Film News

ತಾಯಿ ಸರ್ಜರಿಗಾಗಿ ಮನೆ ಮಾರುತ್ತಿದ್ದಾರೆ ಜಬರ್ದಸ್ತ್ ಕಾಮೆಡಿಯನ್ ಶಾಂತಿ ಸ್ವರೂಪ್, ವೈರಲ್ ಆದ ವಿಡಿಯೋ….!

ಕಿರುತೆರೆ, ಸಿನೆಮಾಗಳಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವಂತಹ ಕಲಾವಿದರ ನಿಜ ಜೀವನದಲ್ಲಿ ಹೇಳಿಕೊಳ್ಳಲಾಗದಷ್ಟು ನೋವು ಇರುತ್ತದೆ. ಕೆಲವೊಮ್ಮೆ ತಮ್ಮ ಜೀವನ ನಿರ್ವಹಣೆ ಮಾಡುವುದು ಸಹ ಕಷ್ಟಕರವಾಗಿರುತ್ತದೆ. ಜಬರ್ದಸ್ತ್ ಕಾಮಿಡಿ ಶೋ ಮೂಲಕ ಫೇಂ ಪಡೆದುಕೊಂಡ ಶಾಂತಿ ಸ್ವರೂಪ್ ಸಹ ತುಂಬಾ ಕಷ್ಟದಲ್ಲಿದ್ದಾರೆ. ಆತ ತನ್ನ ತಾಯಿಯ ಸರ್ಜರಿಯಾಗಿ ಮನೆಯನ್ನು ಮಾರುತ್ತಿದ್ದಾರಂತೆ. ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ತೆಲುಗಿನ ಜಬರ್ದಸ್ತ್ ಶೋ ಮೂಲಕ ಅನೇಕ ಕಲಾವಿದರು ಪರಿಚಯವಾಗಿದ್ದಾರೆ. ಮೂಲೆ ಮೂಲೆಗಳಿದ್ದ ಕಲಾವಿದರನ್ನು ಪ್ರಪಂಚಕ್ಕೆ ಪರಿಚಯಿಸಿದೆ. ಹೊಟ್ಟೆ ತುಂಬಾ ನಗಿಸುವಂತಹ ಟ್ಯಾಲೆಂಟ್ ಮೂಲಕ ಎಲ್ಲರನ್ನೂ ರಂಜಿಸುವಂತಹ ಈ ಜಬರ್ದಸ್ತ್ ನ ಕೆಲ ಕಲಾವಿದರ ಮನೆಗಳಲ್ಲಿ ತುಂಬಾನೆ ನೋವುಗಳು ಅಡಗಿವೆ. ಹೊಟ್ಟೆ ತುಂಬಾ ಊಟ ಮಾಡದೇ ಇರುವಂತಹ ಕಡುಬಡತನದಲ್ಲಿದ್ದಂತಹವರನ್ನು ಆರ್ಟಿಸ್ಟ್ ಗಳಾಗಿ ಜಬರ್ದಸ್ತ್ ಈ ಪ್ರಪಂಚಕ್ಕೆ ಪರಿಚಯಿಸಿದೆ ಎಂದು ಹೇಳಬಹುದಾಗಿದೆ. ಈ ಸಾಲಿಗೆ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸುವಂತಹ ಶಾಂತಿ ಸ್ವರೂಪ್ ಸಹ ಒಬ್ಬರಾಗಿದ್ದಾರೆ. ಸುಮಾರು ವರ್ಷಗಳಿಂದ ಜಬರ್ದಸ್ತ್ ಶೋ ನಂಬಿಕೊಂಡ ಶಾಂತಿ ಅಲಿಯಾಸ್ ಶಾಂತಿ ಸ್ವರೂಪ್ ನಿಜ ಜೀವನದಲ್ಲೂ ಸಹ ತುಂಬಾನೆ ನೋವುಗಳಿವೆ.

ತಾನು ಲೇಡಿ ಗೆಟಪ್ ನಲ್ಲಿ ನಟಿಸುವ ಕಾರಣದಿಂದ ಅನೇಕ ವಿಮರ್ಶೆಗಳನ್ನು, ಟ್ರೋಲ್ ಗಳನ್ನು ಕಿವಿಗೆ ಹಾಕಿಕೊಳ್ಳದೇ ತಾನು ಲೇಡಿ ಗೆಟಪ್ ನಲ್ಲಿ ಅನೇಕರನ್ನು ರಂಜಿಸುತ್ತಾ ಬಂದಿದ್ದಾರೆ ಶಾಂತಿ ಸ್ವರೂಪ್. ಇದೀಗ ಶಾಂತಿ ಸ್ವರೂಪ್ ತಮ್ಮ ಮನೆಯನ್ನು ಮಾರಲು ಮುಂದಾಗಿದ್ದಾರೆ. ತಮ್ಮ ತಾಯಿಯ ಸರ್ಜರಿಗಾಗಿ ಆತ ಮನೆಯನ್ನು ಮಾರುತ್ತಿದ್ದಾರೆ. ಇತ್ತೀಚಿಗಷ್ಟೆ ತುಂಬಾ ಇಷ್ಟಪಟ್ಟು ಖರೀದಿ ಮಾಡಿದ ಮನೆಯನ್ನು ಆತ ಮಾರುತ್ತಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿಯ ಆರೋಗ್ಯ ತುಂಬಾ ಹದೆಗಟ್ಟಿದೆ. ಕೂಡಲೇ ಸರ್ಜರಿ ಮಾಡಬೇಕೆಂತೆ. ಸದ್ಯ ನನ್ನ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಮನೆಯನ್ನು ಮಾರುತ್ತಿದ್ದೇನೆ. ಮನೆಯನ್ನು ಮಾರುತ್ತಿರುವ ವಿಚಾರ ಆಕೆಗೆ ಗೊತ್ತಾದರೇ ಆಕೆ ಒಪ್ಪಿಕೊಳ್ಳುವುದೇ ಇಲ್ಲ. ಆದರೆ ನನಗೆ ತಾಯಿಗಿಂತ ಬೇರೆ ಏನು ಮುಖ್ಯವಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಶಾಂತಿ ಸ್ವರೂಪ್ ಈ ವಿಡಿಯೋ ಅನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡ ಅನೇಕರು ಭಾವುಕರಾಗಿದ್ದಾರೆ. ಶಾಂತಿ ಸ್ವರೂಪ್ ಗೆ ಧೈರ್ಯ ಸಹ ತುಂಬುವ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ತಾಯಿಗೋಸ್ಕರ ನೀವು ಮಾಡುತ್ತಿರುವ ತ್ಯಾಗ ತುಂಬಾನೆ ದೊಡ್ಡದು ಎಂದು ಹೇಳುತ್ತಿದ್ದಾರೆ.

Most Popular

To Top