ಸಲ್ಲು ಭಾಯ್ ಜೊತೆಗೆ ರಾಮ್ ಚರಣ್ ಡ್ಯಾನ್ಸ್, ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್..!

Follow Us :

ಸೌತ್ ಸಿನಿರಂಗದಲ್ಲಿ ಮೆಗಾ ಫ್ಯಾಮಿಲಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಮೆಗಾ ಕುಟುಂಬಕ್ಕೆ ಭಾರಿ ಅಭಿಮಾನಿ ಬಳಗವಿದ್ದು, ಅವರ ಸಿನೆಮಾಗಳ ಬಗ್ಗೆ ಅಪ್ಡೇಟ್ ಬಂದರೇ ಕಡಿಮೆ ಸಮಯದಲ್ಲೇ ಸಖತ್ ಸದ್ದು ಮಾಡುತ್ತದೆ. ಇದೀಗ ಮೆಗಾ ಫ್ಯಾನ್ಸ್ ಗೆ ಮತ್ತೊಂದು ಗುಡ್ ನ್ಯೂಸ್ ದೊರೆತಿದೆ. ಇದೀಗ ಬಾಲಿವುಡ್ ಮೆಗಾಸ್ಟಾರ್‍ ಸಲ್ಮಾನ್ ಖಾನ್ ಸಿನೆಮಾದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಪ್ಡೇಟ್ ಒಂದು ಹೊರಬಂದಿದ್ದು, ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

ಮೆಗಾ ಕುಟುಂಬದ ರಾಮ್ ಚರಣ್ RRR ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ರಾಮ್ ಚರಣ್ ಕ್ರೇಜ್ ಸಹ ಭಾರಿ ಮಟ್ಟದಲ್ಲಿ ಬೆಳೆದಿದೆ. ಈ ಸಿನೆಮಾದ ಬಳಿಕ ರಾಮ್ ಚರಣ್ ಬಾಲಿವುಡ್ ನಲ್ಲೂ ಸಹ ಭಾರಿ ಫೇಂ ಸಂಪಾದಿಸಿಕೊಂಡರು. ಬಾಲಿವುಡ್ ನಲ್ಲೂ ಸಹ ಅವಕಾಶಗಳು ಹರಿದು ಬರುತ್ತಿವೆ. ಸದ್ಯ ರಾಮ್ ಚರಣ್ ಸಲ್ಮಾನ್ ಖಾನ್ ರವರ ಸಿನೆಮಾದಲ್ಲಿ ಸ್ಪೇಷಲ್ ಎಂಟ್ರಿ ಕೊಡಲಿದ್ದಾರೆ. ಇನ್ನೂ ಶಾರುಖ್ ಖಾನ್ ಅಭಿನಯಿಸುತ್ತಿರುವ ಜವಾನ್ ಸಿನೆಮಾದಲ್ಲೂ ಪ್ರಮುಖ ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಇದೀಗ ಸಲ್ಮಾನ್ ಖಾನ್ ರವರ ಮುಂದಿನ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅಪ್ಡೇಟ್ ಒಂದು ಹೊರ ಬಂದಿದೆ.

ತಮಿಳು ಸಿನೆಮಾದ ವೀರಂ ಎಂಬ ಸಿನೆಮಾ ರಿಮೇಕ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಆಗಿ ತೆರೆಗೆ ಬರಲಿದೆ. ಈ ಸಿನೆಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾ ಭಾರಿ ಆಕ್ಷನ್ ದೃಶ್ಯಗಳಿರಲಿದೆ ಎನ್ನಲಾಗಿದೆ. ಇದೇ ವರ್ಷದ ಏಪ್ರಿಲ್  21 ರಂದು ಈ ಸಿನೆಮಾ ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದ ಮೇಲೆ ತೆಲುಗು ಪ್ರೇಕ್ಷಕರಲ್ಲೂ ಸಹ ತುಂಬಾ ಆಸಕ್ತಿ ಮೂಡಿದೆ. ಈ ಸಿನೆಮಾದಲ್ಲಿ ಪೂಜಾ ಹೆಗ್ಡೆ ಹಾಗೂ ವಿಕ್ಟರಿ ವೆಂಕಟೇಶ್ ಸಹ ನಟಿಸುತ್ತಿದ್ದಾರೆ. ಇದೀಗ ಈ ಸಿನೆಮಾದಲ್ಲಿ ಮತ್ತೊರ್ವ ತೆಲುಗು ಸ್ಟಾರ್‍ ನಟ ರಾಮ್ ಚರಣ್ ಸಹ ಕೊಮಿಯೋ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ವಿಚಾರ ಇದೀಗ ಖಚಿತವಾಗಿದ್ದು, ರಾಮ್ ಚರಣ್ ಸಿನೆಮಾದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಸಲ್ಮಾನ್ ಖಾನ್ ರವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ರಾಮ್ ಚರಣ್ ಹಾಡೊಂದರಲ್ಲಿ ಸಲ್ಮಾನ್ ಜೊತೆಗೆ ಕುಣಿಯಲಿದ್ದಾರೆ. ಇನ್ನೂ ಈ ಹಾಡಿನ ಶೂಟಿಂಗ್ ಸಹ ಪೂರ್ಣಗೊಂಡಿದೆ ಎನ್ನಲಾಗಿದೆ. ಇನ್ನೂ ಈ ಹಾಡಿಗೆ ಜಾನಿ ಮಾಸ್ಟರ್‍ ಕೊರಿಯೋಗ್ರಫಿ ಮಾಡಿದ್ದಾರೆ. ಸದ್ಯ ಬಾಲಿವುಡ್ ಅಭಿಮಾನಿಗಳು ರಾಮ್ ಚರಣ್ ರನ್ನು ನೋಡಲು ಕಾದು ಕುಳಿತಿದ್ದಾರೆ.