ತನ್ನ ಖಾಸಗಿ ಭಾಗಗಳ ಬಗ್ಗೆ ಅಸಭ್ಯಕರವಾಗಿ ಕಾಮೆಂಟ್ಸ್, ಸ್ಕ್ರೀನ್ ಶಾಟ್ ಶೇರ್ ಮಾಡಿದ ಬಿಗ್ ಬಾಸ್ ಬ್ಯೂಟಿ ಶ್ಬೇತಾ….!

Follow Us :

ಕಿರುತೆರೆ ನಟಿ ಶ್ವೇತಾ ವರ್ಮಾ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಅದರಲ್ಲೂ ಏನಿದ್ದರೂ ಆಕೆ ನೇರವಾಗಿಯೇ ಮಾತನಾಡುವ ವ್ಯಕ್ತತ್ವ ಹೊಂದಿದ್ದಾರೆ. ಜೊತೆಗೆ ಆಕೆ ಬಿಗ್ ಬಾಸ್ ತೆಲುಗು ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಆಕೆಯ ಕ್ರೇಜ್ ಮತಷ್ಟು ಹೆಚ್ಚಾಯ್ತು ಎಂದೇ ಹೇಳಬಹುದಾಗಿದೆ. ನೇರವಾಗಿ ಮಾತನಾಡುವ ಮೂಲಕ ಬಿಗ್ ಬಾಸ್ ನಲ್ಲಿ ಭಾರಿ ಸದ್ದು ಮಾಡಿದ್ದರು. ಇದೀಗ ಆಕೆಯ ಖಾಸಗಿ ಭಾಗಗಳ ಬಗ್ಗೆ ಅಸಭ್ಯಕರವಾಗಿ ಕಾಮೆಂಟ್ ಮಾಡಿದ್ದು, ಈ ಸಂಬಂಧ ಕೆಲವೊಂದು ಸ್ಕ್ರೀನ್ ಶಾಟ್ ಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಶ್ವೇತಾ ವರ್ಮಾ ತೆಲುಗಿನ ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಭಾಗಿಯಾದ ಬಳಿಕ ಭಾರಿ ಫೇಮಸ್ ಆದರು. ಕಿರುತೆರೆಯ ಶೋಗಳ ಜೊತೆಗೆ ಆಕೆ ಕೆಲವೊಂದು ಸಿನೆಮಾಗಳಲ್ಲೂ ನಟಿಸಿದ್ದಾರೆ. ಶ್ವೇತಾ ವರ್ಮಾ MAD-ಮ್ಯಾರೇಜ್ ಆಫ್ಟರ್‍ ಡಿವೋರ್ಸ್ ಎಂಬ ಬೋಲ್ಸ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ಕೆಲವೊಂದು ಲಿಪ್ ಲಾಕ್ ದೃಶ್ಯಗಳು ಹಾಗೂ ಬೋಲ್ಡ್ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಬಿಗ್ ಬಾಸ್ ಸಮಯದಲ್ಲಿ ಆಕೆ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಸದ್ಯ ಆಕೆ ಕೊಂಚ ದಪ್ಪ ಆಗಿ ಕಾಣಿಸಿಕೊಂಡಿದ್ದರು. ಇನ್ನೂ ಶ್ವೇತಾ ವರ್ಮಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ನಟಿ ಶ್ವೇತಾ ವರ್ಮಾ ಗೆ ಸೋಷಿಯಲ್ ಮಿಡಿಯಾದಲ್ಲಿ ಕೆಟ್ಟ ಅನುಭವವೊಂದಾಗಿದೆ. ಓರ್ವ ನೆಟ್ಟಿಗ ಆಕೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಆ ನೆಟ್ಟಿಗ ಶ್ವೇತಾ ವರ್ಮಾಗೆ ವೈಯುಕ್ತಿಕವಾಗಿ ಅಸಭ್ಯಕರವಾದ ಮೆಸೇಜ್ ಗಳನ್ನು ಕಳುಹಿಸಿದ್ದನಂತೆ. ಈ ವಿಚಾರವನ್ನು ಶ್ವೇತಾ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದರಂತೆ. ಆಕೆಯ ಖಾಸಗಿ ಭಾಗಗಳ ಬಗ್ಗೆ ಆತ ಅಸಭ್ಯವಾಗಿ ಕಾಮೆಂಟ್ ಮಾಡಿದ್ದನಂತೆ. ಈ ಸಂಬಂಧ ಸ್ಕ್ರೀನ್ ಶಾಟ್ ಗಳನ್ನು ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ನೋವಿನಿಂದ ಆಕೆ ಈ ಫೋಸ್ಟ್ ಮಾಡಿ ಕಾಮೆಂಟ್ಸ್ ಕೊಟ್ಟಿದ್ದಾರೆ. ಕೆಲವರು ಈ ರೀತಿ ಏಕೆ ವರ್ತನೆ ಮಾಡುತ್ತಾರೋ ಅರ್ಥವಾಗೊಲ್ಲ. ನನಗೆ ಕಾಮೆಂಟ್ ಮಾಡಿದಂತೆ ಆತನ ತಾಯಿಯ ಬಗ್ಗೆ ಕಾಮೆಂಟ್ ಮಾಡಿದ್ರೆ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದರು.

ಇನ್ನೂ ತನ್ನ ಪ್ರಭಾವ ಬಳಸಿ ಆ ವ್ಯಕ್ತಿಯ ಅಡ್ರೆಸ್ ಸಹ ಪತ್ತೆ ಹಚ್ಚಿದ್ದಾಳಂತೆ. ಈ ಸಂಘಟನೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಶ್ವೇತಾ ವರ್ಮಾ ಆತನ ಅಡ್ರೆಸ್ ಪೋಸ್ಟ್ ಮಾಡಿಲ್ಲ. ಆತನ ಅಡ್ರೆಸ್ ನನ್ನ ಬಳಿಯಿದೆ. ಆದರೆ ನಾನು ಅದನ್ನು ಪೋಸ್ಟ್ ಮಾಡೊಲ್ಲ. ಮನುಷ್ಯರಾಗಿ ನಾನು ಹೇಗೆ ವರ್ತಿಸಬೇಕು ಎಂಬುದು ನನಗೆ ಗೊತ್ತು. ಆತ ಇದನ್ನು ಒಂದು ಗುಣಪಾಠದಂತೆ ತೆಗೆದುಕೊಳ್ಳಬೇಕೆಂದು ಆತನ ಸಂದೇಶಗಳ ಸ್ಕ್ರೀನ್ ಶಾಟ್ಸ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.