Film News

ರಿಷಭ್ ಶೆಟ್ಟಿಯವರ ಕಾಂತಾರ ಪ್ರೀಕ್ವೆಲ್ ನಲ್ಲಿ ನಟಿಸಲಿದ್ದಾರಾ ತಲೈವಾ? ಕಾಂತಾರ ಪ್ರೀಕ್ವೆಲ್ ಬಗ್ಗೆ ಹೊಸ ಚರ್ಚೆ?

ಕನ್ನಡದ ಸಿನೆಮಾ ಕಾಂತಾರ ಬಿಡುಗಡೆಯಾದ ಕಲವೇ ದಿನಗಳಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಇಡೀ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಸಹ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಇನ್ನೂ ಸಿನಿರಂಗದ ಅನೇಕ ಸ್ಟಾರ್‍ ಗಳು ಈ ಸಿನೆಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಹಾದಿಯಲ್ಲೇ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಕಾಂತಾರ ಸಿನೆಮಾ ನೋಡಿ ಫೀದಾ ಆಗಿದ್ದು, ರಿಷಭ್ ರನ್ನು ಮನೆಗೆ ಕರೆಸಿಕೊಂಡು ಮನಸಾರೆ ಪ್ರಶಂಸೆ ಮಾಡಿದ್ದರು. ಇನ್ನೂ ಇತ್ತೀಚಿಗಷ್ಟೆ ಈ ಸಿನೆಮಾ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದ್ದು, ಕಾಂತಾರ ಸಿನೆಮಾದ ಪ್ರೀಕ್ವೆಲ್ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.

ಭಾರತೀಯ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲೇ ಮೋಡಿ ಮಾಡಿದಂತಹ ಸಿನೆಮಾಗಳ ಸಾಲಿಗೆ ಕಾಂತಾರ ಸೇರುತ್ತದೆ. ವಿವಿಧ ಭಾಷೆಗಳ ಕಲಾವಿದರೂ ಸಹ ಈ ಸಿನೆಮಾ ನೋಡಿ ತುಂಬಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಯಾವುದೇ ಆಡಂಬರವಿಲ್ಲದೆ ಬಿಡುಗಡೆಯಾದ ಕಾಂತಾರ ಸಿನೆಮಾ ಕಡಿಮೆ ಸಮಯದಲ್ಲೇ ವಿವಿಧ ಭಾಷೆಗಳಿಗೆ ಡಬ್ ಆಗಿ ಅಲ್ಲೂ ಸಹ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಇನ್ನೂ ಈ ಸಿನೆಮಾದ ಸೀಕ್ವೆಲ್ ಬಗ್ಗೆ ಅನೇಕ ಸುದ್ದಿಗಳು ಕೇಳಿಬಂದವು. ಆದರೆ ರಿಷಭ್ ಶೆಟ್ಟಿ ಇತ್ತಿಚಿಗಷ್ಟೆ ಈ ಸಿನೆಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಬರಲಿದೆ ಎಂದು ಎಲ್ಲರಲ್ಲೂ ಮತಷ್ಟು ಕುತೂಹಲ ಮೂಡಿಸಿದ್ದರು. ಇನ್ನೂ ರಿಷಭ್ ಶೆಟ್ಟಿ ತಂಡ ಸಿನೆಮಾದ ಶೂಟಿಂಗ್ ಗಾಗಿ ಲೊಕೇಷನ್ ಹುಡುಕುವ ಜೊತೆಗೆ ಸ್ಕ್ರಿಪ್ಟ್ ತಯಾರಿಯಲ್ಲೂ ಸಹ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದರ ಬಗ್ಗೆ ಚರ್ಚೆಗಳೂ ಸಹ ಶುರುವಾಗಿದೆ. ಈ ಹಾದಿಯಲ್ಲೇ ಕ್ರೇಜಿ ರೂಮರ್‍ ಒಂದು ಕೇಳಿಬರುತ್ತಿದೆ. ಅದರಂತೆ ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್  ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇನ್ನೂ ಸೂಪರ್‍ ಸ್ಟಾರ್‍ ರಜನಿಕಾಂತ್ ಕಾಂತಾರ ಸಿನೆಮಾ ವೀಕ್ಷಣೆ ಮಾಡಿ ಮನಸಾರೆ ಹೊಗಳಿದ್ದರು. ಅಷ್ಟೇಅಲ್ಲದೇ ರಿಷಭ್ ಶೆಟ್ಟಿಯವರನ್ನು ಮನೆಗೆ ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆಗಳನ್ನು ಸಹ ನಡೆಸಿದರು. ಇನ್ನೂ ಇದೇ ಕಾರಣದಿಂದ ರಜನಿಕಾಂತ್ ರವರೊಂದಿಗೆ ಕಾಂತಾರ ಸೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ. ರಜನಿಕಾಂತ್ ರವರು ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಕೇಳಿಬರುತ್ತಿವೆ. ಅಷ್ಟೇಅಲ್ಲದೇ ರಿಷಭ್ ಶೆಟ್ಟಿ ಪ್ರತಿಯೊಂದು ಸಿನೆಮಾದಲ್ಲೂ ಏನಾದರೂ ಒಂದು ಹೊಸದನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ರಿಷಭ್ ಹಾಗೂ ರಜನಿಕಾಂತ್ ರವರ ನಡುವೆ ಕಾಂತಾರ ಪ್ರೀಕ್ವೆಲ್ ಬಗ್ಗೆ ಚರ್ಚೆ ನಡೆದಿದೆ ಎಂಬ ಅಂತೆ ಕಂತೆಗಳು ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿವೆ.

ಇನ್ನೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ ಕಾಂತಾರ ಸಿನೆಮಾದ ಪ್ರೀಕ್ವೆಲ್ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ. ಸಿನೆಮಾದ ಶೂಟಿಂಗ್ ಪೂರ್ಣಗೊಳ್ಳುವುದಕ್ಕೂ ಮುಂಚೆಯೇ ಭಾರಿ ನಿರೀಕ್ಷೆಯನ್ನು ಹುಟ್ಟಿಸಿದೆ. ಇನ್ನೂ ಈ ವರ್ಷದ ಮಳೆಗಾಲದ ಸಮಯದಲ್ಲೇ ಸಿನೆಮಾದ ಶೂಟಿಂಗ್ ಸಹ ಆರಂಭವಾಗಬಹುದು ಎನ್ನಲಾಗುತ್ತಿದೆ.

Most Popular

To Top