Film News

ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ ಸ್ಟಾರ್ ನಟಿ ಸಮಂತಾ, ಯಾವ ಸಿನೆಮಾದಲ್ಲಿ ಗೊತ್ತಾ?

ಆರೋಗ್ಯದ ಕಾರಣದಿಂದ ಸ್ಟಾರ್‍ ನಟಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಆಕೆ ಸಂಪೂರ್ಣವಾಗಿ ಗುಣಮುಖರಾಗಿದ್ದು, ಶೀಘ್ರದಲ್ಲೇ ಮತ್ತೆ ಸಿನೆಮಾಗಳಲ್ಲಿ ನಟಿಸುವುದಾಗಿ ಈ ಹಿಂದೆ ಆಕೆಯೇ ಹೇಳಿದ್ದರು. ಇದೀಗ ಆಕೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಸಮಂತಾ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಬರಲಿರುವ ಸಿನೆಮಾ ಯಾವುದು, ಯಾರ ನಿರ್ದೇಶನದಲ್ಲಿ ಎಂಬ ವಿಚಾರಕ್ಕೆ ಬಂದರೇ,

ಸೌತ್ ಸ್ಟಾರ್‍ ನಟಿ ವಿಚ್ಚೇದನದ ಬಳಿಕ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ವಿಚ್ಚೇದನದ ಕಾರಣದಿಂದ ಕೆಲವು ತಿಂಗಳುಗಳ ಕಾಲ ಆಕೆ ಡಿಪ್ರೆಷನ್ ಗೆ ಹೋಗಿದ್ದರು. ಬಳಿಕ ಆಕೆ ಮಯೋಸೈಟೀಸ್ ಎಂಬ ಮಾರಕ ವ್ಯಾದಿಗೆ ಗುರಿಯಾಗಿದ್ದರು. ಈ ವ್ಯಾಧಿಯ ಕಾರಣದಿಂದ ಆಕೆ ತುಂಬಾನೆ ಸಮಸ್ಯೆಯನ್ನು ಎದುರಿಸಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ಒಂದು ವರ್ಷ ಬ್ರೇಕ್ ಸಹ ಪಡೆದುಕೊಂಡಿದ್ದರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಆಕೆಯ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಅಪ್ಡೇಟ್ ಸಹ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆಕೆಯ ಮುಂದಿನ ಸಿನೆಮಾಗಳ ಮೇಲೆ ತುಂಬಾನೆ ಹೈಪ್ ಕ್ರಿಯೇಟ್ ಆಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಟಾಲಿವುಡ್ ಅಂಗಳದಲ್ಲಿ ಸುದ್ದಿಯೊಂದು ಕೇಳಿಬರುತ್ತಿದೆ. ಅದರಂತೆ ನಟಿ ಸಮಂತಾ ಮತ್ತೊಮ್ಮೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಜೊತೆಗೆ ನಟಿಸಲಿದ್ದಾರಂತೆ. ಈಗಾಗಲೇ ಎರಡು ಭಾರಿ ನಟಿ ಸಮಂತಾ ಹಾಗೂ ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿದ್ದಾರೆ. ಸನ್ ಆಫ್ ಸತ್ಯಮೂರ್ತಿ ಸಿನೆಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ನಟಿಸಿದ್ದರೇ, ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾವ ಎಂಬ ಸ್ಪೇಷಲ್ ಸಾಂಗ್ ನಲ್ಲಿ ಅಲ್ಲು ಅರ್ಜುನ್ ಜೊತೆಗೆ ಭರ್ಜರಿಯಾಗಿ ಕುಣಿದಿದ್ದರು. ಈ ಸಿನೆಮಾವನ್ನು ಕಾಲಿವುಡ್ ನ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಈ ಸಿನೆಮಾ ಮೂಡಿಬರಲಿದೆಯಂತೆ. ಅಟ್ಲಿ ಹಾಗೂ ಅಲ್ಲು ಅರ್ಜುನ್ ರವರ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ AAA ಪ್ರಾಜೆಕ್ಟ್ ನಲ್ಲಿ ಸಮಂತಾ ನಾಯಕಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಕುರಿತು ಇನ್ನೂ ಖಚಿತ ಮಾಹಿತಿ ಲಭ್ಯವಿಲ್ಲವಾದರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ಈ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Most Popular

To Top