ಕೇರಳ ಸ್ಟೋರಿ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಕಮಲ್ ಹಾಸನ್, ಪೋಸ್ಟರ್ ಇದ್ದರೇ ಸಾಲದು ಎಂದ ನಟ, ಸರಿಯಾಗಿ ಕೌಂಟರ್ ಕೊಟ್ಟ ನಿರ್ದೇಶಕ….!

Follow Us :

ದಿ ಕಾಶ್ಮೀರಿ ಫೈಲ್ಸ್ ನಂತೆ ಸಂಚಲನ ಸೃಷ್ಟಿಸಿದ ದಿ ಕೇರಳ ಸ್ಟೋರಿ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಸುಮಾರು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಸೃಷ್ಟಿಸಿದೆ. ಅನೇಕ ವಿವಾದಗಳ ನಡುವೆ ಈ ಸಿನೆಮಾ ಭಾರಿ ಸಕ್ಸಸ್ ಪಡೆದುಕೊಂಡಿದ್ದು ಗಮರ್ನಾಹವಾದ ವಿಚಾರ ಎನ್ನಬಹುದಾಗಿದೆ. ವಿಮರ್ಶೆಗಳ ಜೊತೆಗೆ ಪ್ರಶಂಸೆಗಳ ಮೂಲಕ ಪ್ರದರ್ಶನಗೊಂಡ ಈ ಸಿನೆಮಾದ ಬಗ್ಗೆ ಕಾಲಿವುಡ್ ಸ್ಟಾರ್‍ ನಟ ಕಮಲ್ ಹಾಸನ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅದಕ್ಕೆ ದಿ ಕೇರಳ ಸ್ಟೋರಿ ನಿರ್ದೇಶಕ ಸಹ ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಸುದಿಪ್ತೊ ಸೇನ್ ನಿರ್ದೇಶನದಲ್ಲಿ ಮೂಡಿಬಂದ ದಿ ಕೇರಳ ಸ್ಟೋರಿ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ಅದಾಶರ್ಮಾ ನಟಿಸಿದ್ದಾರೆ. ಸಿನೆಮಾದ ಟ್ರೈಲರ್‍, ಪೋಸ್ಟರ್‍ ಬಿಡುಗಡೆಯಾದಾಗಿನಿಂದಲೂ ಸಹ ಅನೇಕ ವಿವಾದಗಳು, ಸಂಚಲನಗಳನ್ನು ಸೃಷ್ಟಿ ಮಾಡುತ್ತಲೇ ಬಂದಿದೆ. ಅಷ್ಟೇ ಅಲ್ಲದೇ ದೇಶದ ಕೆಲವು ರಾಜ್ಯಗಳಲ್ಲಿ ಈ ಸಿನೆಮಾದ ಮೇಲೆ ಬ್ಯಾನ್ ಸಹ ಹೇರಲಾಗಿತ್ತು. ಆದರೂ ಸಹ ಈ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಈ ಸಿನೆಮಾದ ಮೇಲೆ ಅನೇಕ ವಿಮರ್ಶೆಗಳ ಜೊತೆಗೆ ಪ್ರಶಂಸೆಗಳೂ ಸಹ ಬಂದಿದೆ. ಇದೀಗ ಕಾಲಿವುಡ್ ಸ್ಟಾರ್‍ ನಟ ಕಮಲ್ ಹಾಸನ್ ಈ ಸಿನೆಮಾದ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟ ಕಮಲ್ ಹಾಸನ್ ಕೇರಳ ಸ್ಟೋರಿ ಸಿನೆಮಾದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಇದು ನೈಜ ಘಟನೆಯನ್ನು ಆಧರಿಸಿದ ತೆಗೆದ ಸಿನೆಮಾ ಆಗಿದೆ ಎಂದು ಟೈಟಲ್ ಹಾಗೂ ಪೋಸ್ಟರ್‍ ನಲ್ಲಿ ಹಾಕಲಾಗಿದೆ. ನೈಜ ಘಟನೆ ಎಂದು ಹಾಕಿದರೇ ಮಾತ್ರ ಸಾಲದು ಅದು ನಿಜಕ್ಕೂ ನಡೆದಿರಬೇಕು. ಆಗಲೇ ಆ ಟೈಟಲ್ ಗೆ ಜಸ್ಟಿಫಿಕೇಷನ್ ಆಗುತ್ತದೆ. ಆದರೆ ಕೇರಳ ಸ್ಟೋರಿ ನಿಜ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಕೇರಳದಲ್ಲಿ ಮಹಿಳೆಯರನ್ನು ಟ್ರಾಪ್ ಮಾಡಿ ಮುಸ್ಲೀಂರಾಗಿ ಮತಾಂತರ ಮಾಡಿ ಬಳಿಕ ಬಲವಂತವಾಗಿ ಉಗ್ರವಾದ ಸಂಸ್ಥೆಗಳಿಗೆ ಕಳುಹಿಸುವ ಘಟನೆಗಳು ನಡೆಯುತ್ತಿದೆ ಎಂಬ ಅಂಶದೊಂದಿಗೆ ಈ ಕೇರಳ ಸ್ಟೋರಿ ಸಿನೆಮಾ ನಿರ್ಮಾಣ ಮಾಡಲಾಗಿದೆ. ಆದರೆ ಇದೊಂದು ಸುಳ್ಳು ಕಥೆ, ಅದರಲ್ಲಿ ವಾಸ್ತವತೆ ಇಲ್ಲ ಎಂದು ಅನೇಕ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಇದೀಗ ಕಮಲ್ ಹಾಸನ್ ಸಹ ಈ ಸಿನೆಮಾದಲ್ಲಿ ನೈಜತೆಯಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಕಮಲ್ ಹಾಸನ್ ರವರ ಈ ಕಾಮೆಂಟ್ ಗಳ ಬಗ್ಗೆ ನಿರ್ದೇಶಕ ಸುದಪ್ತೋ ಸೇನ್ ಸಹ ರಿಯಾಕ್ಟ್ ಆಗಿದ್ದಾರೆ. ಅಂತಹ ಕಾಮೆಂಟ್ ಗಳು ಮಾಡುವವರ ಬಗ್ಗೆ ನಾನು ರಿಯಾಕ್ಟ್ ಆಗುವುದಿಲ್ಲ. ಏಕೆಂದರೇ ಆ ಸಿನೆಮಾ ನೋಡದೆನೇ ಅದೊಂದು ವಾಸ್ತವತೆಯಿಲ್ಲದ ಸಿನೆಮಾ ಎಂದು ಹೇಳಿದವರೂ ಸಹ ಅನೇಕರಿದ್ದಾರೆ. ಸಿನೆಮಾ ನೋಡಿದ ಬಳಿಕ ಅಂತಹವರೆ ಪ್ರಶಂಸೆ ಮಾಡಿದ್ದಾರೆ. ಸಿನೆಮಾ ಅನೇಕರಿಗೆ ಇಷ್ಟವಾದಗ ಅಂತಹ ನೆಗೆಟೀವ್ ಕಾಮೆಂಟ್ ಗಳ ಬಗ್ಗೆ ತಲೆಗೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಮ್ಮದೇ ಆದ ಶೈಲಿಯಲ್ಲಿ ಕೌಂಟರ್‍ ಕೊಟ್ಟಿದ್ದಾರೆ.