Film News

ಮಧು ಮಗಳಂತೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಅನುಪಮಾ, ಹೀಗೆ ನೋಡಿ ಎಷ್ಟು ದಿನಗಳಾಯ್ತೋ ಎಂದ ಫ್ಯಾನ್ಸ್…..!

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಳ್ಳುತ್ತಿದ್ದಾರೆ. ಕೊನೆಯದಾಗಿ ಆಕೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿ ತುಂಬಾನೆ ಸುದ್ದಿಯಾಗಿದ್ದರು. ಈ ಕಾರಣದಿಂದ ಆಕೆ ಟ್ರೋಲ್ ಸಹ ಆಗಿದ್ದರು. ಮೊದಲಿಗೆ ಪದ್ದತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಇದೀಗ ಬೋಲ್ಡ್ ಅವತಾರ ತಾಳಿದ್ದಾರೆ. ಇದೀಗ ಆಕೆ ಸೀರೆಯಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈ ರೀತಿ ನೋಡಿ ಎಷ್ಟು ದಿನಗಳಾಯ್ತೋ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಅವತಾರ ತಾಳಿದ್ದ ಅನುಪಮಾ ಇದೀಗ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಅನುಪಮಾ ಕೆರಿಯರ್‍ ಆರಂಭದಿಂದಲೂ ಸಿನೆಮಾಗಳಲ್ಲಿ ಓವರ್‍ ಆಗಿ ಗ್ಲಾಮರ್‍ ಶೋ ಮಾಡದೇ ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಆಕೆ ಸಿನೆಮಾಗಳಲ್ಲಿ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ದಿನಗಳಿಂದ ಅನುಪಮಾ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸುಮಾರು ದಿನಗಳ ಬಳಿಕ ಆಕೆ ಸಂಪ್ರದಾಯಬದ್ದವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಕಲರ್‍ ಸೀರೆಯಲ್ಲಿ ಮದುಮಗಳಂತೆ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಪದ್ದತಿಯಾಗಿ, ಹೋಮ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದೀರಾ ಎಂದು, ನಿಮ್ಮನ್ನು ಈ ರೀತಿ ನೋಡಿ ಸುಮಾರು ದಿನಗಳಾಯ್ತು ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಅನುಪಮಾ ಪರಮೇಶ್ವರನ್ ಕೊನೆಯದಾಗಿ ಟಿಲ್ಲು ಸ್ಕ್ವೇರ್‍ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದಾರೆ. ಸುಮಾರು ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಆಕೆ ಈ ರೀತಿಯಲ್ಲಿ ನಟಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ಲಿಲ್ಲಿ ಪಾತ್ರ ಪೋಷಣೆ ಮಾಡಿದ್ದಾರೆ. ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡಿದೆ ಎನ್ನಬಹುದಾಗಿದೆ.

Most Popular

To Top