ಭಾವಿ ಪತ್ನಿ ಜೊತೆಗೆ ಅಂಬಿ ಪುತ್ರ ಡ್ಯುಯೆಟ್, ವೈರಲ್ ಆದ ವಿಡಿಯೋ….!

ಸ್ಯಾಂಡಲ್ ವುಡ್ ದಿಗ್ಗಜ ನಟ ದಿವಂಗತ ಅಂಬರೀಶ್ ಹಾಗೂ ಸುಮಲತಾ ರವರ ಪುತ್ರ ಅಭಿಷೇಕ್ ಮದುವೆ ಶೀಘ್ರದಲ್ಲೇ ನೆರವೇರಲಿದೆ. ಅಭಿಷೇಕ್ ಹಾಗೂ ಅವಿವಾ ಇಬ್ಬರೂ ಸುಮಾರು ದಿನಗಳಿಂದ ಪ್ರೀತಿಸಿ ದೊಡ್ಡವರ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿಯಲಿದ್ದಾರೆ. ಇನ್ನೂ ಮೇ.29 ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್‍ ಅಂಬರೀಶ್ ರವರ ಹುಟ್ಟುಹಬ್ಬ ನಡೆದಿದ್ದು, ಅವರ ಅಭಿಮಾನಿಗಳು ಶುಭಕೋರಿದ್ದಾರೆ. ಇನ್ನೂ ಈ ವಿಶೇಷ ದಿನದಂದು ಅಭಿಷೇಕ್ ಹಾಗೂ ಅವಿವಾ ಅಂಬಿ ರವರ ಸೂಪರ್‍ ಹಿಟ್ ಹಾಡುಗಳಿಗೆ ಡ್ಯುಯೆಟ್ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ದಿವಂಗತ ಅಂಬರೀಶ್ ರವರ ಹುಟ್ಟುಹಬ್ಬದ ನಿಮಿತ್ತ ಅವರು ಇಹಲೋಕ ತ್ಯೆಜಿಸಿದರೂ ಸಹ ಅನೇಕ ಅಭಿಮಾನಿಗಳು ಅವರು ಇದ್ದಾರೆಂಭ ಭಾವನೆಯಿಂದಲೇ ಶುಭಾಷಯಗಳನ್ನು ಕೋರಿದ್ದಾರೆ. ಇನ್ನೂ ಅಂಬಿ ಪುತ್ರ ಹಾಗೂ ಅವಿವಾ ನಟ ಅಂಬರೀಷ್ ರವರ ಕೆಲವೊಂದು ಸೂಪರ್‍ ಹಿಟ್ ಹಾಡುಗಳಿಗೆ ಭರ್ಜರಿಯಾಗಿ ಡ್ಯುಯೆಟ್ ಹಾಡಿದ್ದಾರೆ. ರೆಟ್ರೋ ಶೈಲಿಯಲ್ಲಿ ಒಲವಿನ ಉಡುಗೊರೆ ಕೊಡಲೇನು, ಮಂಡ್ಯದ ಗಂಡು, ಚಳಿ ಚಳಿ ತಾಳೆನು ಈ ಚಳಿಯ ಹಾಡುಗಳಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವಿವಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅವರಿಬ್ಬರ ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. ಇನ್ನೂ ಅಂಬಿ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಈ ವಿಡಿಯೋ ಕಾರಣದಿಂದ ನಮಗೆ ಅಂಬರೀಶ್ ನೆನಪಾದರು ಎಂಬುದನ್ನು ಕಾಮೆಂಟ್ ಗಳ ರೂಪದಲ್ಲಿ ತಿಳಿಸುತ್ತಿದ್ದಾರೆ.

ಇನ್ನೂ ಈ ವಿಡಿಯೋವ್ನನು ಕೆ.ಆರ್‍.ಜಿ ಕನೆಕ್ಟ್ಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ್ದು, ಇದು ರೆಬೆಲ್ ಸ್ಟಾರ್‍ ಅಂಬರೀಶ್ ರವರ ಟ್ರಿಬ್ಯೂಟ್ ಎಂದು ಹೇಳಿದ್ದಾರೆ. ರೆಬೆಲ್ ಸ್ಟಾರ್‍ ಅಂಬರೀಶ್ ರವರ ಹುಟ್ಟುಹಬ್ಬದ ಅಂಗವಾಗಿ ಈ ವಿಶೇಷ ವಿಡಿಯೋ, ಅಭಿಷೇಕ್ ಹಾಗೂ ಅವಿವಾ ರವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಕೆಲವೇ  ನಿಮಿಷಗಳಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಅಭಿಷೇಕ್ ಅವಿವಾ ರವರ ಮದುವೆ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಜೂ.4 ರಂದು ಅಂಬಿ ನಿವಾಸದಲ್ಲಿ ಚಪ್ಪರ, ಜೂ.5 ರಂದು ಮೂಹೂರ್ತ, ಜೂ.7 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ.

ಇನ್ನೂ ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾ ಕ್ರೈಂ ಥ್ರಿಲ್ಲರ್‍ ಕಥನವನ್ನು ಒಳಗೊಂಡಿದ್ದು, ರಚಿತಾ ರಾಮ್ ಹಾಗೂ ಪ್ರಿಯಾಂಕ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನೂ ಈ ಸಿನೆಮಾದ ಫಸ್ಟ್ ಲುಕ್ ಹಾಗೂ ಪೋಸ್ಟರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ.