Film News

ದೊಡ್ಮನೆ ಯುವರಾಜಕುಮಾರ್ ನಟನೆಯನ್ನು ಕೊಂಡಾಡಿದ ತೆಲುಗು ಸ್ಟಾರ್ ನಟ ನಾಗಾರ್ಜುನ್, ವೈರಲ್ ಆದ ವಿಡಿಯೋ….!

ಸ್ಯಾಂಡಲ್ ವುಡ್ ನ ದೊಡ್ಮನೆಯ ಕುಡಿ ಯುವರಾಜಕುಮಾರ್‍ ಯುವ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾ ತೆರೆಕಂಡಿದ್ದು, ಭಾರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲದೇ ಈ ಸಿನೆಮಾ ನೋಡಿದ ಪಕ್ಕದ ರಾಜ್ಯಗಳಲ್ಲೂ ಒಳ್ಳೆಯ ರೆಸ್ಪಾನ್ಸ್ ದೊರೆಯುತ್ತಿದೆ. ಇದೀಗ ಟಾಲಿವುಡ್ ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ್ ರವರು ಯುವ ಸಿನೆಮಾ ನೋಡಿ ಮನಸಾರೆ ಹೊಗಳಿದ್ದಾರೆ. ಈ ಸಂಬಂಧ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವರನಟ ರಾಜ್ ಕುಮಾರ್‍ ರವರ ಕುಡಿ ಮೊದಲ ಸಿನೆಮಾದ ಮೂಲಕವೇ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಮಾ.29 ರಂದು ಈ ಸಿನೆಮಾ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ದೊಡ್ಮನೆ ಅಭಿಮಾನಿಗಳು ಕರ್ನಾಟಕದ ಮೂಲೆ ಮೂಲೆಯಲ್ಲಿ ಯುವ ಸಿನೆಮಾ ಕಟೌಟ್ ಗಳನ್ನು ನಿರ್ಮಾಣ ಮಾಡಿ ಸಂಭ್ರಮಿಸಿದ್ದರು.  ಕಟೌಟ್ ಗಳಿಗೆ ಪೂಜೆ ಹಾಲಿನ ಅಭಿಷೇಕ ಸಹ ಮಾಡಲಾಗಿತ್ತು. ಯುವ ಸಿನೆಮಾ ಬಿಡುಗಡೆಯಾದ ದಿನವೇ ಒಳ್ಳೆಯ ಸ್ಪಂಧನೆ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಬಹುತೇಕ ಸಿನೆಮಾ ಮಂದಿರಗಳಲ್ಲಿ ಹೌಸ್ ಪುಲ್ ಬೋರ್ಡ್ ಸಹ ಹಾಕಲಾಗಿತ್ತು. ಇದೀಗ ಯುವ ಸಿನೆಮಾದಲ್ಲಿ ಯುವರಾಜಕುಮಾರ್‍ ಅಭಿನಯಕ್ಕೆ ಪಕ್ಕದ ರಾಜ್ಯಗಳಲ್ಲೂ ಪಾಸಿಟೀವ್ ಟಾಕ್ ಬರುತ್ತಿದೆ. ಯುವ ನಟನೆಯನ್ನು ಅಕ್ಕಿನೇನಿ ನಾಗಾರ್ಜುನ್ ರವರೂ ಸಹ ಗುಣಗಾನ ಮಾಡಿದ್ದಾರೆ.

ದಿವಂಗತ ಡಾ.ರಾಜ್ ಕುಮಾರ್‍ ರವರ ಕುಟುಂಬದ ಬಗ್ಗೆ ತೆಲುಗು ನಾಡಲ್ಲೂ ಸಹ ಅಪಾರ ಗೌರವ ಹೊಂದಿದ್ದಾರೆ. ಅನೇಕ ಸ್ಟಾರ್‍ ಗಳು ಡಾ.ರಾಜ್ ಕುಮಾರ್‍ ಕುಟುಂಬದೊಂದಿಗೆ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದಾರೆ ಎನ್ನಬಹುದಾಗಿದೆ. ಯುವ ಸಿನೆಮಾದ ಹವಾ ಹೈದರಾಬಾದ್ ನಲ್ಲಿ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ ಅಕ್ಕಿನೇನಿ ನಾಗಾರ್ಜುನ್ ರವರು. ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಯುವ ಸಿನೆಮಾವನ್ನು ನಾಗಾರ್ಜುನ್ ರವರು ಕೊಂಡಾಡಿದ್ದಾರೆ. ಯುವ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಓಪೆನಿಂಗ್ ಸಹ ತುಂಬಾ ವಿಶೇಷವಾಗಿದೆ. ಹೊಸ ನಾಯಕನಿಗೆ ಈ ರೀತಿಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿರುವುದು ತುಂಬಾ ವಿಶೇಷ ಎಂದು ನಾಗಾರ್ಜುನ್ ರವರು ಹೇಳಿದ್ದಾರೆ.

ಕನ್ನಡದ ಯಂಗ್ ನಟ ಯುವರಾಜಕುಮಾರ್‍ ಅಭಿನಯದ ಯುವ ಸಿನೆಮಾ ತುಂಬಾ ಚೆನ್ನಾಗಿದೆ. ನಿಮಗೆ ಒಳ್ಳೆಯದಾಗಲಿ, ನಿಮ್ಮ ಮುಂದಿನ ಪ್ರಾಜೆಕ್ಟ್ ಗಳಿಗೆ ಗುಡ್ ಲಕ್ ಎಂದು ನಾಗಾರ್ಜುನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡದ ನಟನ ಬಗ್ಗೆ ಓರ್ವ ಸ್ಟಾರ್‍ ನಟ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕನ್ನಡಾಭಿಮಾನಿಗಳಿಗೆ ಖುಷಿಯ ವಿಚಾರ ಎನ್ನಬಹುದು.

Most Popular

To Top