Film News

ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ ಹಾಟ್ ಬ್ಯೂಟಿ ಶೋಭಿತಾ, ಆಕೆಯ ಸೌಂದರ್ಯಕ್ಕೆ ಆ ಮೂರು ಪದಾರ್ಥಗಳ ಕಾರಣವಂತೆ….!

ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೆ ಹೆಚ್ಚು ಸುದ್ದಿಯಾದ ನಟಿಯರ ಸಾಲಿಗೆ ತೆಲುಗು ಹುಡುಗಿ ಶೋಭಿತಾ ಧೂಳಿಪಾಲ ಸಹ ಸೇರುತ್ತಾರೆ. ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಾದರು. ಗೂಡಾಚಾರಿ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶೋಭಿತಾ ಸದ್ಯ ಬಾಲಿವುಡ್ ನಲ್ಲಿ ಕ್ರೇಜ್ ಹೊಂದಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಜೊತೆಗೆ ಹಿಂದಿ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಶೋಭಿತಾ ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.

ನಟಿ ಶೋಭಿತಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಂಕರ್‍ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತನ್ನ ಬ್ಯೂಟಿ ಸೀಕ್ರೇಟ್ ರಿವೀಲ್ ಮಾಡಿದ್ದಾರೆ. ಆಂಕರ್‍ ನಿಮ್ಮ ಸೌಂದರ್ಯ ಗುಟ್ಟೇನು ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ ಶೋಭಿತಾ ಉತ್ತರಿಸಿದ್ದಾರೆ. ತನ್ನ ಸೌಂದರ್ಯ ಹಿಂದೆ ಮನೆಯಲ್ಲೇ ಸಿಗುವಂತಹ ಪದಾರ್ಥಗಳು ಕಾರಣ ಎಂದಿದ್ದಾರೆ. ಈ ಟಿಪ್ಸ್ ಫಾಲೋ ಮಾಡಿದರೇ ಹೊಳೆಯುವ ತ್ವಚೆ ಪಡೆಯಲು ಸಾಧ್ಯ. ಶೋಭಿತಾ ತನ್ನ ತಾಯಿಯ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಹೊಳೆಯುವಂತಹ ಸೌಂದರ್ಯವನ್ನು ಪಡೆದುಕೊಂಡಿದ್ದಾರಂತೆ. ಪ್ರತಿ ನಿತ್ಯ ಶೋಭಿತಾ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿಕೊಂಡು ಹಣ್ಣುಗಳ ಹಿಂಡಿಯಿಂದ ಮುಖಕ್ಕೆ ಮಸಾಜ್ ಮಾಡುತ್ತಾರಂತೆ. ಜೊತೆಗೆ ಸ್ವಚ್ಚವಾದ ಕೊಬ್ಬರಿ ಎಣ್ಣೆಯನ್ನು ತುಟಿಗಳಿಗೆ ಸವರುತ್ತಾರಂತೆ. ಈ ಟಿಪ್ಸ್ ಚಾಚುತಪ್ಪದೇ ಕ್ರಮಬದ್ದವಾಗಿ ಬಳಸುತ್ತಾರಂತೆ ಶೋಭಿತಾ. ನ್ಯಾಚುರಲ್ ಆಗಿರುವ ಪದಾರ್ಥಗಳಿಂದಲೇ ಶೋಭಿತಾ ಹೊಳೆಯುವ ಚರ್ಮ ಸೌಂಧರ್ಯವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಜೋರಾಗಿಯೇ ಕೇಳಿಬರುತ್ತಿದೆ. ಸದಾ ಅವರಿಬ್ಬರೂ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲೇ ಇರುತ್ತಾರೆ. ಇನ್ನೂ ಅವರಿಬ್ಬರೂ ತುಂಬಾ ಕ್ಲೋಜ್ ಆಗಿದ್ದು, ಆಗಾಗ ಪ್ರವಾಸ, ವೆಕೇಷನ್ ಗಳಿಗೆ ಹೋಗುತ್ತಿರುತ್ತಾರೆ ಎಂಬ ಮಾತುಗಳೂ ಸಹ ಕೇಳಿಬಂದಿದೆ. ಇನ್ನೂ ಇದೇ ವಿಚಾರವಾಗಿ ಶೋಭಿತಾ ಸಹ ಇದೆಲ್ಲಾ ರೂಮರ್‍ ಗಳು ಮಾತ್ರ ಎಂದು ಹೇಳಿದ್ದರು. ಆದರೆ ಇತ್ತಿಚಿಗೆ ಶೋಭಿತಾ ಹಾಗೂ ನಾಗಚೈತನ್ಯ ಜೊತೆಗಿನ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಈ ಪೊಟೋ ನೋಡಿದರೇ ಅವರು ವಿದೇಶವೊಂದರಲ್ಲಿ ವೆಕೇಷನ್ ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಪೊಟೋ ಮಾರ್ಪ್ ಮಾಡಲಾಗಿದೆ ಎಂಬ ಮಾತುಗಳೂ ಸಹ ಕೇಳಿಬಂದಿವೆ.

ಇನ್ನೂ ನಟಿ ಶೋಭಿತಾ ಅಡಿವಿ ಶೇಷ್ ಜೊತೆಗೆ ಗೂಡಾಚಾರಿ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಬಳಿಕ ಆಕೆ ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲೂ ನಟಿಸಿದ್ದು, ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಇದೀಗ ಈ ಸಿನೆಮಾದ ಸೀಕ್ವೆಲ್ ಪೊನ್ನಿಯನ್ ಸೆಲ್ವನ್ 2 ನಲ್ಲೂ ನಟಿಸುತ್ತಿದ್ದಾರೆ. ಅಷ್ಟೇಅಲ್ಲದೇ ಶೋಭಿತಾ ಹಾಲಿವುಡ್ ನಲ್ಲೂ ಸಹ ಎಂಟ್ರಿ ಕೊಟ್ಟಿದ್ದಾರೆ. ಮಂಕಿ ಮ್ಯಾನ್ ಎಂಬ ಸಿನೆಮಾದಲ್ಲಿ ಶೋಭಿತಾ ನಟಿಸಿದ್ದಾರೆ. ಈ ಸಿನೆಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.

Most Popular

To Top