ಕೈಯಲ್ಲಿ ಹುಕ್ಕಾ ಹಿಡಿದು ಮಾದಕ ನೋಟ ಬೀರಿದ ನಟಿ, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಲಕ್ಷ್ಮೀಬಾರಮ್ಮ ಸೀರಿಯಲ್ ನಟಿ…!

Follow Us :

ಸೋಷಿಯಲ್ ಮಿಡಿಯಾವನ್ನು ಸ್ಟಾರ್‍ ನಟಿಯರಿಂದ ಸೀರಿಯಲ್ ನಟಿಯರವರೆಗೂ ಬಳಕೆ ಮಾಡುತ್ತಿರುತ್ತಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಕೆಲವರಂತೂ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತಾರೆ. ಇದೀಗ ಕನ್ನಡದ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಅಹಂಕಾರಿ ವಿಧಿ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಹೀರೆಮಠ್ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಸೀರಿಯಲ್ ಗಳಲ್ಲಿ ಲಕ್ಷ್ಮೀಬಾರಮ್ಮ ಸೀರಿಯಲ್ ಸಹ ಒಂದು. ಈ ಸೀರಿಯಲ್ ಅನೇಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದು ಹೇಳಬಹುದು. ಅಮ್ಮನ ಪ್ರೀತಿ ಪಡೆಯದ ಹಠಮಾರಿ ಹುಡಿಯಾಗಿ, ತಂದೆಯನ್ನು ಕಂಡೆ ಉರಿದು ಬೀಳುವ ಹುಡುಗಿಯಾಗಿ, ಬಡವರನ್ನು ಕೀಳಾಗಿ ಕಾಣುವಂತಹ ವಿಧಿ ಎಂಬ ಪಾತ್ರದಲ್ಲಿ ಲಾವಣ್ಯ ಹೀರೇಮಠ್ ತುಂಬಾ ಅದ್ಬುತವಾಗಿ ನಟಿಸುತ್ತಿದ್ದಾರೆ. ಸೀರಿಯಲ್ ಗಳ ಜೊತೆಗೆ ಆಕೆ  ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ನೂ ನಟಿ ಲಾವಣ್ಯ ಹೀರೇಮಠ್ ಮೂಲತಃ ದಂತವೈದ್ಯೆಯಾಗಿದ್ದಾರೆ. ಆದರೆ ನಟಿಯಾಗಿಯೂ ಸೀರಿಯಲ್ ಗಳಲ್ಲಿ ನಟಿಸುತ್ತಾ ಫೇಂ ಪಡೆದುಕೊಂಡಿದ್ದಾರೆ. ಲಕ್ಷ್ಮೀಬಾರಮ್ಮ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದಾರೆ. ಈ ಸೀರಿಯಲ್ ಗಳಲ್ಲಿ ಆಕೆ ತುಂಬಾನೆ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದೇ ಮಾದರಿ ನೈಜ ಜೀವನದಲ್ಲೂ ಸಹ ಬೋಲ್ಡ್ ಅಂಡ್ ಸ್ಟೈಲಿಷ್ ಆಗಿಯೇ ಇರುತ್ತಾರೆ.  ಈ ಹಾದಿಯಲ್ಲೇ ಆಕೆ ಹೊಸ ಪೊಟೋಶೂಟ್ಸ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಸೀರೆಯನ್ನು ಧರಿಸಿ, ಸೀರೆಯ ಸೆರಗು ಜಾರಿಸಿ, ಕೈಯಲ್ಲಿ ಹುಕ್ಕಾ ಹಿಡಿದು ಪೋಸ್ ಕೊಟ್ಟಿದ್ದಾರೆ. ಜೊತೆಗೆ ಆಕೆ ಮಾದಕ ನೋಟ ಬೀರುತ್ತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಕೆಂಪು ಬಣ್ಣದ ಡಾರ್ಕ್ ಸೀರೆಯ, ಮೂಗೂತಿ, ಆಂಟಿಕ್ ಜ್ಯುವೆಲ್ಲರಿಗಳನ್ನು ಧರಿಸಿ, ಆಂಟಿಕ್ ಜಾಗದಲ್ಲಿ ಪೊಟೊಶೂಟ್ಸ್ ಮಾಡಿಸಿದ್ದಾರೆ. ಲಾವಣ್ಯ ಈ ಹೊಸ ಲುಕ್ಸ್ ಕಂಡ ಅಭಿಮಾನಿಗಳು ಹಾಗೂ ಕೆಲ ಕಿರುತೆರೆ ಕಲಾವಿದರೂ ಸಹ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಸ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.