ಅಂತಹ ಬಟ್ಟೆ ಹಾಕಿದ್ರೆ ರೇಪ್ ಮಾಡ್ತಾರಾ? ಮತ್ತೊಂದು ಬಾಂಬ್ ಸಿಡಿಸಿದ ಸ್ಟಾರ್ ಬ್ಯೂಟಿ ಅನಸೂಯ….!

Follow Us :

ತೆಲುಗು ನಟಿ ಅನಸೂಯ ಭಾರದ್ವಾಜ್ ಕಿರುತೆರೆಯಿಂದ ದೂರವಾದ ಬಳಿಕ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಅನಸೂಯ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಆಕೆಯ ಡ್ರೆಸ್ಸಿಂಗ್ ಕುರಿತಂತೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಅದಕ್ಕೆ ಆಕೆ ಸಹ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ.  ಇದೀಗ ಆಕೆ ಆಕೆ ಹುಡುಗಿಯರ ಡ್ರೆಸ್ಸಿಂಗ್ ಬಗ್ಗೆ ಮಾತನಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಅನಸೂಯ ಆತ್ಮವಿಶ್ವಾಸದ ವಿಚಾರದಲ್ಲಿ ರಾಜಿಯಾಗದಂತಹ ಮಹಿಳೆ ಎಂದೇ ಹೇಳಬಹುದು. ಜೊತೆಗೆ ಆಕೆ ಫೆಮಿನಿಸ್ಟ್ ಸಹ ಹೌದು. ಯುವತಿಯರ ಮೇಲಿನ ಸುಳ್ಳು ಆರೋಪಗಳನ್ನು ಆಕೆ ಸಹಿಸುವುದೇ ಇಲ್ಲ. ಅದರಲ್ಲೂ ಆಕೆ ತನ್ನ ಧರಿಸುವಂತಹ ಬಟ್ಟೆಗಳ ಬಗ್ಗೆ ವಿಮರ್ಶೆ ಮಾಡಿದರೇ ಫೈರ್‍ ಆಗುತ್ತಾರೆ. ಜಬರ್ದಸ್ತ್ ಶೋನಲ್ಲೂ ಆಕೆಯ ಬಟ್ಟೆಗಳ ಕುರಿತು ತೀವ್ರ ವಿಮರ್ಶೆಗಳನ್ನು ಎದುರಿಸಿದ್ದರು. ಆದರೂ ಸಹ ಅನಸೂಯ ಕಿವಿಗೊಡದೇ ನಾನು ಎಂತಹ ಬಟ್ಟೆ ಹಾಕಿಕೊಳ್ಳಬೇಕು ಎಂಬುದನ್ನು ನಿರ್ಣಯಿಸಲು ನಿವ್ಯಾರು ಎಂದು ಕೌಂಟರ್‍ ಹಾಕಿದ್ದರು. ನನಗೆ ಅನುಕೂಲವಾಗುವಂತಹ ಬಟ್ಟೆಗಳನ್ನು, ನನಗೆ ಇಷ್ಟವಾದಂತಹ ಬಟ್ಟೆಗಳನ್ನು ಹಾಕಿಕೊಳ್ಳುತ್ತೇನೆ ಎಂದು ಅನೇಕ ಬಾರಿ ಆಕೆ ಫೈರ್‍ ಆಗಿದ್ದರು.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಅನಸೂಯ ಒಂದಲ್ಲ ಒಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಜೊತೆಗೆ ಆಕೆ ಆಗಾಗ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಇದೀಗ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮಾಡ್ರನ್ ಬಟ್ಟೆಗಳು ಹಾಕಿಕೊಂಡರೂ, ಸಂಪ್ರದಾಯಬದ್ದವಾದ ಬಟ್ಟೆಗಳು ಹಾಕಿಕೊಂಡರೂ ಅತ್ಯಾಚಾರಗಳು ನಿಲ್ಲಲ್ಲ. ಡ್ರೆಸ್ಸಿಂಗ್ ವಿಧಾನದಲ್ಲಿ ಬದಲಾವಣೆಯಾಗಬೇಕಿಲ್ಲ, ಬದಲಾವಣೆಯಾಗಬೇಕಿರುವುದು ನಿಮ್ಮ ಆಲೊಚನಾ ವಿಧಾನದಲ್ಲಿ ಎಂಬದ ಆರ್ಥ ಬರುವಂತೆ ಪೋಸ್ಟ್ ಮಾಇಡದ್ದಾರೆ. ಈ ಪೋಸ್ಟ್ ಕೋಟ್ ಮಾಡಿರುವ ಅನಸೂಯ, ನನ್ನ ಸುತ್ತಲೂ ಇರುವಂತ ಮನುಷ್ಯರು ಈ ರೀತಿ ಇರುತ್ತಾರೆ. ನನಗೆ ಹಿಂಸೆ ಕೊಡೊಲ್ಲ, ರೇಗಿಸೊಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಡ್ರೆಸ್ಸಿಂಗ್ ಕಾರಣದಿಂದ ಯುವತಿಯರ ಮೇಲೆ ರೇಪ್ ಆಗಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನೂ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಳೆದ ವರ್ಷ ಆಕೆ ರಂಗಮಾರ್ತಾಂಡ, ಮೈಖಲ್, ಪೆದಕಾಪು-1, ವಿಮಾನಂ ಸಿನೆಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ಆಕೆ ರಜಾಕರ್‍ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.