು.

ಮುಂದುವರೆದು ಕಾಂಗ್ರೇಸ್ ನ ತುಕ್ಡೆ-ತುಕ್ಡೆ ಗ್ಯಾಂಗ್ ದೇಶ ಸುತ್ತುತ್ತಿದೆ. ಇಡೀ ದೇಶವೇ ಕಾಂಗ್ರೇಸ್ ವಿರುದ್ದ ಮಾತನಾಡುತ್ತಿದೆ. ಭಾರತ್ ಮಾತಾ ಕಿ ಜೈ ಅನ್ನೋಕು ಕಾಂಗ್ರೇಸ್ ಅನುಮತಿ ಬೇಕು, ದೇಶ ವಿರೋಧಿ ಕಾಂಗ್ರೇಸ್ ನಮಗೆ ಬೇಕಾ. ಮೊದಲಿಗೆ ವಂದೇ ಮಾತರಂ ಗೆ ಕಾಂಗ್ರೇಸ್ ನವರು ವಿರೋಧ ಮಾಡಿದರು. ಈಗ ಭಾರತ್ ಮಾತಾಕಿ ಜೈ ಅಂತಾ ಹೇಳೋಕೆ ವಿರೋಧ ಮಾಡ್ತಾ ಇದ್ದಾರೆ. ಇದು ಕಾಂಗ್ರೇಸ್ ಪತನಕ್ಕೆ ಮುಖ್ಯ ಕಾರಣ. ನಾವು ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸಿದ್ದೇವೆ. ರಾಮ ಮಂದಿರ ಉದ್ಘಾಟನೆ ಆಹ್ವಾನವನ್ನು ಕಾಂಗ್ರೇಸ್ ತಿರಸ್ಕರಿಸಿತ್ತು. ಕಾರ್ಯಕ್ರಮ ಬಹಿಷ್ಕರಿಸಿದರು. ಸನಾತನ ಹಾಗೂ ಹಿಂದೂ ಧರ್ಮ ನಾಶ ಮಾಡೋದು ಕಾಂಗ್ರೇಸ್ ಉದ್ದೇಶ, ಆದರೆ ನಾನು ಎಲ್ಲಿಯವರೆಗೂ ಇರುತ್ತಿನೋ ಅದು ಅಸಾಧ್ಯ. ಇದು ಮೋದಿ ಗ್ಯಾರಂಟಿ ಎಂದು ಹೇಳಿದ್ದಾರೆ.

Most Popular

To Top