ಹನಿರೋಜ್ ನೆಕ್ಸ್ಟ್ ಮೂವಿ ಫಸ್ಟ್ ಲುಕ್ ತುಂಬಾನೆ ಖರಾಬು, ಸಿನೆಮಾ ಬ್ಯಾನ್ ಮಾಡಬೇಕೆಂಬ ಡಿಮ್ಯಾಂಡ್…..!

Follow Us :

ಮಾಲಿವುಡ್ ಹಾಟ್ ಬ್ಯೂಟಿ ಹನಿ ರೋಜ್ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಹನಿ ರೋಜ್ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಭಾರಿ ಮಟ್ಟದಲ್ಲಿ ಬೆಳೆಯಿತು. ಇದೀಗ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆಯ ಹೊಸ ಸಿನೆಮಾದ ಪೋಸ್ಟರ್‍ ಸಖತ್ ಖರಾಬಾಗಿದ್ದು, ಸಿನೆಮಾ ಬ್ಯಾನ್ ಮಾಡಬೇಕೆಂಬ ಡಿಮ್ಯಾಂಡ್ ಜೋರಾಗಿದೆ.

ತೆಲುಗು ಸ್ಟಾರ ನಟ ನಂದಮೂರಿ ಬಾಲಕೃಷ್ಣ ರವರ ಕೆರಿಯರ್‍ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ವೀರಾಸಿಂಹರೆಡ್ಡಿ ಸಿನೆಮಾದಲ್ಲಿ  ಬಾಲಯ್ಯ ಡ್ಯೂಯಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಶ್ರುತಿ ಹಾಸನ್ ಹಾಗೂ ಹನಿ ರೋಜ್ ನಟಿಸಿದ್ದರು. ಆದರೆ ಶ್ರುತಿ ಹಾಸನ್ ಗಿಂತ ಹನಿ ರೋಜ್ ಈ ಸಿನೆಮಾದಲ್ಲಿ ಒಳ್ಳೆಯ ಫೇಂ ಸಂಪಾದಿಸಿಕೊಂಡರು. ಹನಿರೋಜ್ ಈ ಸಿನೆಮಾದಲ್ಲಿ ಪ್ರಾಧಾನ್ಯತೆಯಿರುವಂತಹ ಪಾತ್ರದಲ್ಲಿ ನಟಿಸಿದ್ದರು. ಆಕೆಯ ಅಭಿನಯಕ್ಕೆ ಅಭಿಮಾನಿಗಳು ಪುಲ್ ಮಾರ್ಕ್ಸ್ ನೀಡಿದ್ದಾರೆ.  ಈ ಸಿನೆಮಾದ ಬಳಿಕ ಹನಿರೋಜ್ ಓವರ್‍ ನೈಟ್ ಸ್ಟಾರ್‍ ಆದರು ಎಂದರೇ ತಪ್ಪಾಗಲಾರದು. ಆಕೆಗೆ  ಅನೇಕ ಆಫರ್‍ ಗಳು ಸಹ ಹರಿದುಬರುತ್ತಿವೆ. ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ಸಿನೆಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಹನಿರೋಜ್ ಬೋಲ್ಡ್ ಕಂಟೆಂಟ್ ಇರುವಂತಹ ಸಿನೆಮಾ ಒಂದರಲ್ಲಿ ನಟಿಸಿದ್ದಾರೆ. ಇದೀಗ ಈ ಸಿನೆಮಾದ ಪೋಸ್ಟರ್‍ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡುತ್ತಿದೆ.

ವೀರಾಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ಬೋಲ್ಡ್ ಕಂಟೆಂಟ್ ಇರುವಂತಹ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಇದೀಗ ಬಿಡುಗಡೆಯಾಗಿದೆ. ರಾಚೆಲ್ ಎಂಬ ಸಿನೆಮಾದಲ್ಲಿ ಹನಿರೋಕ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಾಣಲಿದೆ. ತಮಿಳು ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ತೆರೆಕಾಣಲಿದೆ. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಇದೀಗ ರಿಲೀಸ್ ಆಗಿದ್ದು, ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಮೇಲೆ ಸೆರಗು ಇಲ್ಲದೇ ಕೇವಲ ಬ್ಲೌಜ್ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದನದ ಮಾಂಸ ಮಾರುವ ಮಹಿಳೆಯಾಗಿ ರಗಡ್ ಲುಕ್ಸ್ ಕೊಟ್ಟಿದ್ದಾರೆ. ಕೈಯಲ್ಲಿ ಕತ್ತಿಯನ್ನು ಹಿಡಿದು ಮಾಂಸ ಕಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕೆ ಸುತ್ತಲೂ ಕೋಣಗಳ ತಲೆಗಳು ನೇತಾಡುತ್ತಿರುತ್ತವೆ. ಕ್ರೈಂ ಥ್ರಿಲ್ಲರ್‍ ಆಗಿ ಈ ಸಿನೆಮಾ ಸೆಟ್ಟೇರಿದ್ದು, ಫಸ್ಟ್ ಲುಕ್ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಇನ್ನೂ ಹನಿರೋಜ್ ಏಕೆ ಅಂತಹ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ದನಗಳ ಮಾಂಸದ ಅಂಗಡಿಯಲ್ಲಿ ಆಕೆಯನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಜೊತೆಗೆ ಈ ಸಿನೆಮಾ ಕೂಡಲೇ ಬ್ಯಾನ್ ಮಾಡಬೇಕೆಂಬ ಕೂಗುಗಳೂ ಸಹ ಕೇಳಿಬರುತ್ತಿವೆ. ಸಿನೆಮಾ ಬಿಡುಗಡೆಗೂ ಮುಂಚೆಯೇ ಭಾರಿ ವಿರೋಧ ಎದುರಾಗುತ್ತಿದೆ. ಸಿನೆಮಾ ಬಿಡುಗಡೆ ಸಮಯದಲ್ಲಿ ಯಾವ ರೀತಿಯಲ್ಲಿ ವಿವಾದಗಳನ್ನು ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.