Film News

ಪ್ರಿಯಕರನ ನ್ಯೂಡ್ ಪೊಟೋ ಹಂಚಿಕೊಂಡ ಮಲೈಕಾ, ಏನಿದು ದರಿದ್ರ ಎಂದ ನೆಟ್ಟಿಗರು…….!

ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಅರೋರಾ ಸಂಚಲನ ಸೃಷ್ಟಿ ಮಾಡುವ ನಟಿಯಾಗಿದ್ದಾರೆ. ಆಕೆಯ ಹಾಟ್ ನೆಸ್ ನೋಡಿದರೇ ಯಂಗ್ ನಟಿಯರಿಗೂ ಸಹ ಅಸೂಯೆ ಹುಟ್ಟುತ್ತದೆ. ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಫೇಂ ಪಡೆದುಕೊಂಡ ಈಕೆ ಸೊಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇನ್ನೂ ಮಲೈಕಾ ಹಾಗೂ ಅರ್ಜುನ್ ಕಪೂರ್‍ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವಾಗಿದೆ.  ಇದೀಗ ಅರ್ಜುನ್ ಕಪೂರ್‍ ನ್ಯೂಡ್ ಪೊಟೋ  ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದು, ಎಲ್ಲರಿಂದಲೂ ಟ್ರೋಲ್ ಗೆ ಗುರಿಯಾಗಿದ್ದಾಳೆ.

ಬಾಲಿವುಡ್ ನಲ್ಲಿ ಮಾಡಲ್ ಆಗಿ, ಡ್ಯಾನ್ಸರ್‍ ಆಗಿ, ನಟಿಯಾಗಿ, ಯೋಗಾ ಟ್ರೈನರ್‍ ಆಗಿ ಕೆರಿಯರ್‍ ಸಾಗಿಸುತ್ತಿರುವ ಮಲೈಕಾ ವಯಸ್ಸಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ಹಾಟ್ ಸೌಂದರ್ಯವನ್ನು ಹೊಂದಿದ್ದಾರೆ. ಇನ್ನೂ ಬಾಲಿವುಡ್ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಅನೇಕ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಕ್ರೇಜಿ ಲವ್ ಬರ್ಡ್ಸ್ ಆಗಿ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ.  ಬಾಲಿವುಡ್ ನಲ್ಲಿ ಇತ್ತೀಚಿಗೆ ಅನೇಕ ಜೋಡಿಗಳು ಮದುವೆಯಾಗುತ್ತಿದ್ದಾರೆ. ಆದರೆ ಕಳೆದ 2016ರಿಂದ ಪ್ರೇಮ ಪಯಣ ಸಾಗಿಸುತ್ತಿರುವ ಮಲೈಕಾ ಹಾಗೂ ಅರ್ಜುನ್ ಮಾತ್ರ ಇನ್ನೂ ಮದುವೆಯಾಗುವ ಶುಭಸುದ್ದಿ ನೀಡಿಲ್ಲ. ಆದರೆ ಇಬ್ಬರೂ ಸಾರ್ವಜನಿಕವಾಗಿಯೇ ಸುತ್ತಾಡುತ್ತಾ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದಾರೆ.

ನಟಿ ಮಲೈಕಾ ಅರೋರಾ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಆಕೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್‍ ಜೊತೆಗೆ ಸಹಜೀವನ ನಡೆಸುತ್ತಿದ್ದಾರೆ. ಇನ್ನೂ ಆಕೆ ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ಸಾಗಿಸುತ್ತಿದ್ದಾಳೆ. ಈ ಇಬ್ಬರೂ ವೆಕೇಷನ್ ಗಳಿಗೆ ಹಾರುತ್ತಾ ರೊಮ್ಯಾಂಟಿಕ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಲೈಕಾ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್‍ ನ್ಯೂಡ್ ಪೊಟೋ ಒಂದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆತ ನಗ್ನವಾಗಿರುವ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೋಟೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಅದೇ ಮಾದರಿಯಲ್ಲಿ ಟ್ರೋಲ್ ಗೆ ಸಹ ಗುರಿಯಾಗಿದೆ.

ಈ ಪೊಟೋದಲ್ಲಿ ಅರ್ಜುನ್ ಕಪೂರ್‍ ಆ ಸ್ಥಳದಲ್ಲಿ ದಿಂಬನ್ನು ಅಡ್ಡ ಇಟ್ಟುಕೊಂಡಿದ್ದಾರೆ ಅಷ್ಟೆ. ಇನ್ನೂ ಈ ಪೊಟೋಗೆ ಆಕೆ ನನಗೆ ಸ್ವಂತವಾದ ನನ್ನ ಲೇಜಿ ಭಾಯ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪೊಟೋಗೆ ನೆಟ್ಟಿಗರು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ನೀವು ಹೇಗಾದರೂ ಎಂಜಾಯ್ ಮಾಡಿಕೊಳ್ಳಿ ನಮಗೆ ಸಂಬಂಧವಿಲ್ಲ. ಬಟ್ಟೆ ಬಿಚ್ಚಿದ ಪೊಟೋಗಳು ನಮಗೆ ಏತಕ್ಕೆ ತೋರಿಸುತ್ತೀಯಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಜೋಡಿ ಮಾತ್ರ ಅಂತಹ ಟ್ರೋಲ್ ಗಳಿಗೆ ಕಿವಿಗೊಡುವುದೇ ಇಲ್ಲ.

Most Popular

To Top